Latest

ಇಬ್ರಾಹಿಂ ಸಿಎಂ ಆಗಲು ನನ್ನ ಬೆಂಬಲವಿದೆ ಎಂದ ಸಿ.ಟಿ ರವಿ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಅಭ್ಯರ್ಥಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ, ನನ್ನ ಬೆಂಬಲ ಸಿ.ಎಂ.ಇಬ್ರಾಹಿಂ ಅವರಿಗೆ. ಇಬ್ರಾಹಿಂ ಸಿಎಂ ಆಗಬೇಕು ಎಂಬ ಹೇಳಿಕೆಯಲ್ಲಿ ನ್ಯಾಯವಿದೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಕಾಂಗ್ರೆಸ್ ನಲ್ಲಿ ಸಿಎಂ ಅಭ್ಯರ್ಥಿ ಕುರಿತ ಹೇಳಿಕೆಗಳನ್ನು ಗಮನಿಸಿದ್ದೇನೆ. ಬಿಜೆಪಿಗೆ ಬಹುಮತವಿದ್ದು, ಯಡಿಯೂರಪ್ಪನವರು ಸಿಎಂ ಆಗಿರುವಾಗ ಬಹುಮತವಿಲ್ಲದಿದ್ದರೂ ಕಾಂಗ್ರೆಸ್ ನ ಹಲವರು ಸಿಎಂ ಆಗಲು ಕನಸು ಕಾಣುತ್ತಿದ್ದಾರೆ. ಈ ನಡುವೆ ಎಂಎಲ್ ಸಿ ಇಬ್ರಾಹಿಂ ಹೇಳಿಕೆ ಗಮನಿಸಿದ್ದೇನೆ. ಇಬ್ರಾಹಿಂ ಸಿಎಂ ಆಗಬೇಕೆಂಬ ಹೇಳಿಕೆಯಲ್ಲಿ ನ್ಯಾಯ ಇದೆ. ನನ್ನ ಬೆಂಬಲವೂ ಇಬ್ರಾಹಿಂ ಅವರಿಗಿದೆ ಎಂದರು.

Home add -Advt

ಕಾಂಗ್ರೆಸ್ ಗೆ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಇದ್ದರೆ ಇಬ್ರಾಹಿಂ ಅವರನ್ನು ಸಿಎಂ ಮಾಡಲಿ. ಅಲ್ಪಸಂಖ್ಯಾತರ ಮೊಣಕೈಗೆ ತುಪ್ಪಸವರುವ ಕೆಲಸ ಬೇಡ. ಅವರ ಹೆಸರಲ್ಲೇ ಸಿ.ಎಂ ಇದೆ ಅದನ್ನು ಅಧಿಕೃತ ಮಾಡಲಿ. ಸಿ.ಎಂ ಇಬ್ರಾಹಿಂ ಅವರನ್ನು ಮುಖ್ಯಮಂತ್ರಿ ಮಾಡಲು ನನ್ನ ಬೆಂಬಲವಿದೆ ಎಂದು ಹೇಳಿದರು.
ರಮೇಶ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜಿನಾಮೆ ಯೋಚನೆ ಹಿಂದೆ ದೊಡ್ಡ ಪ್ಲ್ಯಾನ್?

Related Articles

Back to top button