Latest

ನಳಿನ್ ಕುಮಾರ ಕಟೀಲು ಆಡಿಯೋ ಹಿಂದೆ ಕಾಂಗ್ರೆಸ್ ಕೈವಾಡವಂತೆ !

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೆಸರಿನಲ್ಲಿ ಆಡಿಯೋ ಬಹಿರಂಗದಿಂದಾಗಿ ತೀವ್ರ ಮುಜುಗರಕ್ಕೊಳಗಾಗಿರುವ ಬಿಜೆಪಿ ಇದೀಗ ಆಡಿಯೋ ಹಿಂದೆ ಕಾಂಗ್ರೆಸ್ ಕೈವಾಡವಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಣ ಎಂದು ಆರೋಪಿಸಿದೆ.

ಬಿಜೆಪಿ ರಾಜ್ಯಾಧ್ಯಕ್ಷರ ಹೆಸರಿನಲ್ಲಿ ಸೃಷ್ಟಿಯಾದ ನಕಲಿ ಆಡಿಯೋ ಹಿಂದಿರುವ ಹಸ್ತ, ಕಾಂಗ್ರೆಸ್ ಪಕ್ಷದ ಮಹಾನಾಯಕನದ್ದೋ ಅಥವಾ ಮೀರ್ ಸಾದಿಕ್‌ನದ್ದೋ? ಎಂದು ಪ್ರಶ್ನಿಸುವ ಮೂಲಕ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ವಿರುದ್ಧ ಸರಣಿ ಟ್ವೀಟ್ ಮೂಲಕ ಬಿಜೆಪಿ ಕಿಡಿಕಾರಿದೆ.

Home add -Advt

ಮಹಾನಾಯಕನ ಪ್ರಭಾವ ಕಡಿಮೆ ಮಾಡಲು ಮತ್ತು ದೆಹಲಿಯ ಮಹಾನಾಯಕಿಯನ್ನು ಮೆಚ್ಚಿಸಲು ಮೀರ್‌ ಸಾದಿಕ್‌ನಿಂದ ಈ ಆಡಿಯೋ ತಂತ್ರವೇ? ನಕಲಿ ದಾಖಲೆ ಸೃಷ್ಟಿಸುವವರಿಗೆ ಕಾಂಗ್ರೆಸ್ ನಲ್ಲಿ ಉತ್ತಮವಾದ ವೇದಿಕೆ ದೊರೆಯುತ್ತದೆ. ನಕಲಿ ಸಿಡಿ ತಯಾರಿಸಿದ ನರೇಶ್ ಗೌಡನಿಗೆ ತುಮಕೂರಿನಲ್ಲಿ ಕಾಂಗ್ರೆಸ್ ಯುವ ನಾಯಕನ ಪಟ್ಟ ಕಟ್ಟಲಾಗಿದೆ. ಇದೇ ರೀತಿ, ಈ ನಕಲಿ ಆಡಿಯೋ ಜನಕನಿಗೆ ಕಾಂಗ್ರೆಸ್ ಪಕ್ಷ ಭರ್ಜರಿ ಉಡುಗೊರೆ ನೀಡಬಹುದು.

ಹೋರಾಟವಿಲ್ಲದೆ ಹುದ್ದೆ ಬಯಕೆ, ಕದ್ದ ವಾಚು ಧರಿಸಿ ಶೋಕಿ ಮೆರೆಯುವಿಕೆ, ಮಿಮಿಕ್ರಿ ಕಲಾವಿದರ ಮೂಲಕ ನಕಲಿ ಆಡಿಯೋ ತಯಾರಿಕೆ. ಮೀರ್ ಸಾದಿಕ್ ಸೃಷ್ಟಿಸುವ ಕಪಟ ನಾಟಕಗಳು ಒಂದೋ ಎರಡೋ!? ಚಾಮರಾಜಪೇಟೆಯ ಡಕೋಟಾ ಗಾಡಿ ಡ್ರೈವರ್‌ನಂತಹ ಶಿಷ್ಯರಿಗೆ ತಾನು ತಕ್ಕ ಗುರು ಎಂದು ಮೀರ್ ಸಾದಿಕ್ ಸಾಬೀತು ಪಡಿಸಿದ್ದಾರೆ. ನಕಲಿ ಆಡಿಯೋ, ವಿಡಿಯೋ ಸೃಷ್ಟಿಯಲ್ಲಿ ಕರ್ನಾಟಕದ ಮೀರ್ ಸಾದಿಕ್ ಅವರದ್ದು ಎತ್ತಿದ ಕೈ. ಲೋಕಸಭಾ ಚುನಾವಣೆಯ ನಂತರ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಬಿದ್ದು ಹೋಗುತ್ತದೆ ಎಂದು ಪೃಕೃತಿ ಚಿಕಿತ್ಸಾ ಕೇಂದ್ರದಲ್ಲಿ ವಿಡಿಯೋ ತಯಾರಿಸಿ ನಂತರ ಇದು ನಕಲಿ ಎಂದ ಘನ ಇತಿಹಾಸ ಈ ಮೀರ್‌ ಸಾದಿಕ್‌ನದ್ದಾಗಿದೆ ಎಂದು ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದೆ.

ಅಲ್ಲದೇ ಮಹಾನಾಯಕನ ಸುತ್ತ ಐದು ಕಾರ್ಯಾಧ್ಯಕ್ಷರ ನೇಮಕವಾಗುವಂತೆ ನೋಡಿಕೊಂಡಿದ್ದು ಮೀರ್ ಸಾದಿಕ್‌ನ ತಂತ್ರದ ಒಂದು ಭಾಗ. ಕಾರ್ಯಕರ್ತರಿಗೆ ಕಪಾಳ ಮೋಕ್ಷ ಮಾಡುವುದರಲ್ಲೇ ನೆಮ್ಮದಿ ಕಾಣುತ್ತಿರುವ ಮಹಾನಾಯಕನಿಗೆ ಉಡಿಯಲ್ಲಿ ಮೀರ್‌ ಸಾದಿಕ್‌ನಂತಹ ಕೆಂಡ ಕಟ್ಟಿಕೊಂಡಿರುವ ಬಗ್ಗೆ ಅರಿವಿಲ್ಲ ಎಂದು ಕುಟುಕಿದೆ.
ಬದಲಾವಣೆ ವಾಣಿಗಾಗಿ ಕಾಯುತ್ತಿದ್ದೇವೆ ಎಂದ ಸತೀಶ್ ಜಾರಕಿಹೊಳಿ

Related Articles

Back to top button