Latest

ಬೆಂಗಳೂರು: ಬಿಜೆಪಿ ಮುಖಂಡನ ಹತ್ಯೆಗೆ ಯತ್ನ; ಇಬ್ಬರು ಇಂಜಿನಿಯರ್ ಗಳು ಸಸ್ಪೆಂಡ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಿಜೆಪಿ ಮುಖಂಡ ಓಂಕಾರೇಶ್ವರ ಎಂಬುವವರ ಹತ್ಯೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಇಂಜಿನಿಯರ್ ಗಳನ್ನು ಅಮಾನತಿಗೊಳಿಸಿ ಆದೇಶ ಹೊರಡಿಸಲಾಗಿದೆ.

ಏಪ್ರಿಲ್ 12ರಂದು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ವ್ಯಾಪ್ತಿಯಲ್ಲಿ ತುಮಕೂರು ಜಿಲ್ಲಾ ಬಿಜೆಪಿ ಎಸ್ ಸಿ ಮೋರ್ಚಾ ಅಧ್ಯಕ್ಷ ಓಂಕಾರೇಶ್ವರ ಅವರ ಮೇಲೆ ಕಾರು ಹತ್ತಿಸಿ ಕೊಲ್ಲಲು ಯತ್ನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಬೆಂಗಳೂರಿನ ಕೆ.ಆರ್.ವೃತ್ತದ ಪಿಡಬ್ಲುಡಿಯ ಪಿಆರ್ ಎ ಎಂಸಿ ವಿಭಾಗದ ಇಂಜಿನಿಯರ್ ಎಂ.ಅಶ್ವಿನಿ ಹಾಗೂ ತುಮಕೂರು ಲೋಕೋಪಯೋಗಿ ವೃತ್ತದ ಎಇ ಶಂಬುಕುಮಾರ್ ಅವರನ್ನು ಬಂಧಿಸಿದ್ದರು.

Home add -Advt

ಇದೀಗ ಪ್ರಕರಣ ಸಂಬಂಧ ಇಬ್ಬರು ಇಂಜಿನಿಯರ್ ಗಳನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಶ್ರೀಶೈಲದಲ್ಲಿ ಮತ್ತೆ ಕನ್ನಡಿಗರ ಮೇಲೆ ಹಲ್ಲೆ; KSRTC ಬಸ್ ಚಾಲಕ, ನಿರ್ವಾಹಕನಿಗೆ ಗಂಭೀರ ಗಾಯ

Related Articles

Back to top button