Kannada NewsKarnataka NewsLatest

*ಸಚಿವ ಸಂಪುಟ ಸಭೆಯ ನಿರ್ಣಯಗಳು*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯ ನಿರ್ಣಯಗಳು ಇಲ್ಲಿವೆ –


ಮಿಶ್ರಾ ವಿರುದ್ಧ ಕ್ರಮಕ್ಕೆ ನಕಾರ
ಕರ್ನಾಟಕ ಲೋಕಾಯುಕ್ತ ಕಾಯ್ದೆ ೧೯೮೪ರ ಕಲಂ ೧೨(೩)ರಡಿ ಸಲ್ಲಿಸಿರುವ ವರದಿಯಲ್ಲಿ ಪ್ರಶಾಂತ ಕುಮಾರ್ ಮಿಶ್ರ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಮಾನ್ವಿ ಇವರ ವಿರುದ್ಧ ಮಾಡಿರುವ ಶಿಫಾರಸ್ಸನ್ನು ಕೈಬಿಡುವ ಬಗ್ಗೆ ಸಚಿವ ಸಂಪುಟ ನಿರ್ಧರಿಸಿದೆ.
ಪ್ರಶಾಂತ್ ಕುಮಾರ್ ಮಿಶ್ರಾ ರವರು ಕೇವಲ ೦೧ ತಿಂಗಳು ೧೮ ದಿನಗಳು ಮಾತ್ರ ತರಬೇತಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದು, ಲೋಕಾಯುಕ್ತರ ಶಿಫಾರಸ್ಸನ್ನು ಕೈಬಿಡಬಹುದಾಗಿದೆ ಎಂದು ಪ್ರಸ್ತಾಪಿಸಲಾಗಿತ್ತು.


ಜಯರಾಮ್ ವಿರುದ್ಧ ಕ್ರಮಕ್ಕೆ ನಕಾರ
ಕರ್ನಾಟಕ ಲೋಕಾಯುಕ್ತ ಕಾಯ್ದೆ, ೧೯೮೪ರ ಕಲಂ ೧೨(೩)ರಡಿ ಸಲ್ಲಿಸಿರುವ ವರದಿಯಲ್ಲಿ ಎನ್ ಜಯರಾಮ್, ಭಾ.ಆ.ಸೇ, ಹಿಂದಿನ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ, ಚಿತ್ರದುರ್ಗ ಜಿಲ್ಲಾ ಪಂಚಾಯತ್, ಚಿತ್ರದುರ್ಗ ಜಿಲ್ಲೆ ಇವರ ವಿರುದ್ಧ ಮಾಡಿರುವ ಶಿಫಾರಸ್ಸನ್ನು ಕೈಬಿಡುವ ಬಗ್ಗೆ ಸಚಿವ ಸಂಪುಟ ನಿರ್ಧರಿಸಿದೆ.
ಎನ್. ಜಯರಾಮ್, ಐಎಎಸ್, ಹಿಂದಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಚಿತ್ರದುರ್ಗ ಜಿಲ್ಲಾ ಪಂಚಾಯತ್, ಚಿತ್ರದುರ್ಗ ರವರು ಯಾವುದೇ ಲೋಪ ಎಸಗಿಲ್ಲವೆಂದು ಸಾಬಿತಾಗಿರುವುದರಿಂದ ಶಿಫಾರಸ್ಸು ಕೈಬಿಡಲು ತೀರ್ಮಾನಿಸಲಾಗಿದೆ.


ಮುತ್ತಯ್ಯ ವಿರುದ್ಧ ಸಿವಿಲ್ ದಾವೆ
ಎಸ್.ಮುತ್ತಯ್ಯ ಐಎಫ್‌ಎಸ್ (ನಿವೃತ್ತ) ಇವರ ವಿರುದ್ಧದ ಇಲಾಖಾ ವಿಚಾರಣೆಯನ್ನು ವಹಿಸುವಂತೆ ಕರ್ನಾಟಕ ಲೋಕಾಯುಕ್ತರು ಕರ್ನಾಟಕ ಲೋಕಾಯುಕ್ತ ಅಧಿನಿಯಮ ೧೯೮೪ರ ಸೆಕ್ಷನ್ ೧೨(೩) ರನ್ವಯ ಮಾಡಿರುವ ಶಿಫಾರಸ್ಸನ್ನು ಕೈ ಬಿಡುವ ಬಗ್ಗೆ ಮತ್ತು ಶ್ರೀ ಎಸ್. ಮುತ್ತಯ್ಯ ಐಎಫ್‌ಎಸ್ (ನಿವೃತ್ತ) ಇವರಿಂದ ಸರ್ಕಾರಕ್ಕೆ ಅಂದಾಜು ರೂ.೨.೪೦ ಕೋಟಿಗಳು ಆರ್ಥಿಕ ನಷ್ಟ ಉಂಟಾಗಿರುವುದರಿಂದ ಸದರಿಯವರ ವಿರುದ್ಧ ಸಿವಿಲ್ ದಾವೆ ಹೂಡಿ ಸರ್ಕಾರಕ್ಕೆ ಉಂಟಾಗಿರುವ ನಷ್ಟವನ್ನು ವಸೂಲಿ ಮಾಡಲು ಕ್ರಮ ಕೈಗೊಳ್ಳುವಂತೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗೆ ಸೂಚಿಸುವ ಬಗ್ಗೆ ಸಚಿವ ಸಂಪುಟ ನಿರ್ಣಯಿಸಿದೆ.

Home add -Advt

ಲೋಕಾಯುಕ್ತದಲ್ಲಿ ಗುತ್ತಿಗೆ ಮೇಲೆ ಮೂವರ ನೇಮಕ:
ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಖಾಲಿ ಇರುವ ಲೆಕ್ಕಾಧೀಕ್ಷಕರ ಹುದ್ದೆಯಲ್ಲಿ ಗುತ್ತಿಗೆ ಆಧಾರದ ಮೇರೆಗೆ ಕಾರ್ಯನಿರ್ವಹಿಸುತ್ತಿರುವ ಈ ಕೆಳಕಂಡ ೩ ನಿವೃತ್ತ ಲೆಕ್ಕಪರಿಶೋಧನಾಧಿಕಾರಿ / ಲೆಕ್ಕಾಧೀಕ್ಷಕರುಗಳ ಸೇವೆಗಳನ್ನು ಅವರ ಹೆಸರಿನ ಮುಂದೆ ನಮೂದಿಸಿರುವ ದಿನಾಂಕದಿಂದ ಅನ್ವಯವಾಗುವಂತೆ ಮತ್ತೊಂದು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಇವೆರಡರದಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಗುತ್ತಿಗೆ ಆಧಾರದ ಮೇರೆಗೆ ಮುಂದುವರೆಸಲು ಸಚಿವ ಸಂಪುಟ ನಿರ್ಣಯಿಸಿದೆ.
ಟಿ.ಸಿ. ಜಯರಾಮಯ್ಯ ೨೨.೦೯.೨೦೨೪.
ಎಸ್.ಬಿ.ಲೋಕೇಶ್ ೧೬.೦೯.೨೦೨೪
ಕೆ.ಬಿ. ಗಾಯಿತ್ರಿ ೩೧.೧೦.೨೦೨೪

ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಿಂದ ನಿಯೋಜನೆ ಮೇಲೆ ಭರ್ತಿ ಮಾಡಬೇಕಾದ ಹುದ್ದೆಗಳು ಖಾಲಿಯಿರುವುದರಿಂದ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಸುಗಮ ಆಡಳಿತ ದೃಷ್ಟಿಯಿಂದ ಹಾಲಿ ಇರುವ ಲೆಕ್ಕಾಧೀಕ್ಷಕರುಗಳ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಮಾಡಿಕೊಂಡಿರುವ ನೇಮಕಾತಿಯನ್ನು ಇನ್ನೊಂದು ವರ್ಷದ ಅವಧಿಗೆ ಮುಂದುವರೆಸಲು ಪ್ರಸ್ತಾಪಿಸಲಾಗಿತ್ತು.


