Kannada News

ಗಳಗಳನೇ ಅತ್ತ ಸವದಿ, ಅಷ್ಟಗಿ; ಪ್ರತಿಭಟನೆಗಿಳಿದ ಬೆನಕೆ ಬೆಂಬಲಿಗರು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಭಾರತೀಯ ಜನತಾ ಪಾರ್ಟಿ ಟಿಕೆಟ್ ಕೈತಪ್ಪುತ್ತಿದ್ದಂತೆ ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಬೆಳವಣಿಗೆಗಳು ನಡೆಯುತ್ತಿವೆ.

ಬೆಳಗಾವಿ ಉತ್ತರ ಕ್ಷೇತ್ರದ ಟಿಕೆಟ್ ಕೈತಪ್ಪಿದ್ದರಿಂದ ಶಾಸಕ ಅಮಿಲ ಬೆನಕೆ ಬೆಂಬಲಿಗರು ಚನ್ನಮ್ಮ ವೃತ್ತದಲ್ಲಿ ಭಾರಿ ಪ್ರತಿಭಟನೆ ನಡೆಸಿದ್ದಾರೆ. ನಾಳೆ ಎಲ್ಲಾ ಬೂತ್ ಮಟ್ಟದ ಪದಾಧಿಕಾರಿಗಳು ರಾಜಿನಾಮೆ ನೀಡುವಾದಿಗ ಬೆದರಿಕೆ ಹಾಕಿದ್ದಾರೆ. ಮರಾಠಾ ಭಾಷಿಕರು ಬೆಳಗಾವಿಯ ಮೂರೂ ಕ್ಷೇತ್ರಗಳಲ್ಲಿ ಬಿಜೆಪಿಗೆ ಮತ ಹಾಕುವುದಿಲ್ಲ ಎಂದೂ ತಿಳಿಸಿದ್ದಾರೆ.

Home add -Advt

ಅಥಮಿಯಲ್ಲಿ ಅಭಿಮಾನಿಗಳ ಸಭೆಯಲ್ಲಿ ಮಾತನಾಡಿದ ಲಕ್ಷ್ಮಣ ಸವದಿ, ನನಗೆ ಬಿಜೆಪಿಯ ರಾಜ್ಯದ ನಾಯಕರು ವಂಚನೆ ಮಾಡಿದ್ದಾರೆ. ಹಾಗಾಗಿ ಮತದಾರರ ಅಭಿಪ್ರಾಯದಂತೆ ನಿರ್ಧಾರ ತೆಗೆದುಕೊಳ್ಳುವೆ ಎಂದು ತಿಳಿಸಿದರು. ಈ ವೇಳೆ ಅವರು ಗಳಗಳನೆ ಅತ್ತು ಬಿಟ್ಟರು.

ಯಮಕನಮರಡಿ ಟಿಕೆಟ್ ಆಕಾಂಕ್ಷಿಾಗಿದ್ದ ಮಾರುತಿ ಅಷ್ಟಗಿ ಸಾಮಾಜಿಕ ಜಾಲತಾಣದಲ್ಲಿ ವಿಡೀಯೋ ಮಾಡಿ ಹಾಕಿದ್ದು, ಬುಧವಾರ ಅಭಿಮಾನಿಗಳ ಸಭೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಈ ವೇಳೆ ಗಳಗಳನೆ ಅವರು ಅತ್ತಿದ್ದಾರೆ. ಸತ್ಯ ಸೋತಿದೆ, ಕುತಂತ್ರ ಗೆದ್ದಿದೆ ಎಂದೂ ಅವರು ಪೋಸ್ಟ್ ಹಾಕಿದ್ದಾರೆ.

https://pragati.taskdun.com/vidhanasabha-electiinbjp-candidate-listrelease/

Related Articles

Back to top button