Kannada NewsKarnataka NewsLatest

*ಎಂಗೇಜ್ಮೆಂಟ್ ಸಡಗರದಲ್ಲಿ ದೇವಸ್ಥಾನಕ್ಕೆ ಹೋಗುವಾಗ ದುರಂತ; ಅಪಘಾತದಲ್ಲಿ ಯುವಕ ಸ್ಥಳದಲ್ಲೇ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಎಂಗೇಜ್ಮೆಂಟ್ ಸಡಗರದಲ್ಲಿದ್ದ ಯುವಕ ದೇವಸ್ಥಾನಕ್ಕೆಂದು ಹೋಗುತ್ತಿದ್ದ ವೇಳೆ ಭೀಕರ ಅಪಘಾತ ಸಂಭವಿಸಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

Home add -Advt

ಕಾರು ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 28 ವರ್ಷದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ವಿಶಾಲ್ ಮೃತ ದುರ್ದೈವಿ. ಕೃಷಿ ಇಲಾಖೆಯಲ್ಲಿ ಟೆಕ್ನಿಕಲ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಹೊಳಲ್ಕೆರೆ ತಾಲೂಕಿನ ತಿರುಮಲ ಡಾಬಾ ಬಳಿ ಈ ದುರಂತ ಸಂಭವಿಸಿದೆ.

ವಿಶಾಲ್ ಗೆ ನಾಳೆ ಭಾನುವಾರ ಶಿವಮೊಗ್ಗ ಮೂಲದ ಯುವತಿಯೊಂದಿಗೆ ನಿಶ್ಚಿತಾರ್ಥ ನಿಗದಿಯಾಗಿತ್ತು. ನಿಶ್ಚಿತಾರ್ಥದ ಸಡಗರದ ನಡುವೆ ಇಂದು ಆಂಜನೇಯ ದೇವಸ್ಥಾನಕ್ಕೆಂದು ಕಾರಿನಲ್ಲಿ ಹೊರಟಿದ್ದ. ಈ ವೇಳೆ ಕಾರು ಹಾಗೂ ಲಾರಿ ನಡುವೆ ಡಿಕ್ಕಿಯಾಗಿ ಸ್ಥಳದಲ್ಲೇ ವಿಶಾಲ್ ಕೊನೆಯುಸಿರೆಳೆದಿದ್ದಾನೆ.

ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Related Articles

Back to top button