Kannada NewsLatest

*ಮತ್ತೆ ಬೆಳಗಾವಿಗೆ ಬರುವುದಾಗಿ ಹೇಳಿಕೆ ನೀಡಿದ ಮಹಾರಾಷ್ಟ್ರ ಸಚಿವ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಬೆನ್ನಲ್ಲೇ ಎಂಇಎಸ್ ಭಾಷಾದ್ವೇಷದ ಕಿಚ್ಚು ಹಚ್ಚಿಸುತ್ತಿದ್ದು, ಇದಕ್ಕೆ ಮಹಾರಾಷ್ಟ್ರ ಸಚಿವರು ಇನ್ನಷ್ಟು ಬೆಂಬಲ ನೀಡುತ್ತಿದ್ದಾರೆ.

ಬೆಳಗಾವಿಗೆ ಬರುವಂತೆ ಎಂಇಎಸ್ ಮಹಾರಾಷ್ಟ್ರ ಸಚಿವರನ್ನು ಆಹ್ವಾನಿಸಿದ್ದು, ಇದಕ್ಕೆ ಮಹಾ ಸಚಿವರು ಆಶ್ವಾನೆ ನೀಡಿದ್ದಾರೆ. ಗಡಿ ಉಸ್ತುವಾರಿ ಸಚಿವ ಶಂಭುರಾಜ್, ಬೆಳಗಾವಿಯಲ್ಲಿ ಆಯೋಜಿಸಿರಿವ ಮಹಾಮೇಳಾವ್ ಗೆ ಬರುವುದಾಗಿ ಎಂಇಎಸ್ ಮನವಿಗೆ ಆಶ್ವಾನೆ ನೀಡಿದ್ದಾರೆ.

Home add -Advt

ಅಲ್ಲದೇ ನಿನ್ನೆ ಬೆಳಗಾವಿ ಗಡಿಗೆ ಹೊಂದಿಕೊಂಡಿದ್ದ ಶಿನ್ನೊಳ್ಳಿ ಗ್ರಾಮಕ್ಕೆ ಗ್ರಾಮ ಪಂಚಾಯತ್ ಚುನಾವಣಾ ಪ್ರಚಾರಕ್ಕೆ ಸಚಿವ ಶಂಭುರಾಜ್ ದೇಸಾಯಿ ಆಗಮಿಸಿದ್ದರು. ಈ ವೇಳೆ ಎಂಇಎಸ್ ಸಚಿವರಿಗೆ ಮನವಿ ಮಾಡಿದೆ. ನಾಗ್ಪುರ ಅಧಿವೇಶನ ಮುಗಿಸಿ ಬೆಳಗಾವಿಗೆ ಬರುವುದಾಗಿ ಸಚಿವರು ತಿಳಿಸಿದ್ದಾರೆ.

ಅಲ್ಲದೇ ಬೆಳಗಾವಿ, ಕಾರವಾರ, ನಿಪ್ಪಾಣಿ, ಭಾಲ್ಕಿ, ಖಾನಾಪುರಗಳನ್ನು ಸಂಯುಕ್ತ ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ನಾಡದ್ರೋಹಿ ಎಂಇಎಸ್ ಘೋಷಣೆ ಕೂಗಿದೆ.

*ಅನ್ನಭಾಗ್ಯ ಅಕ್ಕಿ ಮೋದಿಯವರದ್ದು, ಚೀಲ ಮಾತ್ರ ಕಾಂಗ್ರೆಸ್ ನದ್ದು; ಸಿದ್ದರಾಮಯ್ಯ ವಿರುದ್ಧ ಸಿಎಂ ವಾಗ್ದಾಳಿ*

https://pragati.taskdun.com/mandyabjp-janasankalpa-yatrecm-basavaraj-bommai/

Related Articles

Back to top button