Latest

ಬಿಜೆಪಿ ಶಾಸಕರಿಂದ ಕಿರುಕುಳ, ದಬ್ಬಾಳಿಕೆ; ನಾಲ್ವರಿಂದ ಆತ್ಮಹತ್ಯೆಗೆ ಯತ್ನ

ಪ್ರಗತಿವಾಹಿನಿ ಸುದ್ದಿ; ಹಾವೇರಿ: ಬಿಜೆಪಿ ಶಾಸಕ ನೆಹರು ಓಲೇಕಾರ್ ಕುಟುಂಬದ ವಿರುದ್ಧ ದಬ್ಬಾಳಿಕೆ, ದೌರ್ಜನ್ಯದ ಆರೋಪ ಕೇಳಿಬದಿದ್ದು, ಕುಟುಂಬದವೊಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲುಕಿನ ಶಿಡೇನೂರು ಗ್ರಾಮದಲ್ಲಿ ನಡೆದಿದೆ.

ಶಾಸಕರ ಕುಟುಂಬದ ಕಿರುಕುಳ ತಾಳಲಾರದೇ ಗ್ರಾಮದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪಾಂಡಪ್ಪ ಲಮಾಣಿ (70), ಗುರುಚಪ್ಪ ಲಮಾಣಿ (72), ಗಂಗವ್ವ ಕನ್ನೂರು (65) ಹಾಗೂ ಹನುಮಂತಪ್ಪ ಬಡಿಗೇರ(41) ವಿಷ ಸೇವಿಸಿ ತೀವ್ರ ಅಸ್ವಸ್ಥಗೊಂದ ನಾಲ್ವರನ್ನು ಬ್ಯಾಡಗಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

Home add -Advt

ಗ್ರಾಮದ 29 ಕುಟುಂಬಗಳು ಅಕ್ರಮ ಸಕ್ರಮ ಸಾಗುವಳಿ ಮಾಡಿದ್ದರು. ಈ ಸಂಬಂಧ ತಲಾ 15 ಗುಂಟೆ ಜಮೀನು ಬಿಟ್ಟುಕೊಡುವಂತೆ ಬಿಜೆಪಿ ಶಾಸಕ ನೆಹರು ಓಲೇಕಾರ ಹಾಗೂ ಮಕ್ಕಳಿಂದ ದಬ್ಬಾಳಿಕೆ ನಡೆಯುತ್ತಿತ್ತು. ಈ ಕುಟುಂಬಗಳಿಗೆ ಕೃಷಿಗೆ ಅವಕಾಶ ನೀಡದಂತೆ ಶಾಸಕರ ಕುಟುಂಬದವರು ಗ್ರಾಮದ ಜನರಿಗೂ ಸೂಚಿಸಿದ್ದರು. ಇದರಿಂದ ನೊಂದ ಕುಟುಂಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದೆ.
ಮತ್ತೆ ಆರಂಭವಾದ ಕೊರೊನಾ ಅಟ್ಟಹಾಸ; 31 ವಿದ್ಯಾರ್ಥಿಗಳಿಗೆ ಸೋಂಕು ದೃಢ

Related Articles

Back to top button