Latest

ಗ್ರಾಮಪಂಚಾಯಿತಿ ಚುನಾವಣೆ ರಾಜಕೀಯ: ಸಾವಿರಾರು ಅಡಿಕೆ ಸಸಿ ನಾಶ

ಪ್ರಗತಿವಾಹಿನಿ ಸುದ್ದಿ, ಶಿವಮೊಗ್ಗ – ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ನಾಶಪಡಿಸಲಾಗಿರುವ ಸಾವಿರಾರು ಅಡಿಕೆ ಸಸಿಗಳೊಂದಿಗೆ ಕಾಂಗ್ರೆಸ್ ಕಾರ್ಯಕರ್ತರು ಮೆರವಣಿಗೆ ನಡೆಸಿದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ ನೇತೃತ್ವದಲ್ಲಿ ಇಂದು ಸಂಜೆ ತೀರ್ಥಹಳ್ಳಿ ರಸ್ತೆಯಲ್ಲಿ ಬೀದಿಗಿಳಿದು ಮೆರವಣಿಗೆ ನಡೆಸಿದ ಕಾರ್ಯಕರ್ತರು ಅರಣ್ಯ ಕಚೇರಿ ಎದುರು  ಧರಣಿ ನಡೆಸಿದರು.

Home add -Advt

ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಯ ಅಡಿಕೆ ಸಸಿಗಳನ್ನ ನಾಶಪಡಿಸಿದ್ದು ಬಿಜೆಪಿಯವರು ಎಂದು ಆರೋಪಿಸಿರುವ ಕಾಂಗ್ರೆಸ್, ನಾಶಪಡಿಸಿದ ಅಡಿಕೆ ಸಸಿಗಳನ್ನ ಹಿಡಿದು ತೀರ್ಥಹಳ್ಳಿಯ ಮುಖ್ಯರಸ್ತೆಯಲ್ಲಿ ಮೆರವಣಿಗೆ ಮೂಲಕ ಬಂದು ಪ್ರತಿಭಟನೆ ನಡೆಸಿದ್ದಾರೆ.

ಚುನಾವಣಾ ಕಣದಿಂದ ಹಿಂದೆ ಸರಿಯದಿದ್ದಕ್ಕೆ 1 ಸಾವಿರಕ್ಕು ಅಧಿಕ ಅಡಿಕೆ ಗಿಡಗಳನ್ನ ನಾಶಗೊಳಿಸಿದ್ದು , ಘಟನೆಯ ಹಿಂದೆ ಶಾಸಕ ಆರಗ ಜ್ಞಾನೇಂದ್ರ ಕೈವಾಡವಿದೆ ಎಂದು ಕಾಂಗ್ರೆಸ್ ಆರೋಪಿಸಿದೆ

ನಾಶಗೊಳಿಸಿದ ಅಡಿಕೆ ಗಿಡ ಕೈಯಲ್ಲಿ ಹಿಡಿದುಕೊಂಡು ನಗರದ ಹಲವೆಡೆ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನಾ ಮೆರವಣಿಗೆ ನಡೆಸಿ ಅರಣ್ಯ ಇಲಾಖೆ ಮುಂದೆ ಧರಣಿ ನಡೆಸಿದರು.

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆರಗ ಗ್ರಾಮದಲ್ಲಿ ಗ್ರಾಪಂ ಅಭ್ಯರ್ಥಿ ಮನೆಯ ಮುಂಭಾಗ ಇದ್ದ ಕಾಂಪೌಂಡ್ ನ್ನು ಅರಣ್ಯ ಇಲಾಖೆ ನೆಲಸಮ ಮಾಡಿದೆ. ಬೀಸು ಗ್ರಾಮ ಪಂಚಾಯತಿಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಪ್ರೀಯಾ ರಂಜನ್ ಅವರ ಜಮೀನು ಇದಾಗಿದ್ದು ಇವರನ್ನ ಚುನಾವಣಾ ಕಣದಿಂದ ನಿವೃತ್ತಿಯಾಗುವಂತೆ ಬಿಜೆಪಿಯವರು ಬೆದರಿಸುತ್ತಿದ್ದರು ಎಂದು ಆರೋಪಿಸಿ ಕಾಂಗ್ರೆಸ್ ಪ್ರತಿಭಟಿಸಿದೆ.

Related Articles

Back to top button