
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮನೆಗಳುವು ಹಾಗೂ ಮೋಟಾರ್ ಸೈಕಲ್ ಸ್ಪೇರ್ ಪಾರ್ಟ್ಸ್ ಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ನಿಪ್ಪಾಣಿ ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು 27 ವರ್ಷದ ನಿಹಾಲ ಅಸ್ಲಾಂ ಬಾಲೇಖಾನ ಹಾಗೂ 47 ವರ್ಷದ ರಮೀಜಾ ದಸ್ತಗೀರ ಮಲ್ಲೋಡಿ ಎಂದು ಗುರುತಿಸಲಾಗಿದೆ. ಬಂಧಿತರಿಂದ ಒಂದು ಕಾರು, ಬೈಕ್ ಸ್ಪೇರ್ ಪಾರ್ಟ್ಸ್, ಅಪಾರ ಪ್ರಮಾಣದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದು, ಒಟ್ಟು 4,13,೦೦೦ ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಬೆಳಗಾವಿ ಎಸ್.ಪಿ. ಲಕ್ಷ್ಮಣ ನಿಂಬರಗಿ ಹಾಗೂ ಹೆಚ್ಚುವರಿ ಎಸ್ ಪಿ ಮಹಾನಂದ ನಂದಗಾಂವಿ ಮಾರ್ಗದರ್ಶನದಲ್ಲಿ ಚಿಕ್ಕೋಡಿ ಡಿಎಸ್ ಪಿ ಬಸವರಾಜ್ ಯಲಿಗಾರ ಅವರ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಖತರ್ನಾಕ್ ಆರೋಪಿಗಳನ್ನು ಬಂಧಿಸಿದ್ದಾರೆ.
ನಿಪ್ಪಾಣಿ ಸಿಪಿಐ ಸಂಗಮೇಶ ಶಿವಯೋಗಿ, ಪಿಎಸ್ ಐ ಕೃಷ್ಣವೇಣಿ, ಎ ಎಸ್ ಐ ಎಂ.ಜಿ.ಮುಜಾವರ, ಹೆಚ್ ಸಿ ಆರ್.ಜಿ.ದಿವಟೆ, ಎಂ.ಬಿ.ಕಲ್ಯಾಣಿ, ಪಿ.ಎಂ.ಗಸ್ತಿ, ಸಿಪಿಐ ಎಂ.ಬಿಬೋಯಿ, ವಿ.ಎಸ್.ಅಸೋದೆ, ಎಸ್.ಜಿ ಮುಲ್ಲಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಬೆಳಗಾವಿ: ನೂಪುರ್ ಶರ್ಮಾ ಬಂಧನಕ್ಕೆ ಆಗ್ರಹಿಸಿ ಎಸ್ ಡಿ ಪಿಐ ನಿಂದ ಭುಗಿಲೆದ್ದ ಪ್ರತಿಭಟನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