Kannada NewsKarnataka NewsLatestWorld

*ಇನ್ಫೋಸಿಸ್ ಸಿಇಒ ನೇಪಾಳ ಪ್ರವಾಹದಲ್ಲಿ ನಾಪತ್ತೆ*

ಪ್ರಗತಿವಾಹಿನಿ ಸುದ್ದಿ: ಭೀಕರ ಪ್ರವಾಹದಿಂದತತ್ತರಿಸಿರುವ ನೇಪಾಳದಲ್ಲಿ ಸಾವಿರಾರು ಜನರು ಕಣ್ಮರೆಯಾಗಿದ್ದಾರೆ. ನೇಪಾಳ ಜಲಪ್ರಳಯದಲ್ಲಿ 500ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಸಾವಿರಾರು ಜನರು ಕಾಣೆಯಾಗಿದ್ದಾರೆ. ಈ ನಡುವೆ ನೇಪಾಳ ಪ್ರವಾಸಕ್ಕೆ ತೆರಳಿದ್ದ ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್‌ನ ಸಿಇಒ ಲಕ್ಷ್ ಗೋಪಿಸೆಟ್ಟಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ನೇಪಾಳದ ಪ್ರವಾಹದ ಬೆನ್ನಲ್ಲೇ ವೈಯಕ್ತಿಕ ಪ್ರವಾಸಕ್ಕೆ ಹೋಗಿದ್ದ ಲಕ್ಷ ಗೋಪಿ ಸೆಟ್ಟಿ ಸಂಪರ್ಕಕ್ಕೆ ಸಿಗುತ್ತಿಲ್ಲ. ಈ ಬಗ್ಗೆ ಇನ್ಫೋಸಿಸ್ ಕಂಪನಿ ಮಾಹಿತಿ ನೀಡಿದೆ.

ಲಕ್ಷ್ ಗೋಪಿಸೆಟ್ಟಿ ನೇಪಾಳಕ್ಕೆ ಪ್ರವಾಸಕ್ಕೆ ಹೋಗಿದ್ದರು. ಆದರೆ ಈಗ ಅವರು ಯಾವುದೇ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಇನ್ಫೋಸಿಸ್ ಸಂಸ್ಥೆ ದೃಢಪಡಿಸಿದೆ. ನೇಪಾಳದಲ್ಲಿ ಪ್ರವಾಹ ಪರಿಸ್ಥಿತಿ ಬಳಿಕ ಈ ಘಟನೆ ನಡೆದಿದೆ.

ಲಕ್ಷ್ ಗೋಪಿಸೆಟ್ಟಿ ಅವರ ಸುರಕ್ಷತೆ ಮತ್ತು ಆರೋಗ್ಯದ ಬಗ್ಗೆ ಕಂಪನಿ ಕಳವಳ ವ್ಯಕ್ತಪಡಿಸಿದೆ. ಸಂಬಂಧಿತ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದ್ದು ಅವರ ಕುರಿತು ಮಾಹಿತಿ ಕಲೆಹಾಕಿ ಸಂಪರ್ಕ ಸಾಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದೆ. ಕುಟುಂಬದವರೊಂದಿಗೂ ನಿರಂತರ ಸಂಪರ್ಕದಲ್ಲಿದ್ದು, ಅಗತ್ಯವಿರುವ ಎಲ್ಲ ನೆರವನ್ನು ನೀಡಲಾಗುತ್ತಿದೆ ಎಂದು ಇನ್ಫೋಸಿಸ್ ತಿಳಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button