ಕೇಂದ್ರಕ್ಕೆ ವನ್ಯಜೀವಿಧಾಮ ಪ್ರಸ್ತಾಪ:

ಬಂಕಾಪುರ ತೋಳ ವನ್ಯಜೀವಿಧಾಮ ಉತ್ತಾರೆಗುಡ್ಡ ವನ್ಯಜೀವಿಧಾಮ ಮತ್ತು ಅರಸೀಕೆರೆ ಕರಡಿ ವನ್ಯಜೀವಿಧಾಮಗಳ ಸುತ್ತಮುತ್ತಲಿನ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯಗಳೆಂದು ಘೋಷಿಸುವ ಹೊಸ ಪ್ರಸ್ತಾವನೆಗಳು ಹಾಗೂ ಭದ್ರಾ ವನ್ಯಜೀವಿಧಾಮ ಪರಿಷ್ಕೃತ ಪರಿಸರ ಸೂಕ್ಷ್ಮ ವಲಯದ ಪ್ರಸ್ತಾವನೆಯನ್ನು ಸಚಿವ ಸಂಪುಟದ ಉಪಸಮಿತಿಯ ಶಿಫಾರಸ್ಸಿನಂತೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು; ಸಚಿವ ಸಂಪುಟ ನಿರ್ಣಯಿಸಿದೆ.

ಸರ್ವೋಚ್ಛ ನ್ಯಾಯಾಲಯ ಅನುಸಾರ ಮತ್ತು ಕೇಂದ್ರ ಅರಣ್ಯ ಮತ್ತು ಪರಿಸರ ಮಂತ್ರಾಲಯದ ಮಾರ್ಗಸೂಚಿಗಳನ್ವಯ ವನ್ಯಜೀವಿಧಾಮ ಮತ್ತು ರಾಷ್ಟ್ರೀಯ ಉದ್ಯಾನವನಗಳ ಸುತ್ತಮುತ್ತಲಿನ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸುವುದು ಅವಶ್ಯಕವಾಗಿರುವ ಹಿನ್ನೆಲೆಯಲ್ಲಿ ಬಂಕಾಪುರ ತೋಳ ವನ್ಯಜೀವಿಧಾಮ ಮತ್ತು ಉತ್ತಾರೆಗುಡ್ಡ ವನ್ಯಜೀವಿಧಾಮ ಹಾಗೂ ಅರಸೀಕೆರೆ ಕರಡಿ ವನ್ಯಜೀವಿ ಧಾಮ ಮತ್ತು ಭದ್ರಾ ವನ್ಯಜೀವಿಧಾಮಗಳನ್ನು ಪರಿಸರ ಸೂಕ್ಷ್ಮ ವಲಯದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ಪ್ರಸ್ತಾಪಿಸಲಾಗಿದೆ.


ಆರೋಗ್ಯ ಇಲಾಖೆಯಲ್ಲಿ ಐ.ಇ.ಸಿ. ಚಟುವಟಿಕೆಗೆ ಅನುಮೋದನೆ:

೨೦೨೪-೨೫ನೇ ಸಾಲಿನಲ್ಲಿ ೧೫ನೇ ಹಣಕಾಸು ಆಯೋಗದಡಿ ಸಾರ್ವತ್ರಿಕ ಆರೋಗ್ಯ ರಕ್ಷಣೆ ಕಾರ್ಯಕ್ರಮದಡಿಯಲ್ಲಿ ಮಾಹಿತಿ, ಶಿಕ್ಷಣ, ಸಂವಹನ (ಐಇಸಿ) ಚಟುವಟಿಕೆಗೆ ಹಂಚಿಕೆಯಾಗಿದ್ದ ಅನುದಾನದಲ್ಲಿ ೭೦೪೫ ಆಯುಷ್ಮಾನ್ ಆರೋಗ್ಯ ಮಂದಿರಗಳಿಗೆ ಅಗತ್ಯವಿರುವ ಅನುಬಂಧದಲ್ಲಿರುವ ೫೯ ವಿವಿಧ ಔಷಧಿಗಳನ್ನು ರೂ.೧೬.೯೧ ಕೋಟಿಗಳ ವೆಚ್ಚದಲ್ಲಿ ರಾಷ್ಟ್ರೀಯ ಮಟ್ಟದ ಸಮಿತಿ (ಓಚಿಣioಟಿಚಿಟ ಐeveಟ ಅommiಣಣee) ಅನುಮೋದನೆ ಪಡೆಯುವ ಷರತ್ತಿಗೊಳಪಟ್ಟು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ (ಏSಒSಅಐ) ಮುಖಾಂತರ ಖರೀದಿಸಿ ಸರಬರಾಜು ಮಾಡಲು; ಸಚಿವ ಸಂಪುಟ ನಿರ್ಧರಿಸಿದೆ. ೧೫ನೇ ಹಣಕಾಸು ಆಯೋಗದ ರೂ.೧೬.೯೧ ಕೋಟಿ ಅನುದಾನ ಬಳಕೆ ಮಾಡಿಕೊಂಡು ವಿವಿಧ ಔಷಧಿಗಳನ್ನು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತದ ಮೂಲಕ ಖರೀದಿಸಿ, ಸರಬರಾಜು ಮಾಡಲಾಗುವುದು.

ತಳಮಟ್ಟದಲ್ಲಿ ಆರೋಗ್ಯ ವ್ಯವಸ್ಥೆಯನ್ನು ಹೆಚ್ಚಿಸಲು ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ವ್ಯಾಪ್ತಿಯನ್ನು ಸುಧಾರಿಸಲು ಸ್ಥಾಪಿತವಾದ ಸಮಗ್ರ ಪ್ರಾಥಮಿಕ ಆರೋಗ್ಯ ರಕ್ಷಣೆ ಕಾರ್ಯಕ್ರಮಕ್ಕೆ ಅನುಗುಣವಾಗಿ ಅರ್ಹ ಸಮುದಾಯ ಆರೋಗ್ಯ ಅಧಿಕಾರಿಗಳನ್ನು ಆಯುಷ್ಮಾನ ಆರೋಗ್ಯ ಮಂದಿರಗಳಲ್ಲಿ ನಿಯೋಜಿಸಿ, ೧೨ ವಿಸ್ತೃತ ಆರೋಗ್ಯ ಸೇವೆಯನ್ನು ನೀಡಲಾಗುತ್ತಿದೆ.
ಅಸಾಂಕ್ರಾಮಿಕ ರೋಗಗಳ ತಪಾಸಣೆ ಹಾಗೂ ರೋಗ ಪತ್ತೆ ಹಚ್ಚುವುದು ಮುಂತಾದ ಕರ್ತವ್ಯಗಳು ಇರುವುದರಿಂದ ಆಯುಷ್ಮಾನ ಆರೋಗ್ಯ ಮಂದಿರಗಳಲ್ಲಿ ಔಷಧಿಗಳ ಕೊರತೆ ಯಾಗದಂತೆ ಕ್ರಮವಹಿಸಲು ಔಷಧಿಗಳ ಖರೀದಿ ಮಾಡಲು ಅನುಮೋದನೆ ಕೋರಲಾಗಿತ್ತು.


ಆಯುಷ್ ಆಸ್ಪತ್ರೆಗಳಿಗೆ ಔಷಧಿ
ರಾಷ್ಟ್ರೀಯ ಆಯುಷ್ ಅಭಿಯಾನದಡಿ ೨೦೨೪-೨೫ನೇ ಸಾಲಿಗೆ ಆಯುಷ್ ಇಲಾಖೆಯ ಆಸ್ಪತ್ರೆ ಮತ್ತು ಚಿಕಿತ್ಸಾಲಯಗಳು ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನದ ಆಯುಷ್ ಘಟಕಗಳಿಗೆ ಅವಶ್ಯಕವಿರುವ ಆಯುಷ್ ಔಷಧಿಗಳನ್ನು ಈ ಕೆಳಕಂಡಂತೆ ನಿಗದಿಯಾದ ರೂ.೨೮೩೬.೩೨ ಲಕ್ಷಗಳ ಅನುದಾನಕ್ಕೆ ಮಿತಿಗೊಳಪಡಿಸಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕ ಕಾಯ್ದೆ (ಕೆಟಿಪಿಪಿ) ೧೯೯೯ ಮತ್ತು ೨೦೦೦ ರನ್ವಯ ಟೆಂಡರ್ ಮೂಲಕ ಸಂಗ್ರಹಿಸಿಕೊಳ್ಳಲು ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಧರಿಸಿದೆ.

