Latest

ರಮೇಶ್ ಜಾರಕಿಹೊಳಿಗೆ ಕೊರೊನಾ ಸೋಂಕು

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸಿಡಿ ಪ್ರಕರಣ ಹೊಸ ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಎಸ್ ಐಟಿ ವಿಚಾರಣೆಗೆ ಇಂದು ಹಾಜರಾಗಬೇಕಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಇದೀಗ ಕೊರೊನಾ ಸೋಂಕು ತಗುಲಿದೆ ಎಂದು  ಸಚಿವ ಭೈರತಿ ಬಸವರಾಜ್ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಸಚಿವ ಭೈರತಿ ಬಸವರಾಜ್ ಈ ಬಗ್ಗೆ ಮಾಹಿತಿ ನೀಡಿದ್ದು, ಬೆಳಗಾವಿ ಚುನಾವಣಾ ಪ್ರಚಾರಕ್ಕೆ ಕರೆಯಲು ರಮೇಶ್ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿಗೆ ಕರೆ ಮಾಡಿದ್ದೆ. ಆಗ ರಮೇಶ್, ತಮಗೆ ಕೊರೊನಾ ಬಂದಿದೆ. ಹಾಗಾಗಿ ಪ್ರಚಾರಕ್ಕೆ ಬರುವುದಿಲ್ಲ. ಗುಣಮುಖನಾದ ಬಳಿಕ ಬರುವುದಾಗಿ ಹೇಳಿದ್ದಾರೆ ಎಂದರು.

ಸಚಿವರ ಹೇಳಿಕೆ ಪ್ರಕಾರ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಕೊರೊನಾ ಸೋಂಕು ತಗುಲಿದೆ. ಇದೇ ಕಾರಣಕ್ಕೆ ಅವರು ಎಸ್ ಐಟಿ ವಿಚಾರಣೆಗೆ ಕೂಡ ಹಾಜರಾಗುವುದು ಅನುಮಾನ ಎನ್ನಲಾಗಿದೆ.

ವಿಚಾರಣೆಗೆ ಹಾಜರಾಗ್ತಾರಾ ರಮೇಶ್ ಜಾರಕಿಹೊಳಿ?

Related Articles

Back to top button