Latest

ಸಂಜೆ ಸಿಎಂ ಬಿಎಸ್ ವೈ ಸುದ್ದಿಗೋಷ್ಠಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಸಂಜೆ  ಸುದ್ದಿಗೋಷ್ಠಿ ಕರೆದಿದ್ದು, ತೀವ್ರ ಕುತೂಹಲಕ್ಕೆ ಮೂಡಿಸಿದೆ.

ಸಂಜೆ 5 ಗಂಟೆಗೆ ಸಚಿವರುಗಳ ಜೊತೆ ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸಲಿದ್ದು, ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟ ಅನುಭವಿಸುತ್ತಿರುವವರಿಗೆ ಆರ್ಥಿಕ ಪ್ಯಾಕೇಜ್ ಘೋಷಿಸಲಿದ್ದಾರೆಯೇ ಎನ್ನುವ ಪ್ರಶ್ನೆ ಮೂಡಿದೆ.

Home add -Advt

ಜೊತೆಗೆ, 18 -44 ವರ್ಷದವರೆಗಿನವರಿಗೆ ಕೊರೊನಾ ಲಸಿಕೆ ತಾತ್ಕಾಲಿಕ ಸ್ಥಗಿತದ ಬಗ್ಗೆಯೂ ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆ ಇದ್ದು, ಮತ್ತೆ ಲಸಿಕೆ ನೀಡಿಕೆ ಆರಂಭ ಮಾಡುವ ಕಾಲಮಿತಿ ಕುರಿತೂ ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ.

ರಾಜ್ಯದಲ್ಲಿ ಸಧ್ಯ ಜಾರಿಯಲ್ಲಿರುವ ಲಾಕ್ ಡೌನ್ ಬಗ್ಗೆ ತಜ್ಞರೂ ತೃಪ್ತಿ ವ್ಯಕ್ತಪಡಿಸಿದ್ದು, ಅದನ್ನು ಇನ್ನಷ್ಟು ಕಠಿಣಗೊಳಿಸುವ ಯೋಚನೆ ಸಧ್ಯಕ್ಕೆ ಸರಕಾರದ ಮುಂದಿಲ್ಲ ಎನ್ನಲಾಗಿದೆ.

 

ಆಕ್ಸಿಜನ್ ಕೊರತೆಯಿಂದಲೇ 24 ರೋಗಿಗಳ ಸಾವು; ಸಮಿತಿ ಸ್ಪಷ್ಟನೆ

Related Articles

Back to top button