ಆಯುರ್ವೇದ ೧೯೫೦.೦೦ ೪೧೪.೧೭ ೨೩೬೪.೧೭
ಯುನಾನಿ ೨೨೪.೦೦ ೧೧.೯೦ ೨೩೫.೯೦
ಹೋಮಿ ಯೋಪತಿ ೨೧೨.೦೦ ೨೪.೨೫ ೨೩೬.೨೫
ಒಟ್ಟು ೨೩೮೬.೦೦ ೪೫೦.೩೨ ೨೮೩೬.೩೨

ನಗರ ಹಾಗೂ ಗ್ರಾಮೀಣ ಪ್ರದೇಶದ ಜನಸಾಮಾನ್ಯರಿಗೆ ಆಯುಷ್ಯ ವೈದ್ಯಕೀಯ ಸೇವೆ ಒದಗಿಸಲು ಅನುಕೂಲವಾಗುವಂತೆ ರಾಷ್ಟ್ರೀಯ ಆಯುಷ್ ಅಭಿಯಾನ ವಾರ್ಷಿಕ ಕ್ರಿಯಾ ಯೋಜನೆಯಡಿ ಅನುಮೋದನೆಯಾದ ಅನುದಾನದಲ್ಲಿ ಆಯುಷ್ ಇಲಾಖೆಯ ಆಸ್ಪತ್ರೆ, ಚಿಕಿತ್ಸಾಲಯಗಳು ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನದ ಆಯುಷ್ ಘಟಕಗಳಿಗೆ ಅವಶ್ಯವಿರುವ ಆಯುಷ್ ಔಷಧಿಗಳನ್ನು ಕೆ.ಟಿ.ಪಿ.ಪಿ ನಿಯಮಗಳನ್ವಯ ಟೆಂಡರ್ ಮೂಲಕ ಸಂಗ್ರಹಿಸಲು ಪ್ರಸ್ತಾಪಿಸಲಾಗಿತ್ತು.


ಯುನಾನಿ ಮತ್ತು ಹೋಮಿಯೋಪಥಿ ವಸತಿ ನಿಲಯಗಳಿಗೆ ಅನುಮೋದನೆ:
ಸರ್ಕಾರಿ ಯುನಾನಿ ಮತ್ತು ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ, ಬೆಂಗಳೂರಿನ ಪುರುಷ ವಿದ್ಯಾರ್ಥಿ ನಿಲಯ ಕಟ್ಟಡ ಕಾಮಗಾರಿಯ ರೂ.೧೧.೭೦ ಕೋಟಿಗಳ ಮೊತ್ತದ ಅನುಬಂಧದಲ್ಲಿರುವ ಪರಿಷ್ಕೃತ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಣಯಿಸಿದೆ.
ಬೆಂಗಳೂರಿನ ಸರ್ಕಾರಿ ಯುನಾನಿ ಮತ್ತು ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯಗಳ ಪುರುಷ ವಿದ್ಯಾರ್ಥಿಗಳಿಗೆ ಕೇಂದ್ರಿಯ ಮಾರ್ಗಸೂಚಿಯನ್ವಯ ಕಡ್ಡಾಯವಾಗಿ ವಸತಿ ನಿಲಯ ಸೌಲಭ್ಯ ಒದಗಿಸಬೇಕು ಆದ್ದರಿಂದ ಎಲ್ಲಾ ಸೌಲಭ್ಯಗಳುಳ್ಳ ವಸತಿ ನಿಲಯ ಕಲ್ಪಿಸಲು ಪ್ರಸ್ತಾಪಿಸಲಾಗಿದೆ.


ಆಲಮೇಲದಲ್ಲಿ ತೋಟಗಾರಿಕೆ ಕಾಲೇಜು:
ವಿಜಯಪುರ ಜಿಲ್ಲೆಯ ಸಿಂಧಗಿ ತಾಲ್ಲೂಕಿನ ಅಲಮೇಲದಲ್ಲಿ ಹೊಸ ತೋಟಗಾರಿಕೆ ಕಾಲೇಜನ್ನು ಸ್ಥಾಪಿಸಲು ಹಂತ ಹಂತವಾಗಿ ಒಟ್ಟು ರೂ.೧೪೫.೭೩ ಕೋಟಿ ಅಂದಾಜು ವೆಚ್ಚವನ್ನು ಭರಿಸಲು ಮತ್ತು ೧೨೬ ಹುದ್ದೆಗಳನ್ನು ಸೃಜಿಸಿ ಭರ್ತಿ ಮಾಡಲು; ಮತ್ತು ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆಯ ಯೋಜನೆ ಮತ್ತು ರಸ್ತೆಗಳ ಆಸ್ತಿ ನಿರ್ವಹಣಾ ಕೇಂದ್ರ (Pಖಂಒಅ) ಮುಖಾಂತರ ಅನುಷ್ಟಾನಗೊಳಿಸಲು ಹಾಗೂ ಮೊದಲನೇ ಹಂತದಲ್ಲಿ ಆಡಳಿತ ಮತ್ತು ಶೈಕ್ಷಣಿಕ ಭವನ ನಿರ್ಮಾಣಕ್ಕಾಗಿ ರೂ.೩೯.೯೦ ಕೋಟಿಗಳನ್ನು ವಿನಿಯೋಗಿಸಲು ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಧರಿಸಿದೆ.
ವಿಜಯಪುರ ಜಿಲ್ಲೆಯಲ್ಲಿ ತೋಟಗಾರಿಕೆ ಅಭಿವೃದ್ಧಿಗೆ ಪೂರಕವಾಗುವಂತೆ ಆಧುನಿಕ ತಂತ್ರಜ್ಞಾನವನ್ನು ವಿಸ್ತರಣೆ, ಸಂಶೋಧನೆ ಮತ್ತು ಶಿಕ್ಷಣದ ಮೂಲಕ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಉತ್ಪಾದಿಸಿ, ರಫ್ತು ಮಾಡಲು ಸಾಧ್ಯತೆಯಿದೆ. ಉತ್ತರ ಕರ್ನಾಟಕ ಪ್ರದೇಶದಲ್ಲಿ ತೋಟಗಾರಿಕೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ತೋಟಗಾರಿಕೆ ಕಾಲೇಜನ್ನು ಸ್ಥಾಪಿಸಲು ಸಮಜಂಸವಾಗಿದೆ ಎಂದು ಪ್ರಸ್ತಾಪಿಸಲಾಗಿತ್ತು.


ದತ್ತಾಂಶ ನೀತಿಗೆ ಅನುಮೋದನೆ:
ದತ್ತಾಂಶ ಕೇಂದ್ರ ನೀತಿ, ೨೦೨೨-೨೦೨೭ರ ೪.೯ ರಲ್ಲಿ ಉಲ್ಲೇಖಿಸಲಾದ ದೊಡ್ಡ ಪ್ರಮಾಣದ ದತ್ತಾಂಶ ಕೇಂದ್ರಗಳ ಬಳಕೆಯ ಮಾದರಿಗಳೊಂದಿಗೆ ಹೊಂದಿಸಲು ಹಸಿರು ವಿದ್ಯುತ್ ಸುಂಕ ಮರುಪಾವತಿಯ ಮೇಲಿನ ೫ ಎಮ್‌ಡಬ್ಲೂ ಕ್ಯಾಪ್ ಅನ್ನು ತೆಗೆದು ಹಾಕುವುದು.
ದತ್ತಾಂಶ ಕೇಂದ್ರ ನೀತಿ, ೨೦೨೨-೨೦೨೭ರ ೪.೧೦ ರಲ್ಲಿ ಉಲ್ಲೇಖಿಸಲಾದ ವಿದ್ಯುತ್ ಸುಂಕ ಪಾಲಿಸಿಯ ಅವಧಿಯಲ್ಲಿ ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೋಸೈಟಿ (ಕಿಟ್ಸ್) ಯಿಂದ / ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದ ನೀಡಲಾದ ವಿದ್ಯುತ್ ಸುಂಕ ಪ್ರಮಾಣ ಪತ್ರದ ದಿನಾಂಕದಿಂದ ೫ ವರ್ಷಗಳವರೆಗೆ ೧೦೦% ವಿನಾಯಿತಿ ನೀಡಲು; ಸಚಿವ ಸಂಪುಟ ನಿರ್ಣಯಿಸಿದೆ.


