Belagavi NewsBelgaum NewsKannada NewsKarnataka News

ಸಿಸಿಬಿ ಪೊಲೀಸರ ಕಾರ್ಯಾಚರಣೆ: ಅಕ್ರಮ ಸಾರಾಯಿ ಮಾರಾಟಗಾರನ ಬಂಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ದಿನಾಂಕ: 28/03/2024 ರಂದು ಬೆಳಗಾವಿ ನಗರದ ಹಿಂಡಲಗಾ ಲಕ್ಷ್ಮೀ ನಗರದ ಸಾರ್ವಜನಿಕ ಸ್ಥಳದಲ್ಲಿ ಗೋವಾ ರಾಜ್ಯದ ಅಕ್ರಮ ಸರಾಯಿ ಮಾರಾಟ ಹಾಗೂ ಸಾಗಾಟ ಮಾಡುತ್ತಿದ್ದಾನೆಂದು ಬಂದ ಖಚಿತ ಮಾಹಿತಿಯಂತೆ ಪಿಐ ಸಿಸಿಬಿ ಮತ್ತು ಅವರ ಸಿಬ್ಬಂದಿ ತಂಡ ದಾಳಿ ಮಾಡಿದೆ.

ಹಿಂಡಲಗಾದ ರಾಜೇಶ ಕೇಶವ ನಾಯಕ (41) ಎಂಬಾತನನ್ನು ಬಂಧಿಸಲಾಗಿದ್ದು, ಅವನ ಬಳಿ ಇದ್ದ, ವಿವಿಧ ಕಂಪನಿಯ ಗೋವಾ ರಾಜ್ಯದ ಸುಮಾರು 186.5 ಲೀಟರ್, ರೂ.9,09,750/- ಬೆಲೆಯ ಅಕ್ರಮ ಸರಾಯಿ ತುಂಬಿ ಬಾಟಲಿಗಳನ್ನು, ಕೃತ್ಯಕ್ಕೆ ಬಳಸಿದ ಕಾರು ಹಾಗೂ ನಗದು ಹಣ ಸೇರಿ ಒಟ್ಟು 10,60,100/- ಮೌಲ್ಯದ ವಸ್ತುಗಳನ್ನು ಜಪ್ತಪಡಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.

ಈ ದಾಳಿಯಲ್ಲಿ ಪಾಲ್ಗೊಂಡ ಸಿಸಿಬಿ ಘಟಕದ ಪಿಐ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಪೊಲೀಸ್ ಆಯುಕ್ತರು, ಡಿಸಿಪಿ (ಕಾ&ಸು), ಡಿಸಿಪಿ (ಅ&ಸಂ) ಶ್ಲಾಘಿಸಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button