Belagavi NewsBelgaum News

*ಬೆಳಗಾವಿ: ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು*

ಪ್ರಗತಿವಾಹಿನಿ ಸುದ್ದಿ: ದೀಪಾವಳಿ ಹಬ್ಬ ಮುಗಿಯುತ್ತಿದ್ದಂತೆ ಬೆಳಗಾವಿ ಜಿಲ್ಲೆಯಲ್ಲಿ ಯುವಕನೊಬ್ಬರ ಬರ್ಬರ ಹತ್ಯೆಯಾಗಿದೆ. ದುಶ್ಕರ್ಮಿಗಳು ಮಾರಕಾಸ್ತ್ರಗಳಿಂದ ಹೊಡೆದು ಯುವಕನನ್ನು ಕೊಲೆಗೈದಿರುವ ಘಟನೆ ಬೈಲಹೊಂಗಲದ ಆಶ್ರಯ ಕಾಲೋನಿ ಶಾಲಾ ಮೈದಾನದ ಬಳಿ ನಡೆದಿದೆ.

23 ವರ್ಷದ ರವಿ ತಿಮ್ಮಣ್ಣ ಕೊಲೆಯಾಗಿರುವ ಯುವಕ. ಹಳೇ ದ್ವೇಷಕ್ಕೆ ಈ ಕೊಲೆ ಮಡಿರುವ ಶಂಕೆ ವ್ಯಕ್ತವಾಗಿದೆ.

ನಿನ್ನೆ ರಾತ್ರಿ 13 ಜನರ ದುಷ್ಕರ್ಮಿಗಳ ತಂಡ ಯುವಕನ ಮೇಲೆ ದಾಳಿ ನಡೆಸಿ ಬೀಯರ್ ಬಾಟಲ್ ಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಮಾರಕಾಸ್ತ್ರಗಳಿಂದ ಹೆಲ್ಲೆ ನಡೆಸಿದ್ದು, ಯುವಕ ರಕ್ತದ ಮಡುವಲ್ಲಿ ಪ್ರಜ್ಞೆ ಇಲ್ಲದೇ ಬಿದ್ದಿದ್ದಾನೆ.

ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸುಇರೆಳೆದಿದ್ದಾನೆ. ಘಟನಾ ಸ್ಥಳಕ್ಕೆ ಬೈಲಹೊಂಗಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

Back to top button