Kannada NewsKarnataka News

ಮುಸ್ಲಿಂ ಸಮಾಜದಿಂದ ಸಚಿವೆ ಶಶಿಕಲಾ ಜೊಲ್ಲೆಗೆ ಬೆಂಬಲ


ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ತಾಲೂಕಿನ ಬೋರಗಾವ ಪಟ್ಟಣದ ಮುಸ್ಲಿಂ ಬಾಂಧವರು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸಚಿವೆ ಶಶಿಕಲಾ ಜೊಲ್ಲೆಯವರಿಗೆ ಬೆಂಬಲಿಸಲು ನಿರ್ಣಯ ಕೈಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಮುಸ್ಲಿಂ ಸಮಿತಿ ಹಾಗೂ ಸಮಾಜದ ಇಬ್ರಾಹಿಂ ಮೋಮಿನ ಮಾತನಾಡಿ ’ಮುಸ್ಲಿಂ ಸಮಾಜದ ಅಭಿವೃದ್ಧಿಗೆ ಸಚಿವೆ ಶಶಿಕಲಾ ಜೊಲ್ಲೆಯವರ ಕೊಡುಗೆ ಅಪಾರವಾಗಿದೆ. ೩೫ ಲಕ್ಷ ರೂ.ದಲ್ಲಿ ಶಾದಿಮಹಲ್ ನಿರ್ಮಾಣ, ೨೫ ಲಕ್ಷ ರೂ.ದಲ್ಲಿ ಈದ್ಗಾ ಮೈದಾನದ ರಿಪೇರಿ, ೨೫ ಲಕ್ಷ ರೂ.ದಲ್ಲಿ ಸ್ಮಶಾನಭೂಮಿ ರಕ್ಷಣಾ ಗೋಡೆ ನಿರ್ಮಾಣ, ೨೦ ಲಕ್ಷ ರೂ.ದಲ್ಲಿ ಈದ್ಗಾ ರಕ್ಷಣಾ ಗೋಡೆ ಹಾಗೂ ಮಳಿಗೆ ನಿರ್ಮಾಣ, ಗ್ರಾಮದೇವತೆ ಬಾವಾಢಂಗವಲಿ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಕಲ್ಪಿಸಿದ್ದಾರೆ. ನಮ್ಮ ಏಳಿಗೆಗೆಗೆ ಶ್ರಮಿಸುತ್ತಿರುವ ಸಚಿವೆ ಜೊಲ್ಲೆಯವರಿಗೆ ನಮ್ಮ ಬೆಂಬಲ ಇರಲಿದೆ’ ಎಂದರು.
ಹಿರಿಯ ನಾಗರಿಕ ಮುನ್ನಾ ಜಮಾದಾರ ಮಾತನಾಡಿದರು. ಈ ಸಂದರ್ಭದಲ್ಲಿ ಮುಸ್ಲಿಂ ಸಮಿತಿಯ ಅಧ್ಯಕ್ಷ ಪರ್ವೇಜ್ ಅಫರಾಜ್, ಉಪಾಧ್ಯಕ್ಷ ಬಬನ ಮುಜಾವರ, ಕಾರ್ಯದರ್ಶಿ ಆಯುಬ ಮಕಾನದಾರ, ಮುನ್ನಾ ಜಮಾದಾರ, ರೇಹಮಾನ ಜಮಾದಾರ, ರಾಜು ಮಕಾನದಾರ, ರಿಯಾಜ ಮೋಮಿನ, ಸದ್ದಾಂ ಜಮಾದಾರ, ಅಕ್ತರ ಮುಜಾವರ, ಮೊದಲಾದವರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಸಮಾಜ ಬಾಂಧವರು ಉಪಸ್ಥಿತರಿದ್ದರು.

https://pragati.taskdun.com/door-to-door-campaign-by-minister-shashikala-jolla-in-akkola-village/

Home add -Advt

Related Articles

Back to top button