*ಬೈಕ್ ರೇಸಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆ ವೇಳೆ ಅಪಘಾತ; 13 ವರ್ಷದ ಬಾಲಕ ದುರ್ಮರಣ*


ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೈಕ್ ರೇಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಬೆಂಗಳೂರು ಮೂಲದ 13 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ನಡೆದಿದೆ.
13 ವರ್ಷದ ಶ್ರೇಯಸ್ ಮೃತ ಬಾಲಕ. ಮದ್ರಾಸ್ ಇಂಟರ್ ನ್ಯಾಷನಲ್ ಸರ್ಕ್ಯೂಟ್ ನಲ್ಲಿ ನಡೆದ ಇಂಡಿಯನ್ ನ್ಯಾಷನಲ್ ಮೋಟರ್ ಸೈಕಲ್ ರೇಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಶ್ರೇಯಸ್ ಭಾಗವಹಿಸಿದ್ದ. ಬೈಕ್ ರೇಸಿಂಗ್ ವೇಳೆ ತಿರುವಿನಲ್ಲಿ ನಿಯಂತ್ರಣ ತಪ್ಪಿ ಬಿದ್ದಿದ್ದಾನೆ. ಈ ವೇಳೆ ಆತ ಧರಿಸಿದ್ದ ಹೆಲ್ಮೆಟ್ ಕಳಚಿಬಿದ್ದಿದೆ. ಶ್ರೇಯಸ್ ತಲೆಗೆ ಗಂಭೀರವಾದ ಪೆಟ್ಟು ಬಿದ್ದಿದೆ. ಅಷ್ಟರಲ್ಲೇ ಹಿಂದಿನಿಂದ ಬಂದ ಇನ್ನೋರ್ವ ಸ್ಪರ್ಧಿಯ ಬೈಕ್ ಶ್ರೇಯಸ್ ಮೇಲೆ ಹರಿದು ಹೋಗಿದೆ.
ತಕ್ಷಣ ಸ್ಪರ್ಧೆ ಸ್ಥಗಿತಗೊಳಿಸಿ ಶ್ರೇಯಸ್ ನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲೇ ಶ್ರೇಯಸ್ ಮೃತಪಟ್ಟಿದ್ದ.

ಶ್ರೇಯಸ್ ಬೆಂಗಳೂರಿನ ಕೆನ್ಸ್ರಿ ಶಾಲೆಯ ವಿದ್ಯಾರ್ಥಿಯಾಗಿದ್ದು, ಚಿಕ್ಕಂದಿನಲ್ಲೇ ಬೈಕ್ ರೇಸ್ ನಲ್ಲಿ ಅತೀವ ಆಸಕ್ತಿ ಹೊಂದಿದ್ದ. ಪೆಟ್ರೋನಾಸ್ ನ ರೂಕಿ ವಿಭಾಗದಲ್ಲಿ ಸ್ಪರ್ಧಿಸಿ ರಾಷ್ಟ್ರಮಟ್ಟ ಸೇರಿದಂತೆ ನಾಲ್ಕು ಬಾರಿ ರೇಸ್ ನಲ್ಲಿ ಗೆದ್ದಿದ್ದ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