Latest

ಲಾರಿ-ಬೈಕ್ ನಡುವೆ ಭೀಕರ ಅಪಘಾತ; ದಂಪತಿ ಸ್ಥಳದಲ್ಲೇ ದುರ್ಮರಣ

ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಬೈಕ್ ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕಲ್ಲಾಪು ಬಳಿ ನಡೆದಿದೆ.

ಗಂಗಾಧರ್ (48) ಹಾಗೂ ಪತ್ನಿ ನೇತ್ರಾವತಿ (45) ಮೃತ ದಂಪತಿಗಳು. ಗಂಗಾಧರ್ ಹಾಗೂ ಪತ್ನಿ ನೇತ್ರಾವತಿ ಇಬ್ಬರು ಮಕ್ಕಳೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದರು. ಕಲ್ಲಾಪು ಬಳಿ ವೇಗವಾಗಿ ಬಂದ್ ಲಾರಿ ಬೈಕ್ ಗೆ ಡಿಕ್ಕಿ ಹೊಡೆದಿದೆ. ಪತಿ-ಪತ್ನಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Home add -Advt

ಗಂಗಾಧರ್ ಹಾಗು ನೇತ್ರಾವತಿ ಮಗ ಮೋಕ್ಷ ಹಾಗೂ ನೇತ್ರಾವತಿಯ ಸಹೋದರಿಯ ಮಗ ಜ್ಞಾನೇಶ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳು ಮಕ್ಕಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನೇಣು ಬಿಗಿದ ಸ್ಥಿತಿಯಲ್ಲಿ ಖ್ಯಾತ ವೈದ್ಯೆಯ ಸೊಸೆ ಶವ ಪತ್ತೆ

https://pragati.taskdun.com/latest/shivamogganavyashreesuicidedr-jayashreedaughter-in-law/

Related Articles

Back to top button