Belagavi NewsBelgaum NewsKannada NewsKarnataka NewsNational
*ಹೇಮಂತ ನಿಂಬಾಳಕರ್ ಗೆ ಪಿತೃವಿಯೋಗ*

ಪ್ರಗತಿವಾಹಿನಿ ಸುದ್ದಿ: ಮಹಾರಾಷ್ಟ್ರದ ಕೊಲ್ಹಾಪುರ ನಿವಾಸಿ ಮಧುಕರ್ ಬಲವಂತರಾವ್ ನಿಂಬಾಳ್ಕರ್ (85) ಕೊನೆಯುಸಿರೆಳೆದರು.
ಪುತ್ರ ,ಹಿರಿಯ ಐಪಿಎಸ್ ಅಧಿಕಾರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್ ಎಂ.ನಿಂಬಾಳ್ಕರ್ ಸೇರಿದಂತೆ ಪತ್ನಿ, ಸೊಸೆ, ಮೊಮ್ಮಕ್ಕಳು ಅಪಾರ ಬಂಧು ಬಳಗವನ್ನು ಅವರು ಅಗಲಿದ್ದಾರೆ.
ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಕೊಲ್ಲಾಪುರದ ಶುಕ್ರವಾರ ಪೇಟೆಯ ಅವರ ಸ್ವಗೃಹದಲ್ಲಿ ವ್ಯವಸ್ಥೆ ಮಾಡಲಾಗಿದೆ. ಬುಧವಾರ ಪೇಟೆಯ ಪಂಚಗಂಗಾ ಮುಕ್ತಿಧಾಮದಲ್ಲಿ ಅಂತ್ಯಕ್ರಿಯೆ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.



