Kannada NewsLatest

ಗುಡ್ಡದಿಂದ ಉರುಳಿ ಬಂದು ಕಾರುಗಳಿಗೆ ಅಪ್ಪಳಿಸಿದ ಬಂಡೆ; ಇಬ್ಬರ ಸಾವು

ಪ್ರಗತಿವಾಹಿನಿ ಸುದ್ದಿ, ಕೋಹಿಮಾ: ವ್ಯಾಪಕ ಮಳೆಗೆ ಗುಡ್ಡ ಕುಸಿತದಿಂದ ಬಂಡೆಗಳು ಜಾರಿ ಚಲಿಸುತ್ತಿದ್ದ ಕಾರುಗಳ ಮೇಲೆ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ.

ದುಮಾಪುರ ಜಿಲ್ಲೆಯ ಚುಮುಕೆಡಿಮಾ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಗುಡ್ಡದಿಂದ ಉರುಳುತ್ತ ಬಂದ ಬಂಡೆಗಳು ಕೆಳಗೆ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರುಗಳಿಗೆ ಬಂದು ಅಪ್ಪಳಿಸಿದವು. ಪರಿಣಾಮ ಕಾರುಗಳು ನುಜ್ಜುಗುಜ್ಜಾದವು.

Home add -Advt

ಮೊದಲು ಉರುಳಿದ ಬಂಡೆ ಬಂದು ಬಡಿದ ಕಾರಿನಲ್ಲಿದ್ದ ಇಬ್ಬರು ಗಂಭೀರ ಗಾಯಗೊಂಡು ಮೃತಪಟ್ಟರು. ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದು ಅದರಲ್ಲಿದ್ದ ಮೂವರು ಗಾಯಗೊಂಡರು.

ಇದೇ ರಸ್ತೆಯಲ್ಲಿ ನಿಂತಿದ್ದ ಇನ್ನೊಂದು ಕಾರಿನಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸುಮಾರು 5 ಸೆಕೆಂಡ್ ಗಳ ವಿಡಿಯೊ ಚಿತ್ರೀಕರಣ ದಾಖಲಾಗಿದ್ದು ಈಗ ವೈರಲ್ ಆಗಿದೆ.

Related Articles

Back to top button