ಕಾಂಗ್ರೆಸ್ ನಾಯಕರಿಗೆ ಹಳೆ ಚಡ್ಡಿ ಕಳುಹಿಸಲು ಸಿ.ಟಿ.ರವಿ ಕರೆ; ಅವರು ಇಂತಹ ಕೆಲಸವನ್ನೆ ಮಾಡಿಕೊಂಡಿರಲಿ ಎಂದು ಟಾಂಗ್ ನೀಡಿದ ಬಿಜೆಪಿ ನಾಯಕ

ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ರಾಜ್ಯಾದ್ಯಂತ ಆರ್.ಎಸ್.ಎಸ್ ಚಡ್ಡಿ ಸುಡುವ ಅಭಿಯಾನ ನಡೆಸುವುದಾಗಿ ಹೇಳಿಕೆ ನೀಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕೆಂಡಕಾರಿರುವ ಬಿಜೆಪಿ, ಕಾಂಗ್ರೆಸ್ ನಾಯಕರಿಗೆ ಬಿಸಿ ಮುಟ್ಟಿಸಲು ಮುಂದಾಗಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕಾಂಗ್ರೆಸ್ ನಾಯಕರಿಗೆ ಚಡ್ಡಿಕೊರತೆಯಾಗದಂತೆ ನೋಡಿಕೊಳ್ಳಿ ಎಂದು ಕರೆ, ಆರ್ ಎಸ್ ಎಸ್ ಕಾರ್ಯಕರ್ತರು ಸಿದ್ದರಾಮಯ್ಯನವರಿಗೆ ಚಡ್ಡಿ ಪಾರ್ಸಲ್ ಕಳುಹಿಸಲು ಮುಂದಾಗಿದ್ದಾರೆ.
ಸಿದ್ದರಾಮಯ್ಯ ಹೇಳಿಕೆ ಬೆನ್ನಲ್ಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಪ್ರತಿಭಟನೆ, ಆಕ್ರೋಶ ವ್ಯಕ್ತಪಡಿಸುತ್ತಿರುವ ಬಿಜೆಪಿ ಕಾರ್ಯಕರ್ತರು ಸಿದ್ದರಾಮಯ್ಯಗೆ ಕಳುಹಿಸಲು ಚಡ್ಡಿ ಸಂಗ್ರಹ ಮಾಡಿದ್ದಾರೆ. ಈ ನಡುವೆ ಬಿಜೆಪಿ ನಾಯಕ ಸಿ.ಟಿ.ರವಿ, ‘ಬೆಂಕಿ ಹಚ್ಚೋಕೆ ಕಾಂಗ್ರೆಸ್ ನವರಿಗೆ ಚಡ್ಡಿ ಕೊರತೆಯಾಗದಂತೆ ನೋಡಿಕೊಳ್ಳಿ’, ಅವರು ಇಂತಹ ಕೆಲಸವನ್ನೇ ಮಾಡಿಕೊಂಡಿರಲಿ ಎಂದು ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ.ಟಿ.ರವಿ, ಕಾಂಗ್ರೆಸ್ ನವರಿಗೆ ಚಡ್ಡಿ ಕೊರತೆಯಾಗದಂತೆ ನೋಡಿಕೊಳ್ಳಿ, ಎಲ್ಲರೂ ಹಳೆಯ ಚಡ್ಡಿಗಳನ್ನು ಕಳುಹಿಸಲು ಕರೆ ಕೊಡುತ್ತೇನೆ. ನಿನ್ನೆಯೇ ಈ ಬಗ್ಗೆ ಹೇಳಿದ್ದೇನೆ ಎಂದಿದ್ದಾರೆ.
ಸಿ.ಟಿ.ರವಿ ಕರೆ ನೀಡುತ್ತಿದ್ದಂತೆ ಆರ್.ಎಸ್.ಎಸ್ ಕಾರ್ಯಕರ್ತರು ಸಿದ್ದರಾಮಯ್ಯನವರಿಗೆ ಚಡ್ಡಿ ಪಾರ್ಸಲ್ ಕಳುಹಿಸಲು ಮನೆ ಮನೆಗೆ ತೆರಳಿ ಚಡ್ಡಿ ಸಂಗ್ರಹ ಮಾಡಿದ್ದಾರೆ. ಒಟ್ಟಾರೆ ಕಾಂಗ್ರೆಸ್ ಕಚೇರಿಯಲ್ಲಿ ಚಡ್ಡಿ ರಾಶಿಯೇ ಬಿದ್ದರೂ ಅಚ್ಚರಿಯಿಲ್ಲ.
ಹಿಜಾಬ್ ಗೆ ಹಠ ಮಾಡುವವರು ಪಾಕ್, ಸೌದಿಗೆ ಹೋಗಿ ನೋಡಿ ಗೊತ್ತಾಗುತ್ತೆ; ವಿದ್ಯಾರ್ಥಿಗಳಿಗೆ ಯು.ಟಿ.ಖಾದರ್ ಸಲಹೆ