ಪ್ರಗತಿ ವಾಹಿನಿ ಸುದ್ದಿ, ನವದೆಹಲಿ: ನೇಪಾಳದ ಪೋಖಾರಾದಲ್ಲಿ ಭಾನುವಾರ ವಿಮಾನ ದುರಂತದ ಪ್ರಕರಣದಲ್ಲಿ ಮನಕಲಕುವ ಘಟನೆಯೊಂದು ಬೆಳಕಿಗೆ ಬಂದಿದೆ.
ಯೇತಿ ಏರ್‍ಲೈನ್ಸ್‍ಗೆ ಸೇರಿದ ಈ ವಿಮಾನದ ಸಹ ಫೈಲೆಟ್ ಆಗಿದ್ದ ಅಂಜು ಕಾಥಿವಾಡ (44) ಅಪಘಾತದಲ್ಲಿ ಮೃತರಾಗಿದ್ದಾರೆ. ವಿಚಿತ್ರವೆಂದರೆ ಫೈಲೆಟ್ ಆಗಿದ್ದ ಇವರ ಪತಿ ದೀಪಕ್ ಪೋಕ್ರೆಲ್ ಸಹ 16 ವರ್ಷದ ಹಿಂದೆ ವಿಮಾನ ಅಪಘಾತದಲ್ಲಿಯೇ ಮೃತಪಟ್ಟಿದ್ದರು. ಅದೂ ಸಹ ಯೇತಿ ಏರ್‍ಲೈನ್ಸ್‍ಗೆ ಸೇರಿದ್ದ ವಿಮಾನವೇ ಆಗಿತ್ತು.
ದೀಪಕ್ ಅವರು ಯೇತಿ ಏರ್‍ಕೈನ್ಸ್‍ನ ಟ್ವಿನ್ ಸಿಟರ್ ವಿಮಾನವನ್ನು ಚಾಲನೆ ಮಾಡುತ್ತಿದ್ದಾಗ ಜುಮ್ಲಾ ಪ್ರದೇಶದಲ್ಲಿ ವಿಮಾನ ಅಪಘಾತಕ್ಕೀಡಾಗಿ ಮೃತಪಟ್ಟಿದ್ದರು ಎಂದು ಯೇತಿ ಏರ್‍ಲೈನ್ಸ್‍ನ ವಕ್ತಾರ ತಿಳಿಸಿದ್ದಾರೆ.
ಇನ್ನು, ಈ ವಿಮಾನ ದುರಂತದಲ್ಲಿ ಯಾವ ಪ್ರಯಾಣಿಕರೂ ಬದುಕುಳಿದಿರುವ ಸಾಧ್ಯತೆ ಇಲ್ಲ ಎಂದು ಶೋಧ ಕಾರ್ಯ ನಡೆಸುತ್ತಿರುವ ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನದಲ್ಲಿದ್ದ ಎಲ್ಲ 72 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಚಾಲನೆ ನೀಡಿದ್ದ ಗಂಗಾ ವಿಲಾಸದ ಸಂಚಾರ ಮೂರನೆ ದಿನಕ್ಕೇ ಸ್ಥಗಿತ
https://pragati.taskdun.com/ganga-vilas-cruise-stuck-on-day-3/
ಕಾಹೇರ್ ನ ಉಪಕುಲಪತಿಯಾಗಿ ಡಾ. ನಿತಿನ್ ಗಂಗಾನೆ ನೇಮಕ
https://pragati.taskdun.com/dr-nithin-gangane-assumed-as-vice-chancellor-of-kaher/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