Latest

ರಾಜೀವ್ ಹಂತಕರ ಬಿಡುಗಡೆ ಪ್ರಶ್ನಿಸಿ ಮೇಲ್ಮನವಿ

ಪ್ರಗತಿ ವಾಹಿನಿ ಸುದ್ದಿ, ನವದೆಹಲಿ: ರಾಜೀವ್ ಹಂತಕರ ಪೈಕಿ ಆರು ಜನರನ್ನು ಸುಪ್ರಿಂ ಕೋರ್ಟ್ ಬಿಡುಗಡೆ ಮಾಡಿದ್ದು, ಇದನ್ನು ಪ್ರಶ್ನಿಸಿ ಕೇಂದ್ರ ಸರಕಾರ ಮೇಲ್ಮನವಿ ಸಲ್ಲಿಸಿದೆ.

1991ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ತಮಿಳು ನಾಡಿನಲ್ಲಿ ಎಲ್ ಟಿಟಿಇ ಉಗ್ರರು ಹತ್ಯೆ ಮಾಡಿದ್ದರು. ಈ ಪ್ರಕರಣದ ಆರು ಆರೋಪಿಗಳನ್ನು ಬಿಡುಗಡೆ ಮಾಡಲು 2016 ರಲ್ಲಿ ತಮಿಳುನಾಡು ಹೈ ಕೋರ್ಟ್ ಶಿಫಾರಸ್ಸು ಮಾಡಿತ್ತು. ಕಳೆದ ನ. 11 ರಂದು ಸುಪ್ರಿಂ ಕೋರ್ಟ್ ಆರು ಆರೋಪಿಗಳನ್ನು ಬಿಡುಗಡೆ ಮಾಡಿದೆ.

ಆದರೆ ಆರೋಪಿಗಳ ಬಿಡುಗಡೆ ವಿರುದ್ಧ ಮೇಲ್ಮನವಿ ಸಲ್ಲಿಸಿರುವ ಕೇಂದ್ರ ಸರಕಾರ, ಆರೋಪಿಗಳ ಬಿಡುಗಡೆ ವಿರುದ್ಧ ವಾದ ಮಂಡಿಸಲು ಅನುಮತಿ ಕೋರಿದೆ.

ಬಿಜೆಪಿಯ ಹಿರಿಯ ನಾಯಕಿ ಗಿರಿಜಾ ಮಠಪತಿ ನಿಧನ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button