Belagavi NewsBelgaum NewsKannada NewsKarnataka NewsPolitics

*ಬೆಳಗಾವಿಯಲ್ಲಿ ಪೆಟ್ರೋಲ್, ಡಿಸೇಲ್ ಹಾಕಿಸಿಕೊಳ್ಳಲು ಮುಗಿಬಿದ್ದ ವಾಹನ ಸವಾರರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಸ್ರೇಲ್, ಅಮೆರಿಕಾ- ಇರಾನ್ ಯುದ್ಧದ ಪರಿಣಾಮ ಎಲ್ ಪಿ ಜಿ, ಗ್ಯಾಸ್, ಪೇಟ್ರೋಲಿಯಂ ಉತ್ಪನ್ನಗಳು ಪೂರೈಕೆಯಲ್ಲಿ ವ್ಯತಯವಾಗುತ್ತಿದ್ದು, ಇಂದಿನಿಂದ ಪೆಟ್ರೋಲ್, ಡಿಸೆಲ್ ಸಿಗಲ್ಲ ಎಂಬ ವದಂತಿ ಹಬ್ಬಿರುವ ಹಿನ್ನೆಲೆಯಲ್ಲಿ ವಾಹನ ಸವಾರರು ಇಂಧನ ಹಾಕಿಸಿಕೊಳ್ಳಲು ಮುಗಿಬಿದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ  ಪೆಟ್ರೋಲ್, ಡಿಸೇಲ್ ಸಿಗೊದಿಲ್ಲ ಎಂಬ ಸಂದೇಶ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಪೆಟ್ರೋಲ್ ಡಿಸೇಲ್ ಗೆ ಜನ ಮುಗಿಬಿದಿದ್ದಾರೆ.

ತಡರಾತ್ರಿವರೆಗೂ ಬೆಳಗಾವಿ ನಗರದ ಸದಾಶಿವ ನಗರ, ಅಜಮ್ ನಗರ, ವೈಭವ್ ನಗರ, ಕೊಲ್ಲಾಪುರ ಸರ್ಕಲ್, ನೆಹರು ನಗರ, ಸೇಠ್ ಪೆಟ್ರೋಲ್ ಬಂಕ್ ವೈಭವ ನಗರ, ಗಾಂಧಿ ನಗರ, ಚೆನ್ನಮ್ಮ ಸರ್ಕಲ್ ಹೀಗೆ ನಗರದಲ್ಲಿ ಅನೇಕ ಪೆಟ್ರೋಲ್ ಬಂಕ್ ಗಳ್ಲಿ ಜನ ಮುಗಿಬಿದಿದ್ದರು.

Home add -Advt

ನಾಲ್ಕೈದು ದಿನಗಳ ಕಾಲ ಪೆಟ್ರೋಲ್ ಸಿಗೊದಿಲ್ಲ ಎಂಬ ವ್ಯಾಟ್ಸಪ್ ಮೆಸೇಜ್ ವೈರಲ್ ಹಿನ್ನೆಲೆ ಆತಂಕಕ್ಕೆ ಒಳಗಾದ ಬೆಳಗಾವಿ ಜನ ಸರದಿ ಸಾಲಿನಲ್ಲಿ ನಿಂತು ಪೆಟ್ರೋಲ್ ಹಾಕಿಸಿಕೊಂಡಿದ್ದಾರೆ.

ತಮ್ಮ ವಾಹನಗಳ ಜೊತೆ ವಾಟರ್ ಬಾಟಲ್ ನೀರಿನ ಟ್ಯಾಂಕ್ ಗಳಲ್ಲಿ ಪೆಟ್ರೋಲ್ ಖರೀದಿಸಲು ಮುಂದಾಗಿದ್ದಾರೆ. ವಾಹನ ಸವಾರರನ್ನು ನಿಯಂತ್ರಣಕ್ಕೆ ತರಲು ಪೆಟ್ರೋಲ್ ಸಿಬ್ಬಂದಿಗಳು ಹರಸಾಹಸ ನಡೆಸಿದ್ದಾರೆ.

Related Articles

Back to top button