Latest

ಚಿಕ್ಕಮಗಳೂರಿನಲ್ಲಿ ಇಬ್ಬರ ಮೇಲೆ ಗುಂಡಿನ ದಾಳಿ

ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ರಿಯಲ್ ಎಸ್ಟೇಟ್ ಉದ್ಯಮಿಗಳ ಜತೆ ವ್ಯವಹಾರ ಮಾಡುತ್ತಿದ್ದಾಗ ಮಾತಿಗೆ ಮಾತು ಬೆಳೆದು ಬಿಜೆಪಿ ಮುಖಂಡನ ಸಂಬಂಧಿ ಹಾಗೂ ಉಪನ್ಯಾಸಕರ ಮೇಲೆ ಗುಂದಿನ ದಾಳಿ ನಡೆಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬಾಣೂರು ಗ್ರಾಮದಲ್ಲಿ ನಡೆದಿದೆ.

ಚಿಕ್ಕಮಗಳೂರು ನಗರದ ಬಿಜೆಪಿ ಮುಖಂಡ ಸಂಬಂಧಿ ಕಲ್ಯಾಣ್ ಕುಮಾರ್ ಹಾಗೂ ಖಾಸಗಿ ಶಾಲೆಯ ಉಪನ್ಯಾಕ ಸುಮಂತ್ ಗೆ ಗುಂಡೇಟು ಬಿದ್ದಿದೆ. ಗುಂಡೇಟು ಬಿದ್ದ ಇಬ್ಬರಿಗೂ ಚಿಕ್ಕಮಗಳೂರಿನ ಕೆ.ಆರ್.ಎಸ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಬೆಂಗಳೂರಿಗೆ ರವಾನಿಸಲಾಗಿದೆ.

Home add -Advt

ಇಬ್ಬರ ಮೇಲೆ ಫೈರಿಂಗ್ ಮಾಡಿದ ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಉದ್ಯಮಿಗಳು ನಾಪತ್ತೆಯಾಗಿದ್ದಾರೆ. ಗುಂಡೇಟು ತಿಂದ ಕಲ್ಯಾಣ್ ಕುಮಾರ್ ಹಾಗೂ ಸುಮಂತ್ ದೇಹದಲ್ಲಿ ಗುಂಡುಗಳು ಹಾಗೇ ಇದ್ದು ಅವುಗಳನ್ನ ತೆಗೆಯಲು ಇಬ್ಬರನ್ನೂ ಬೆಂಗಳೂರಿಗೆ ರವಾನಿಸಲಾಗಿದೆ. ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಖರಾಯಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Related Articles

Back to top button