ನಿಪುಣ್ ಕರ್ನಾಟಕ ಮಾರ್ಗಸೂಚಿಗಳಲ್ಲಿ ಬದಲಾವಣೆ:
ನಿಪುಣ್ ಕರ್ನಾಟಕ ಯೋಜನೆಯ ಮಾರ್ಗಸೂಚಿಗಳನ್ನು ಜಾರಿಗೆ ತಂದನಂತರ ಆಸಕ್ತ ಉದ್ಯಮ ಪಾಲುದಾರರೊಂದಿಗೆ ಅನೇಕ ಸಮಾಲೋಚನೆ ನಡೆಸಲಾಯಿತು. ಉದ್ಯಮದ ನೇಮಕಾತಿ ಅವಶ್ಯಕತೆಗಳಿಗೆ ಅನುಗುಣವಾಗಿ ಪ್ರಸ್ತಾವಗಳನ್ನು ಚರ್ಚಿಸಲಾಯಿತು. ಉದ್ಯೋಗ ಗುರಿಗಳನ್ನು ಸಾಧಿಸಲು ಸ್ಪಷ್ಟವಾದ ಸಮಯಾಧಾರಿತ ವಿಧಾನದ ಮೂಲಕ ನೇಮಕಾತಿ ಚಕ್ರಗಳೊಂದಿಗೆ ಉತ್ತಮವಾಗಿ ಹೊಂದಿಕೊಳ್ಳಲು ಮತ್ತು ಉದ್ಯಮದ ಭಾಗವಹಿಸುವಿಕೆಯನ್ನು ಬಲಪಡಿಸಲು ಉದ್ಯೋಗ ಮಾನದಂಡಗಳನ್ನು ಪರಿಷ್ಕರಿಸುವ ಅಗತ್ಯವನ್ನು ಪ್ರತಿಪಾದಿಸಲಾಗಿದೆ.
೧. ಉದ್ಯೋಗ ಮಾನದಂಡ: ಪಾಲುದಾರಿಕೆ ಹೊಂದಿರುವ ಕಂಪನಿಯು (Pಚಿಡಿಣಟಿeಡಿiಟಿg ಅomಠಿಚಿಟಿಥಿ) ಈಗಾಗಲೇ ಉದ್ಯೋಗದಲ್ಲಿರುವವರನ್ನು ಹೊರತುಪಡಿಸಿ, ತರಬೇತಿ ಪಡೆದವರಲ್ಲಿ ಕನಿಷ್ಠ ೭೦% ರಷ್ಟು ನೇಮಕಾತಿಯನ್ನು ಖಚಿತಪಡಿಸಿಕೊಳ್ಳಬೇಕು. ನೇಮಕಾತಿಗಳನ್ನು ಈ ಕೆಳಗಿನಂತೆ ನಡೆಸಲಾಗುತ್ತದೆ ಎಂದು ಉಲ್ಲೇಖಿಸಲಾಗಿದೆ.
ಅ) ಕೋರ್ಸ್ ಮುಗಿದ ೮ ತಿಂಗಳೊಳಗೆ ೭೦% ತರಬೇತಿ ಪಡೆದ ಅಭ್ಯರ್ಥಿಗಳ ಹಂತ ಹಂತದ ನೇಮಕಾತಿ.
ಆ) ೮ ತಿಂಗಳ ಕೊನೆಯಲ್ಲಿ ನೇಮಕಾತಿಯು ೭೦% ಕ್ಕಿಂತ ಕಡಿಮೆಯಿದ್ದರೆ, ನೇಮಕಾತಿಯನ್ನು ಹೆಚ್ಚಿಸಲು ಮತ್ತು ನೇಮಕಾತಿಯನ್ನು ಸುಗಮಗೊಳಿಸಲು ಪಾಲುದಾರ ಸಂಸ್ಥೆಯು ಕಡ್ಡಾಯವಾಗಿ ರಿಫ್ರೆಶರ್ ಕೋರ್ಸ್ ಅನ್ನು (ತನ್ನ ಸ್ವಂತ ವೆಚ್ಚದಲ್ಲಿ) ಆಯೋಜಿಸಬೇಕು. ರಿಫ್ರೆಶರ್ ಕೋರ್ಸ್ ಮುಗಿದ ನಂತರ, ಪಾಲುದಾರ ಕಂಪನಿಯು ಕನಿಷ್ಠ ೪೦% ತರಬೇತಿ ಪಡೆದವರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು.
ಇ) ಮರುಕೌಶಲ್ಯಕ್ಕೆ ಒಳಗಾದ ತರಬೇತಿದಾರರನ್ನು ನೇಮಿಸಿಕೊಳ್ಳಲು ಯಾವುದೇ ನಿರ್ಬಂಧವಿರುವುದಿಲ್ಲ.
ಈ) ಹೆಚ್ಚುವರಿಯಾಗಿ, ತರಬೇತಿದಾರರನ್ನು ಆಫರ್ ಲೆಟರ್ ಅನ್ನು ಸ್ವೀಕರಿಸಿದ ನಂತರ ಸೇರದಿರಲು ಆಯ್ಕೆ ಮಾಡಿದರೆ, ಪಾಲುದಾರ ಸಂಸ್ಥೆಯು ಜವಾಬ್ದಾರರಾಗುವುದಿಲ್ಲ.
೨. ಅನುದಾನದ ಮಾದರಿ: ಯೋಜನೆಯ ಹಣಕಾಸು ಮತ್ತು ಮೇಲ್ವಿಚಾರಣೆಯ ಮೇಲೆ ಉತ್ತಮ ನಿಯಂತ್ರಣವನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಅನುದಾನದ ಕಂತಿನ ಮಾದರಿಯನ್ನು ಅನುಸರಿಸಬಹುದು;
ಅ) ಪ್ರಸ್ತಾವನೆಯ ಅನುಮೋದನೆಯ ನಂತರ ಶೇ.೨೫ ರಷ್ಟು ಮೊದಲ ಕಂತು.
ಆ) ಬ್ಯಾಚ್‌ನ ಶೇ.೩೫% ರ ಮೊದಲ ನೇಮಕಾತಿಯ ನಂತರ ಮುಂದಿನ ಶೇ.೫೦ ರಷ್ಟು ಕಂತು;
ಇ) ೮ ತಿಂಗಳುಗಳ ಅಂತ್ಯದಲ್ಲಿ ಉಳಿದ ೩೫% ಬ್ಯಾಚ್‌ನ ಪೂರ್ಣ ನೇಮಕಾತಿಯ ನಂತರ ಉಳಿದ ೨೫% ರಷ್ಟು ಕಂತು;
ಈ) ೮ ತಿಂಗಳುಗಳ ಅಂತ್ಯದಲ್ಲಿ ೭೦% ನೇಮಕಾತಿಗಳನ್ನು ಸಾಧಿಸದಿದ್ದರೆ, ಪಾಲುದಾರ ಸಂಸ್ಥೆಯು ನೇಮಕಾತಿಗೊಳ್ಳದವರಿಗೆ ೨-೩ ತಿಂಗಳುಗಳವರೆಗೆ ಮಾತ್ರ ರಿಫ್ರೆಶರ್ ಕೋರ್ಸ್ ಅನ್ನು (ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ) ಕಡ್ಡಾಯವಾಗಿ ಆಯೋಜಿಸಬೇಕಾಗುತ್ತದೆ. ಇದು ಉದ್ಯಮದ ಜವಾಬ್ದಾರಿಯನ್ನು ಖಚಿತಪಡಿಸುತ್ತದೆ, ಇದು ಉದ್ಯಮದ ಜವಾಬ್ದಾರಿಯನ್ನು ಖಚಿತಪಡಿಸುತ್ತದೆ. ರಿಫ್ರೆಶ್ ಕೋರ್ಸ್ ನಂತರ, ಪಾಲುದಾರ ಕಂಪನಿಯು ಕನಿಷ್ಠ ೪೦% ತರಬೇತಿದಾರರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು.
ಉ) ರಿಫ್ರೇಶರ್ ಕೋರ್ಸ್ ನಂತರವೂ ಕನಿಷ್ಠ ೪೦% ತರಬೇತಿದಾರರ ನೇಮಕಾತಿಯ ಬಗ್ಗೆ ಪಾಲುದಾರ ಸಂಸ್ಥೆಯು ವಿಫಲವಾದಲ್ಲಿ ಅನುಸರಣಾ ಕ್ರಮದಂತೆ ಸರ್ಕಾರಕ್ಕೆ ಪೂರ್ಣ ಮೊತ್ತವನ್ನು ಮರು ಪಾವತಿಸಬೇಕಾಗಿರುತ್ತದೆ.


