Latest

ರಮೇಶ್ ಜಾರಕಿಹೊಳಿ ರಕ್ಷಿಸುವ ಪ್ರಶ್ನೆ ಇಲ್ಲ ಎಂದ ಮಾಧುಸ್ವಾಮಿ

ಪ್ರಗತಿವಾಹಿನಿ ಸುದ್ದಿ; ಚಿತ್ರದುರ್ಗ: ಸಚಿವ ಸ್ಥಾನಕ್ಕಾಗಿ ರಮೇಶ್ ಜಾರಕಿಹೊಳಿ ಕಸರತ್ತು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಜೆ.ಸಿ.ಮಾಧುಸ್ವಾಮಿ, ಸಿಡಿ ಕೇಸ್ ನಿಂದ ಮುಕ್ತರಾದರೆ ಅವರು ಸಚಿವರಾಗುತ್ತಾರೆ ಎಂದು ಹೇಳಿದರು.

ಚಿತ್ರದುರ್ಗದಲ್ಲಿ ಮಾತನಾಡಿದ ಮಾಧುಸ್ವಾಮಿ, ಸಿಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿಯನ್ನು ಸರ್ಕಾರದಿಂದ ರಕ್ಷಿಸುವ ಪ್ರಶ್ನೆಯೇ ಇಲ್ಲ. ತನಿಖೆಯಿಂದ ಸತ್ಯಾಸತ್ಯತೆ ಹೊರಬರಲಿದ್ದು, ಕೇಸ್ ನಿಂದ ಮುಕ್ತರಾದರೆ ಸಚಿವರಾಗುತ್ತಾರೆ ಎಂದರು.

ಇನ್ನು ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಅಭ್ಯರ್ಥಿ ಜಟಾಪಟಿ ವಿಚಾರವಾಗಿ ಮಾತನಾಡಿದ ಸಚಿವರು, ರಾಜಕೀಯದಲ್ಲಿ ಏನಾಗುತ್ತೆ ಎಂಬುದು ಯಾರಿಗೆ ಗೊತ್ತು? ಕುಮಾರಸ್ವಾಮಿ ಸಿಎಂ ಆಗುತ್ತಾರೆ ಎಂಬುದು ಯಾರಿಗಾದರೂ ತಿಳಿದಿತ್ತಾ? ಹಾಗೆಯೇ ರಾಜಕೀಯ ಎಂದ ಮೇಲೆ ಏನುಬೇಕಾದರೂ ಆಗುತ್ತೆ. ಚುನಾವಣೆಗೂ ಮೊದಲೇ ನಿರ್ಧಾರ ಮಾಡಲು ಸಾಧ್ಯವಿಲ್ಲ ಎಂದರು.
ಇಬ್ರಾಹಿಂ ಸಿಎಂ ಆಗಲು ನನ್ನ ಬೆಂಬಲವಿದೆ ಎಂದ ಸಿ.ಟಿ ರವಿ

Related Articles

Back to top button