Latest

6 ಮಕ್ಕಳನ್ನು ಬಾವಿಗೆ ಎಸೆದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

ಪ್ರಗತಿವಾಹಿನಿ ಸುದ್ದಿ; ಮುಂಬೈ: ಪತಿಯ ಹಿಂಸೆ ತಾಳಲಾರದೇ ಪತ್ನಿಯೋರ್ವಳು ತಾನು ಹೆತ್ತ 6 ಮಕ್ಕಳನ್ನು ಬಾವಿಗೆ ಎಸೆದ ಅಮಾನವೀಯ ಘಟನೆ ಮಹಾರಾಷ್ಟ್ರದ ರಾಯಘಡ ಜಿಲ್ಲೆಯಲ್ಲಿ ನಡೆದಿದೆ.

ಕೌಟುಂಬಿಕ ಕಲಹಕ್ಕೆ ಬೇಸತ್ತ ತಾಯಿ ತನ್ನ ಐವರು ಹೆಣ್ಣು ಮಕ್ಕಳು, ಓರ್ವ ಮಗನನ್ನು ಬಾವಿಗೆ ಎಸೆದಿದ್ದಾಳೆ. ನೀರಿನಿಂದ ಮೇಲೆ ಬರಲಾಗದೇ 6 ಮಕ್ಕಳು ಮೃತಪಟ್ಟಿದ್ದಾರೆ.

Home add -Advt

ಮುಂಬೈನಿಂದ ಸುಮಾರು ನೂರು ಕಿ.ಮೀ ದೂರದ ಮಹಾಡ್ ತಾಲೂಕಿನ ಖಾರವಲಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. 30 ವರ್ಷದ ಮಹಿಳೆಗೆ ಆಕೆಯ ಗಂಡನ ಮನೆಯವರು ಹಿಡಿದು ಥಳಿಸುತ್ತಿದ್ದರಲ್ಲದೇ ಚಿತ್ರ ಹಿಂಸೆ ಕೊಡುತ್ತಿದ್ದರು. ಇದರಿಂದ 6 ಮಕ್ಕಳನ್ನು ಬಾವಿಗೆ ಎಸೆದು ತಾನೂ ಬಾವಿಗೆ ಜಿಗಿಯಲು ಯನಿಸಿದ್ದಾಳೆ. ಆದರೆ ಮಹಿಳೆಯನ್ನು ರಕ್ಷಿಸಲಾಗಿದೆ.

ಮಕ್ಕಳನು ಕೊಂದ ಆರೋಪದಲ್ಲಿ ಮಹಿಳೆ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಅಶೋಕ್ ದುಧೆ ತಿಳಿಸಿದ್ದಾರೆ.

ಈಜಲು ಹೋದ ಯುವತಿಯರು ನೀರುಪಾಲು

Related Articles

Back to top button