ಮೈಸೂರಿನ ರಂಗಾಯಣ ನವೀಕರಣ:

ಮೈಸೂರಿನ ಕರ್ನಾಟಕ ಕಲಾಮಂದಿರ, ರಂಗಾಯಣ ಹಾಗೂ ವಿಶ್ವ ಕನ್ನಡ ಸಮ್ಮೇಳನ ಅತಿಥಿಗೃಹ ಕಟ್ಟಡಗಳ ಸಮಗ್ರ ನವೀಕರಣ ಕಾಮಗಾರಿಗಳನ್ನು ರೂ.೧೪.೬೪ ಕೋಟಿಗಳ ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಧರಿಸಿದೆ.

ರಂಗಮಂದಿರದ ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆ, ದುರಸ್ಥಿ, ಶೌಚಾಲಯಗಳ ಸಮಗ್ರ ನವೀಕರಣ, ಕುರ್ಚಿಗಳ ಬದಲಾವಣೆ, ವಾಲ್ ಪೆನಲಿಂಗ್ ಬದಲಾವಣೆ, ಕಟ್ಟಡ ಸೋರಿಕೆ ತಡೆಯಲು ಕಾಮಗಾರಿ, ವಿಶೇಷ ಚೇತನರ ಬಳಕೆಗೆ ಶಿಫ್ಟ್ ಅಳವಡಿಕೆ, ರಂಗಾಯಣದ ಬಿ.ವಿ.ಕಾರಂತ ರಂಗ ಚಾವಡಿ ನವೀಕರಣ, ಶ್ರೀರಂಗವೇದಿಕೆ ನವೀಕರಣ, ಕುಟೀರ ಮುಂತಾದ ಕಾಮಗಾರಿಗಳನ್ನು ಕೈಗೊಳ್ಳಲು ಪ್ರಸ್ತಾಪಿಸಲಾಗಿದೆ.


ಕೆ.ಕೆ.ಆರ್.ಡಿ.ಬಿ ರಸ್ತೆ ಆಡಳಿತಾತ್ಮಕ ಅನುಮೋದನೆ:

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ೨೦೨೪-೨೫ನೇ ಸಾಲಿನ ಅಧ್ಯಕ್ಷರ ವಿವೇಚನಾ ನಿಧಿಯಡಿ ಕೈಗೊಳ್ಳಲಾಗುತ್ತಿರುವ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಎಸ್.ಎಚ್-೧೫೬ ನರಿಬೋಳದಿಂದ ಗಂವ್ಹಾರ ವಯಾ ಬಿರಾಳ ಬಿ ಕಿ.ಮೀ ೧೫.೦೦ ರಿಂದ ೩೬.೦೦ ವರೆಗೆ ರಸ್ತೆ ನಿರ್ಮಾಣ ಕಾಮಗಾರಿಯ ರೂ.೨೩.೬೦ ಕೋಟಿಗಳ ಅಂದಾಜಿಗೆ ಮತ್ತು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಎಸ್.ಎಚ್ ೧೭೧ ಕೆಲ್ಲೂರು ಬಿ ದಿಂದ ಜವಳಗಾ ಕ್ರಾಸ್ ವರೆಗೆ (ವಯಾ ನೆಲೋಗಿ, ಸೊನ್ನ, ಮುತ್ತುಖೋಡ, ಕರಭೋಸಗಾ) ಕಿ.ಮೀ ೧೬೫ ರಿಂದ ೧೯೩.೫೫ ವರೆಗೆ ರಸ್ತೆ ನಿರ್ಮಾಣ ಕಾಮಗಾರಿಯ ರೂ.೨೪.೧೦ ಕೋಟಿಗಳ ಅಂದಾಜಿನ ಎರಡು ಕಾಮಗಾರಿಗಳ ಒಟ್ಟಾರೆ ರೂ.೪೭.೭೦ ಕೋಟಿಗಳ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಧರಿಸಿದೆ.

ಕೆ.ಕೆ.ಆರ್.ಡಿ.ಬಿ ನಿಧಿಯಡಿ ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಎಚ್.ಎಚ್ ೧೭೧ ಕೆಲ್ಲೂರು ಬಿ ದಿಂದ ಜವಳಗಾ ಕ್ರಾಸ್ ವರೆಗೆ ಕಿ.ಮೀ ೧೬೫ ರಿಂದ ೧೯೩.೫೫ ವರೆಗೆ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಪ್ರಸ್ತಾಪಿಸಲಾಗಿದೆ.


ಕುಶಾಲನಗರ ಮಸಗೋಡು-ಯಲಕನೂರು-ಕಣಿವೆ ರಸ್ತೆ ಅಭಿವೃದ್ಧಿ:

ಕೊಡಗು ಜಿಲ್ಲೆ, ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಶಾಲನಗರ ತಾಲ್ಲೂಕು ಮಸಗೋಡು ಯಲಕನೂರು-ಕಣಿವೆ ರಸ್ತೆ ಸರಪಳಿ ೨.೦೦ ರಿಂದ ೧೦.೦೦ ಕಿ.ಮೀ ಹಾಗೂ ೧೧.೦೦ ರಿಂದ ೧೨.೧೦ ಕಿ.ಮೀ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ರೂ.೧೫.೦೦ ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಧರಿಸಿದೆ.

ಕೊಡಗು ಜಿಲ್ಲೆ, ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಶಾಲನಗರ ತಾಲ್ಲೂಕು ಮಸಗೋಡು ಯಲಕನೂರು-ಕಣಿವೆ ರಸ್ತೆ ಸರಪಳಿ ೨.೦೦ ರಿಂದ ೧೦.೦೦ ಕಿ.ಮೀ ಹಾಗೂ ೧೧.೦೦ ರಿಂದ ೧೨.೧೦ ಕಿ.ಮೀ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ರೂ.೧೫.೦೦ ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆಗೆ ಪ್ರಸ್ತಾಪಿಸಲಾಗಿತ್ತು.


