Kannada NewsKarnataka NewsLatest

*BREAKING: ಕಂಟೈನರ್ ಹರಿದು ನಾಲ್ಕು ವರ್ಷದ ಮಗು ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಕಂಟೈನರ್ ಹರಿದು ನಾಲ್ಕು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಉತ್ತರ ತಾಲೂಕಿನ ಹನುಮಂತೇಗೌಡ ಪಾಳ್ಯದಲ್ಲಿ ಈ ಘಟನೆ ನಡೆದಿದೆ. ನಿಶಿಕಾ ಮೃತ ಮಗು. ಯುಗಾದಿ ಹಬ್ಬ ಮುಗಿಸಿ ದೇವರ ದರ್ಶನಕ್ಕೆಂದು ತಾಯಿ ಮಗಳು ತೆರಳುತ್ತಿದ್ದರು. ಮಗುವನ್ನು ಕೈಯಲ್ಲಿ ಹಿಡಿದುಕೊಂಡು ತಾಯಿ ಹೋಗುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಕಂಟೈನರ್ ಮಗುವಿಗೆ ಡಿಕ್ಕಿ ಹೊಡೆದಿದೆ.

Related Articles
Home add -Advt

ಡಿಕ್ಕಿ ರಭಸಕ್ಕೆ ಕೆಳಗೆ ಬಿದ್ದ ಮಗುವಿನ ಮೇಲೆಯೇ ಕಂಟೈನರ್ ಲಾರಿ ಹರಿದು ಹೋಗಿದೆ. ಹೆತ್ತ ತಾಯಿಯ ಕಣ್ಮುಂದೆಯೇ ಮಗು ಸಾವನ್ನಪ್ಪಿದೆ. ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Related Articles

Back to top button