Latest

ಸುದ್ದಿಗೋಷ್ಠಿ ವೇಳೆ ಶಾಸಕಿಯ ಕೆನ್ನೆ ಹಿಂಡಿದ ಸಂಸದ

ಪ್ರಗತಿವಾಹಿನಿ ಸುದ್ದಿ; ಕೋಲ್ಕತ್ತಾ: ಪಶ್ಚಿಮ ಬಂಗಾಳ ಚುನಾವಣಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಇದೀಗ ಟಿಎಂಸಿ ಸಂಸದ ಶಾಸಕಿಯೊಬ್ಬರ ಕೆನ್ನೆ ಹಿಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಸುದ್ದಿಗೋಷ್ಠಿ ಸಂದರ್ಭದಲ್ಲಿ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಬಂಕುರಾ ಕ್ಷೇತ್ರದ ಶಾಸಕಿ ಕೆನ್ನೆ ಹಿಂಡಿದ್ದಾರೆ. ಶಾಸಕಿ ಟಿಕೆಟ್ ಆಕಾಂಕ್ಷಿಯಾಗಿದ್ದರು ಆದರೆ ಟಿಕೆಟ್ ಕೈತಪ್ಪಿದ್ದು ಶಾಸಕಿ ನಿರಾಶರಾಗಿದ್ದಾರೆ. ಹೀಗಾಗಿ ಗಲ್ಲ ಹಿಂಡಿ ಸಮಾಧಾನ ಮಾಡಿದ್ದಾರೆ ಎನ್ನಲಾಗಿದೆ.

Home add -Advt

ಈ ವಿಡಿಯೋವನ್ನು ಲಾಕೆಟ್ ಬ್ಯಾನರ್ಜಿ ಎನ್ನುವವರು ಶೇರ್ ಮಾಡಿದ್ದು, ಮಹಿಳೆಯರನ್ನ ಸಶಕ್ತರನ್ನಾಗಿ ಮಾಡಲಾಗ್ತಿದೆ ಎಂದು ಟಿಎಂಸಿ ಹೇಳುತ್ತಿದೆ. ಆದ್ರೆ ಇಲ್ಲಿ ಅವರದೇ ಸಂಸದರು ಟಿಕೆಟ್ ಸಿಗದ ಶಾಸಕಿಯ ಕೆನ್ನೆಯನ್ನು ಹಿಂಡಿದ್ದಾರೆ. ನಾಚಿಕೆಯಾಗಬೇಕು ಎಂದು ಕಿಡಿಕಾರುದ್ದಾರೆ.

Related Articles

Back to top button