ಪ್ರಜಾಸೌಧ ಕಟ್ಟಡಗಳಿಗೆ ಅನುಮೋದನೆ
ವಿಜಯಪುರ ಜಿಲ್ಲೆಯ ಸಿಂಧಗಿ ತಾಲ್ಲೂಕಿನ ಪ್ರಜಾಸೌಧ ಕಟ್ಡ ಡ ಕಾಮಗಾರಿಗೆ ಈಗಾಗಲೇ ರೂ.೯.೭೫ ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿರುವುದನ್ನು ಒಳಗೊಂಡಂತೆ, ಸದರಿ ಕಟ್ಟಡಕ್ಕೆ ಅವಶ್ಯವಿರುವ ೨ನೇ ಹಂತದ ಕಾಮಗಾರಿಯ ರೂ.೫.೦೦ ಕೋಟಿಗಳ ಅಂದಾಜು ಮೊತ್ತ ಸೇರಿದಂತೆ ಒಟ್ಟಾರೆ ರೂ.೧೪.೭೫ ಕೋಟಿಗಳ ಪರಿಷ್ಕೃತ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲು; ಹಾಗೂ ಸಂಬಂಧಪಟ್ಟ ಕಾರ್ಯನಿರ್ವಾಹಕ ಅಭಿಯಂತರರು ಲೋಕೋಪಯೋಗಿ ಇಲಾಖೆ ಇವರ ವಿರುದ್ಧ ಶಿಸ್ತು ವ್ಯವಹರಣೆ ಹೂಡಲು ಹಾಗೂ ಜಿಲ್ಲಾ ಆಡಳಿತಕ್ಕೆ ಎಚ್ಚರಿಕೆ ನೀಡಲು; ಸಚಿವ ಸಂಪುಟ ನಿರ್ಣಯಿಸಿದೆ.
ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ೩ ಎಕರೆ ಜಮೀನಿನಲ್ಲಿ ಹೊಸ ತಾಲ್ಲೂಕು ಪ್ರಜಾಸೌಧ ನಿರ್ಮಿಸಲು ಪ್ರಸ್ತಾಪಿಸಲಾಗಿದೆ.


ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನಲ್ಲಿ ಪ್ರಜಾಸೌಧ ಆನೇಕಲ್ ತಾಲ್ಲೂಕು ಆಡಳಿತ ಕೇಂದ್ರ ಕಟ್ಟಡಕ್ಕೆ ಅವಶ್ಯವಿರುವ ಎಲ್ಲಾ ಕಾಮಗಾರಿಗಳು (ಈuಟಟಥಿ ಈuಡಿಟಿisheಜ) ಒಳಗೊಂಡಂತೆ ಟೈಪ್-ಸಿ ಮಾದರಿಯಲ್ಲಿ ರೂ.೧೬.೦೦ ಕೋಟಿಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಧರಿಸಿದೆ.
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕು ಆಡಳಿತ ಕೇಂದ್ರ ಪ್ರಜಾಸೌಧ ನಿರ್ಮಾಣಕ್ಕೆ ಅನುಮೋದನೆ ಕೋರಿ ಪ್ರಸ್ತಾಪಿಸಲಾಗಿತ್ತು.


ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕು ಆಡಳಿತ ಕೇಂದ್ರ ಪ್ರಜಾಸೌಧ ಕಟ್ಟಡವನ್ನು ರೂ.೧೬.೦೦ ಕೋಟಿಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಧರಿಸಿದೆ.


ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನಲ್ಲಿ ತಾಲ್ಲೂಕು ಪ್ರಜಾಸೌಧ ಕಟ್ಟಡಕ್ಕೆ ಅವಶ್ಯವಿರುವ ಎಲ್ಲಾ ಕಾಮಗಾರಿಗಳು ನಿರ್ಮಾಣ ಕಾಮಗಾರಿಯನ್ನು ರೂ.೧೬.೦೦ ಕೋಟಿಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಣಯಿಸಿದೆ.


ಚಿಕ್ಕಮಗಳೂರು ಜಿಲ್ಲೆಯ ಪ್ರಜಾಸೌಧ ಚಿಕ್ಕಮಗಳುರು ಜಿಲ್ಲಾ ಆಡಳಿತ ಕೇಂದ್ರ ಕಟ್ಟಡದ ಮೊದಲನೇ ಹಂತಕ್ಕೆ ರೂ.೩೦.೦೦ ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿರುವುದನ್ನು ಒಳಗೊಂಡಂತೆ ಸದರಿ ಕಟ್ಟಡದ ಇ.ಐ.ಆರ್.ಎಲ್/ವರ್ಕಸ್ಲಿಪ್ ಕಾಮಗಾರಿ ಹಾಗೂ ೨ನೇ ಹಂತದ ಕಾಮಗಾರಿಯ ಅಂದಾಜು ಮೊತ್ತ ರೂ.೨೬.೪೮ ಕೋಟಿಗಳು ಸೇರಿದಂತೆ ಕಾಮಗಾರಿಯ ಪರಿಷ್ಕೃತ ಅಂದಾಜು ಮೊತ್ತ ರೂ.೫೬.೪೮ ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಧರಿಸಿದೆ.


