Kannada NewsKarnataka NewsLatest

*BREAKING: ಪಬ್ ಬಾತ್ ರೂಮ್ ನಲ್ಲಿ ಬ್ಯಾಂಕ್ ಮ್ಯಾನೇಜರ್ ಶವವಾಗಿ ಪತ್ತೆ*

ಪ್ರಗತಿವಾಹಿನಿ ಸುದ್ದಿ: ಪಬ್ ನ ಬಾತ್ ರೂಮ್ ನಲ್ಲಿ ಬ್ಯಾಂಕ್ ಮ್ಯಾನೇಜರ್ ಓರ್ವರು ಶವವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ.

ಮೇಘರಾಜ್ (31) ಮೃತ ದುರ್ದೈವಿ. ಆರ್.ಆರ್.ನಗರದಲ್ಲಿರುವ 1522 ಪಬ್ ನಲ್ಲಿ ಈ ಘಟನೆ ನಡೆದಿದೆ. ಮೂವರು ಸ್ನೇಹಿತರ ಜೊತೆ ಬ್ಯಾಂಕ್ ಮ್ಯಾನೇಜರ್ ಮೇಘರಾಜ್ ನಿನ್ನೆ ರಾತ್ರಿ ಪಬ್ ಗೆ ಬಂದಿದ್ದರು. ರಾತ್ರಿ ಎಲ್ಲರೂ ಕಂಠಪೂರ್ತಿ ಕುಡಿದು ಪಾರ್ಟಿ ಮಾಡಿದ್ದಾರೆ. ಮನೆಗೆ ಹೋಗುವಾಗ ಎಲ್ಲರೂ ಪಬ್ ನಿಂದ ಕೆಳಗೆ ಬಂದಿದ್ದರು. ಈ ವೇಳೆ ಮೇಘರಾಜ್ ಬಾತ್ ರೂಮ್ ಗೆ ಹೋಗಿದ್ದರು. ಬಾತ್ ರೂಮ್ ಗೆ ಹೋದ ಮೇಘರಾಜ್ ಎಷ್ಟು ಹೊತ್ತಾದರೂ ಹೊರಬಂದಿಲ್ಲ. ಈ ವೇಳೆ ಸ್ನೇಹಿತರು ಹಾಗೂ ಪಬ್ ಸಿಬ್ಬಂದಿ ಬಾತ್ ರೂಮ್ ಗೆ ಹೋಗಿ ಪರಿಶೀಲಿಸಿದಾಗ ಮೇಘರಾಜ್ ಮೃತಪಟ್ಟಿದ್ದರು.

ಆರ್.ಆರ್.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button