Belagavi NewsBelgaum NewsCrimeKannada NewsKarnataka NewsNational

*ಅಬಕಾರಿ ದಾಳಿ: 97,400 ರೂ. ಮೌಲ್ಯದ ಕಳ್ಳಭಟ್ಟಿ ನಾಶ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ತಾಲೂಕಿನ ಹುಲ್ಯಾನೂರ ಅರಣ್ಯ ಪ್ರದೇಶದಲ್ಲಿ ಆಗಸ್ಟ್ 31 ರಂದು ಸಂಜೆ 5 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಸಾಮೂಹಿಕ ಅಬಕಾರಿ ದಾಳಿ ಮಾಡಿ ಕಳ್ಳಭಟ್ಟಿ ಸರಾಯಿ ತಯಾರಿಕೆಗೆ ಬಳಸುವ 22 ಪ್ಲಾಸ್ಟಿಕ್ ಬ್ಯಾರಲಗಳಲ್ಲಿ ಒಟ್ಟು 770.ಲೀ ಬೆಲ್ಲದ ರಸಾಯನ ಮತ್ತು 20 ಪ್ಲಾಸ್ಟಿಕ್ ಚೀಲಗಳಲ್ಲಿ 400 ಕೆ.ಜಿ ಕೊಳೆತ ಬೆಲ್ಲವನ್ನು ಸಂಗ್ರಹಿಸಿಟ್ಟಿದ್ದು ಸಿಕ್ಕಿರುತ್ತದೆ.

ಈ ಕುರಿತು ಕಬ್ಬಿನ ಹೊಲದ ಮಾಲೀಕ ಮತ್ತು ಅರಣ್ಯ ಪ್ರದೇಶದ ಮೇಲೆ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದು. ಸದರಿ ದಾಳಿಯನ್ನು ವೈ ಮಂಜುನಾಥ ಅಬಕಾರಿ ಅಪರ ಆಯುಕ್ತರು ಎಫ್.ಎಚ್.ಚಲವಾದಿ ಅಬಕಾರಿ ಜಂಟಿ ಆಯುಕ್ತರು, (ಜಾಷಿತ) ಬೆಳಗಾವಿ ವಿಭಾಗ, ಬೆಳಗಾವಿರವರ ನಿರ್ದೇಶನದಂತೆ ಹಾಗೂ ಜಗಧೀಶ ಎನ್.ಕೆ ಅಬಕಾರಿ ಉಪ ಆಯುಕ್ತರು, ಬೆಳಗಾವಿ (ದಕ್ಷಿಣ) ಜಿಲ್ಲೆ, ಬೆಳಗಾವಿರವರ ಮಾರ್ಗದರ್ಶನದಲ್ಲಿ ಮತ್ತು ರವಿ ಎಂ ಮುರಗೋಡ, ಅಬಕಾರಿ ಉಪ ಅಧೀಕ್ಷಕರು ಬೆಳಗಾವಿ ಉಪ ವಿಭಾಗ, ಬೆಳಗಾವಿರವರ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕರ ಗುಂಪು ದಾಳಿ ಮಾಡಿತ್ತು.

Home add -Advt

ಸದರಿ ಎರಡು ಪ್ರಕರಣಗಳನ್ನು ವಿವೇಕಾನಂದ ಮಂಕಾಳೆ, ಅಬಕಾರಿ ಉಪ ನಿರೀಕ್ಷಕರು ಹಾಗೂ ಕೌಸರಬಿ ಅಬಕಾರಿ ಉಪ ನಿರೀಕ್ಷಕರು ದಾಖಲಿಸಿಕೊಂಡಿರುತ್ತಾರೆ. ಸದರ ಗುನ್ನೆಯಲ್ಲಿ ಜಪ್ತುಪಡಿಸಿದ ಮುದ್ದೇಮಾಲಿನ ಒಟ್ಟು ಮೌಲ್ಯ ರೂ: 97,400 ರೂ. ಗಳು ಆಗಿರುತ್ತದೆ ಎಂದು ಅಬಕಾರಿ ಉಪ ಅಧೀಕ್ಷಕರು (ಜಾರಿ ಮತ್ತು ತನಿಖೆ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button