ನೋಂದಣಿ ಕಚೇರಿಗಳಿಗೆ ಹೊಸ ಕಟ್ಟಡ
ಬೆಂಗಳೂರಿನಲ್ಲಿ ಇರುವ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ೨ ಜಿಲ್ಲಾ ನೊಂದಣಿ ಕಚೇರಿ ಹಾಗೂ ೩೪ ಉಪನೋಂದಣಿ ಕಚೇರಿಗಳನ್ನು ಸ್ವಂತ ಕಟ್ಟಡಗಳಿಗೆ ಸ್ಥಳಾಂತರಿಸಲು ಬಿಬಿಎಂಪಿ/ಬೆಂಗಳೂರು ನಗರ ಜಿಲ್ಲಾಧಿಕಾರಿ/ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಗಳಿಂದ ಹಂಚಿಕೆಯಾಗುವ ನಿವೇಶನದಲ್ಲಿ ತಲಾ ಒಂದು ಕಟ್ಟಡವನ್ನು ಗರಿಷ್ಠ ರೂ.೨.೫೦ ಕೋಟಿಗಳ ವೆಚ್ಚದಲ್ಲಿ ಹೊಸದಾಗಿ ನಿರ್ಮಾಣ ಮಾಡಲು ಅಥವಾ ನಿವೇಶನ ಲಭ್ಯವಾಗದಿದ್ದಲ್ಲಿ ಬಿಬಿಎಂಪಿ/ಬೆಂಗಳೂರು ನಗರ ಜಿಲ್ಲಾಧಿಕಾರಿ / ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಗಳು ಹೊಂದಿರುವ ಕಟ್ಟಡಗಳಲ್ಲಿ ಸ್ಥಳಾವಕಾಶ ಲಭ್ಯವಾದಲ್ಲಿ ಕಚೇರಿಗಳನ್ನು ಸ್ಥಳಾಂತರಿಸಲು ತಲಾ ಒಂದು ಕಛೇರಿಗಳನ್ನು ಗರಿಷ್ಠ ರೂ.೫೦.೦೦ ಲಕ್ಷಗಳ ವೆಚ್ಚದಲ್ಲಿ ನವೀಕರಿಸಲು ಅಥವಾ ಈಗಾಗಲೇ ನಿರ್ಮಾಣಗೊಂಡಿರುವ ಕಟ್ಟಡದ ಮೇಲೆ ಮತ್ತೊಂದು ಮಹಡಿಯನ್ನು ನಿರ್ಮಿಸಲು ತಗಲುವ ವಾಸ್ತವಿಕ ವೆಚ್ಚವನ್ನು ಭರಿಸಲು, ಗರಿಷ್ಠ ರೂ.೧.೫೦ ಕೋಟಿಗಳಿಗೆ ಸೀಮಿತಗೊಳಿಸಲು;
ನಿರ್ಮಾಣ/ನವೀಕರಣ ಕಾರ್ಯವನ್ನು ನಿರ್ವಹಿಸುವ ಕರ್ನಾಟಕ ಗೃಹ ಮಂಡಳಿಗೆ ಅeಟಿಣಡಿಚಿಟ ಉoveಡಿಟಿmeಟಿಣs Sಠಿeಛಿiಚಿಟ ಂssisಣಚಿಟಿಛಿe Sಛಿheme ರಡಿ ಬಿಡುಗಡೆ ಮಾಡಿರುವ ರೂ.೭೧.೦೦ ಕೋಟಿಗಳು ಹಾಗೂ ೨೦೨೪-೨೫ನೇ ಸಾಲಿನಲ್ಲಿ ಲೆಕ್ಕಶೀರ್ಷಿಕೆ ೪೦೫೯-೮೦-೦೫೧-೦-೩೦-೧೩೨ (ಬಂಡವಾಳ ವೆಚ್ಚ) ಅಡಿಯಲ್ಲಿ ಲಭ್ಯವಿರುವ ರೂ.೫.೦೦ ಕೋಟಿಗಳು, ಒಟ್ಟು ರೂ.೭೬.೦೦ ಕೋಟಿಗಳ ಅನುದಾನವನ್ನು ಸ್ಥಳ ಲಭ್ಯತೆಯನುಸಾರ ಪ್ರತಿಯೊಂದು ಕಛೇರಿಯ ವಿಸ್ತೃತ ಯೋಜನೆಯನ್ನು ಸಲ್ಲಿಸುವ ಷರತ್ತಿಗೊಳಪಟ್ಟು ಬಿಡುಗಡೆ ಮಾಡಲು;
ಬಿಬಿಎಂಪಿ/ಬೆಂಗಳೂರು ನಗರ ಜಿಲ್ಲಾಧಿಕಾರಿ/ಬೆಂಗಳೂರು ನಗರ ಜಿಲ್ಲಾ ಪಂಚಾಯತಿಗಳಿಂದ ಲಭ್ಯವಾಗುವ ನಿವೇಶನ/ ಕಟ್ಟಡಗಳನ್ನಾಧರಿಸಿ ಬೆಂಗಳೂರಿನಲ್ಲಿ ಇರುವ ಜಿಲ್ಲಾ ನೋಂದಣಿ ಕಛೇರಿ / ಉಪ ನೋಂದಣಿ ಕಚೇರಿಗಳನ್ನು ಸ್ಥಳಾಂತರಿಸಲು, ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡಲು / ಈಗಾಗಲೇ ನಿರ್ಮಾಣಗೊಂಡಿರುವ ಕಟ್ಟಡಗಳಲ್ಲಿ ಸ್ಥಳಾವಕಾಶ ಲಭ್ಯವಾದಲ್ಲಿ ಕಚೇರಿಗಳನ್ನು ನವೀಕರಿಸಲು, ಇಲಾಖಾ ಸಚಿವರ ಅನುಮೋದನೆಯೊಂದಿಗೆ ಇಲಾಖೆಯೇ ಉಪ ನೋಂದಣಿ ಕಚೇರಿಗಳನ್ನು ಗುರುತಿಸಿ, ಘಟಕವಾರು ಅನುದಾನ ಬಿಡುಗಡೆ ಮಾಡಲು; ಸಚಿವ ಸಂಪುಟ ಒಪ್ಪಿದೆ.
ಬೆಂಗಳೂರಿನಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ನೋಂದಣಿ / ಉಪ ನೋಂದಣಿ ಕಛೇರಿಗಳನ್ನು ಸರ್ಕಾರಿ ಕಟ್ಟಡಗಳಿಗೆ ಸ್ಥಳಾಂತರ / ನೂತನ ಕಟ್ಟಡ ನಿರ್ಮಾಣ / ನವೀಕರಣವನ್ನು ರೂ.೭೬.೦೦ ಕೋಟಿಗಳ ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು ಪ್ರಸ್ತಾಪಿಸಲಾಗಿತ್ತು.


ನೋಂದಣಿ ಕಚೇರಿಗಳಲ್ಲಿ ಆಧುನಿಕ ತಂತ್ರಜ್ಞಾನ:
ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಚೇರಿಗಳಿಗೆ Pಡಿoಛಿuಡಿemeಟಿಣ, Iಟಿsಣಚಿಟಟಚಿಣioಟಿ, ಔಠಿeಡಿಚಿಣioಟಿs ಚಿಟಿ ಒಚಿiಟಿಣeಟಿಚಿಟಿಛಿe oಜಿ Iಖಿ Iಟಿಜಿಡಿಚಿsಣಡಿuಛಿಣuಡಿe ಚಿಟoಟಿg ತಿiಣh ಆeಠಿಟoಥಿmeಟಿಣ oಜಿ ಔಠಿeಡಿಚಿಣioಟಿಚಿಟ ಒಚಿಟಿಠಿoತಿeಡಿ ಅನ್ನು ಃಔಔ ಒoಜeಟ ಆಧಾರದ ಮೇಲೆ ಉo-ಟive ದಿನಾಂಕದಿಂದ ೫ ವರ್ಷಗಳ ಅವಧಿಗೆ ಹಾಗೂ ಗೋ-ಲೈವ್ ಪೂರ್ವದ ಅವಧಿಯು ಸೇರಿದಂತೆ ಪೂರೈಸಲು, ಆರ್‌ಎಫ್‌ಪಿ ಹಾಗೂ ನೆಗೋಷಿಯೇಶನ್ ಮೂಲಕ ಸ್ಕ್ಯಾನ್ ಮಾಡಿದ ದಾಖಲೆಗಲ ಪ್ರತಿ ಪುಟಕ್ಕೆ ರೂ.೪೭.೨೦ ದರದಲ್ಲಿ (ಶೇ.೧೮% ರಷ್ಟು ಜಿಎಸ್‌ಟಿ ಸೇರಿದಂತೆ) ರೂ.೬೩೭.೪೫ ಕೋಟಿಗಳ ಪರಿಷ್ಕೃತ ಅಂದಾಜಿಗೆ ಹಾಗೂ ಹಿಂದಿನ ಸಚಿವ ಸಂಪುಟ ಸಭೆಯಲ್ಲಿ ಗೋ-ಲೈವ್‌ಗಾಗಿ ನೀಡಿದ್ದ ೯೦ ದಿನಗಳ ಅವಧಿಯನ್ನು ೪೬೪ ದಿನಗಳಿಗೆ ವಿಸ್ತರಿಸಲು/ ಸ್ಥೀರಿಕರಿಸಲು, ಕರ್ನಾಟಕ ಸರ್ಕಾರ (ವ್ಯವಹಾರ ನಿರ್ವಹಣೆ) ನಿಯಮಗಳು, ೧೯೭೭ರ ಮೊದಲ ಅನುಸೂಚಿ ಸಂಖ್ಯೆ: ೧೫ರ ಪ್ರಕಾರ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಧರಿಸಿದೆ.
ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಛೇರಿಗಳಲ್ಲಿ ಬಿಲ್ಡ್-ಓನ್-ಆಪರೇಟ್ (ಃಔಆ) ಮಾದರಿಯಲ್ಲಿ ನಿರ್ವಹಿಸುತ್ತಿರುವ ಮಾನವ ಸಂಪನ್ಮೂಲ ನಿಯೋಜನೆ ಮತ್ತು ಐಟಿ ಮೂಲಸೌಕರ್ಯಗಳ ಸ್ಥಾಪನೆ, ಕಾರ್ಯಾಚರಣೆಗಳು ಮತ್ತು ನಿರ್ವಹಣೆಯ ರೂ.೬೩೭.೪೫ ಕೋಟಿಗಳ ಪರಿಷ್ಕೃತ ಅಂದಾಜಿಗೆ ಅನುಮೋದನೆಗೆ ಪ್ರಸ್ತಾಪಿಸಲಾಗಿತ್ತು.


