ಪ್ರಗತಿವಾಹಿನಿ ಸುದ್ದಿ; ಮಥುರಾ: ಉದ್ಯಮಿಯೊಬ್ಬ ಪತ್ನಿ ಹಾಗೂ ಮಗನನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿರುವ ಘೋರ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ.
ಮೀರಾ ಮತ್ತು ಮಗ ಅನ್ಮೋಲ್ (11) ಹತ್ಯೆಯಾದ ದುರ್ದೈವಿಗಳು. ನೀರಜ್ ಗೋಯಲ್ ಪತ್ನಿ ಹಾಗೂ ಮಗನನ್ನು ಕೊಂದ ಉದ್ಯಮಿ
ಉದ್ಯಮಿ ನೀರಜ್ ಗೋಯಲ್ ಮೀರಾ ಅವರನ್ನು ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಮೀರಾಗೆ ಇದು ಮೂರನೇ ಮದುವೆಯಾಗಿದ್ದು, ಅನ್ಮೋಲ್ ಮೀರಾಳ ಮೊದಲ ಪತಿಯ ಮಗನಾಗಿದ್ದ. ಕೆಲ ದಿನಗಳಿಂದ ನೀರಜ್ ಹಾಗೂ ಮೀರಾ ನಡುವೆ ಕೆಲ ವಿಚಾರಕ್ಕೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಇದೀಗ ನೀರಜ್ ತನ್ನ ಪತ್ನಿ ಮೀರಾ ಹಾಗೂ ಆಕೆಯ ಮಗನನ್ನೇ ಹತ್ಯೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