ಕರ್ನಾಟಕ ರಾಜ್ಯ ಬಾಲನ್ಯಾಯ ನಿಯಮ ೨೦೨೫ಕ್ಕೆ ಅನುಮೋದನೆ:
ಕರ್ನಾಟಕ ರಾಜ್ಯ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ನಿಯಮಗಳು, ೨೦೨೫ಕ್ಕೆ ಅನುಮೋದನೆ ನೀಡಲು; ಸಚಿವ ಸಂಪುಟ ಒಪ್ಪಿದೆ.
ಕರ್ನಾಟಕ ರಾಜ್ಯ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ನಿಯಮಗಳು, ೨೦೨೫ಕ್ಕೆ ಅನುಮೋದನೆಗೆ ಪ್ರ್ತಾಪಿಸಲಾಗಿತ್ತು. ಕೇಂದ್ರದ ಅಧಿನಿಯಮದ ನಿರ್ದೇಶನದನ್ವಯ ಈ ನಿಯಮಗಳನ್ನು ಪ್ರಸ್ತಾಪಿಸಲಾಗಿದೆ. ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ದಾಖಲಾಗಿರುವ ರಿಟ್ ಅರ್ಜಿಯಲ್ಲಿ ೪ ತಿಂಗಳ ಅವಧಿಯಲ್ಲಿ ತ್ವರಿತಗತಿಯಲ್ಲಿ ನಿಯಮಗಳನ್ನು ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ.

ಗದಗ ಮೆಡಿಕಲ್ ಕಾಲೇಜಿಗೆ ಕೆ.ಎಚ್ ಪಾಟೀಲ ಹೆಸರು

ಗದಗಿನ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಹೆಸರನ್ನು ಸಹಕಾರಿ ರಂಗದ ಭೀಷ್ಮ ಕೆ.ಎಚ್. ಪಾಟೀಲ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಎಂದು ಹೆಸರಿಸಲು ಸಂಪುಟ ನಿರ್ಧರಿಸಿದೆ. 

ಈ ವಿಷಯವನ್ನು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ರವರು ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು. 

ಸಹಕಾರಿ ರಂಗದಲ್ಲಿ ಅನುಪಮ ಸೇವೆ ಸಲ್ಲಿಸಿದ ಶ್ರೀ ಕೆ.ಎಚ್. ಪಾಟೀಲರು ರಾಜ್ಯದಲ್ಲಿ ಸಚಿವರಾಗಿ, ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಇಂತಹ ಮಹಾನ ನಾಯಕನ ಹೆಸರನ್ನು ಸಾರ್ವಜನಿಕ ಸೇವೆ ಮಾಡುತ್ತಿರುವ ಗದಗ ಮೆಡಿಕಲ್ ಕಾಲೇಜಿಗೆ ನಾಮಕರಣ ಮಾಡುವ ಮೂಲಕ ಅವರ ಸೇವೆಯನ್ನು ಗೌರವಿಸುವ ಕ್ರಮಕ್ಕೆ ಸರ್ಕಾರ ಮುಂದಾಗಿದೆ ಎಂದು ಸಚಿವರು ವಿವರಿಸಿದರು.


ಕರ್ನಾಟಕ ಮಂತ್ರಿಗಳ ಸಂಬಳಗಳು ಹಾಗೂ ಭತ್ಯೆಗಳ (ತಿದ್ದುಪಡಿ) ವಿಧೇಯಕ, ೨೦೨೫ಕ್ಕೆ ಘಟನೋತ್ತರ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಧರಿಸಿದೆ.


ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ) (ತಿದ್ದುಪಡಿ) ವಿಧೇಯಕ, ೨೦೨೫ಕ್ಕೆ ಘಟನೋತ್ತರ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಧರಿಸಿದೆ.


ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಸೌಲಭ್ಯ ಒದಗಿಸುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಯನ್ನು ಕೆಲವು ಮಾರ್ಪಾಡುಗಳೊಂದಿಗೆ ಜಾರಿಗೊಳಿಸಲು; ಸಚಿವ ಸಂಪುಟ ನಿರ್ಣಯಿಸಿದೆ.


ಡಾ. ಹೆಚ್.ನರಸಿಂಹಯ್ಯ ವಿಜ್ಞಾನ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, ೨೦೨೫ಕ್ಕೆ ಘಟನೋತ್ತರ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಧರಿಸಿದೆ.


ನೋಟರಿಗಳ (ಕರ್ನಾಟಕ ತಿದ್ದುಪಡಿ) ವಿಧೇಯಕ, ೨೦೨೫ಕ್ಕೆ ಘಟನೋತ್ತರ ಅನುಮೋದನೆಗೆ ಸಚಿವ ಸಂಪುಟ ನಿರ್ಣಯಿಸಿದೆ.


ಬೆಂಗಳೂರಿನ ವಿಕಾಸಸೌಧದ ಮುಂದಿನ ೨೫.೮೯ ಗುಂಟೆಗಳ ಖಾಲಿ ಜಾಗದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಸ್ಪೂರ್ತಿಸೌಧ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ರೂ.೮೭.೦೦ ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಧರಿಸಿದೆ.


ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ವಿಧೇಯಕ, ೨೦೨೫ಕ್ಕೆ ಘಟನೋತ್ತರ ಅನುಮೋದನೆಗೆ ಸಚಿವ ಸಂಪುಟ ಒಪ್ಪಿದೆ.


ಕರ್ನಾಟಕ ವಿಧಾನ ಮಂಡಲದವರ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ (ತಿದ್ದುಪಡಿ) ವಿಧೇಯಕ, ೨೦೨೫ಕ್ಕೆ ಘಟನೋತ್ತರ ಅನುಮೋದನೆಗೆ ಸಚಿವ ಸಂಪುಟ ಒಪ್ಪಿದೆ.


ಕರ್ನಾಟಕ ರಾಜ್ಯ ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನವನ್ನು ಸಮಾಪನಗೊಳಿಸಲು ಸಚಿವ ಸಂಪುಟ ನಿರ್ಧರಿಸಿದೆ.


ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಅಭಾವವನ್ನು ನೀಗಿಸಲು ರಾಜ್ಯದ ಪ್ರಮುಖ ಜಲಾಶಯಗಳ ನಿರ್ವಹಣೆಯನ್ನು ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ)ಗೆ ವಹಿಸಲು ಸಚಿವ ಸಂಪುಟ ಒಪ್ಪಿದೆ.


ರಾಜ್ಯ ವಿಪತ್ತು ಉಪಶಮನ ನಿಧಿ ಅಡಿ ರೂ.೧೯೪.೮೧ ಕೋಟಿಗಳ ಅಂದಾಜು ವೆಚ್ಚದ ಒಟ್ಟು ೩೩೦ ಉಪಶಮನ ಕಾಮಗಾರಿಗಳನ್ನು ಅನುಷ್ಟಾನಗೊಳಿಸಲು ಜಿಲ್ಲಾಧಿಕಾರಿಗಳಿಗೆ ಅನುಮತಿ ನೀಡಲು ಸಚಿವ ಸಂಪುಟ ನಿರ್ಧರಿಸಿದೆ.


ವಿಜಯಪುರ ಜಿಲ್ಲೆಯ ವಿಜಯಪುರ ನಗರಕ್ಕೆ ಆಲಮಟ್ಟಿ ಹಿನ್ನೀರಿನಿಂದ (ಕೊಲ್ಹಾರದಿಂದ ವಿಜಯಪುರ ನಗರಕ್ಕೆ) ಸಗಟು ನೀರು ಸರಬರಾಜು ಮಾಡುವ PSಅ ಕೊಳವೆ ಮಾರ್ಗವನ್ನು ಬದಲಾಯಿಸಿ ಎಮ್‌ಎಸ್ ಪೈಪ್ ಅಳವಡಿಸುವ ಕಾಮಗಾರಿಯ ರೂ.೫೦.೧೩ ಕೋಟಿಗಳ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆಗೆ ಸಚಿವ ಸಂಪುಟ ಒಪ್ಪಿದೆ.


ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮೈಸೂರಿನ ಡಾ. ಬಿ.ಆರ್ ಅಂಬೇಡ್ಕರ್ ಭವನದ ಬಾಕಿ ಇರುವ ಕಾಮಗಾರಿಗಳ ರೂ.೨೩.೮೩ ಕೋಟಿಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆಗೆ ಸಚಿವ ಸಂಪುಟ ನಿರ್ಧರಿಸಿದೆ.

Related Articles

Back to top button