Latest

ಗೋಡೆ ಬಿದ್ದು ಬಾಲಕನ ಸಾವು: ಜಿಲ್ಲಾಡಳಿತದ ತ್ವರಿತ ಸ್ಪಂದನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಖಾನಾಪುರ ತಾಲೂಕಿನ ಬೀಡಿ ಹೋಬಳಿಯ ಚುಂಚವಾಡ ಗ್ರಾಮದಲ್ಲಿ ಮಳೆಯಿಂದ ಗೋಡೆ ಬಿದ್ದು ಮೃತಪಟ್ಟಿರುವ ಅನಂತರಾಜ ಧರಣೇಂದ್ರ ಪಾಶೆಟ್ಟಿ(16) ಅವರ ವಾರಸುದಾರರಿಗೆ ತಕ್ಷಣವೇ 5 ಲಕ್ಷ ರೂ. ಪರಿಹಾರವನ್ನು ಆರ್ ಟಿಜಿ‌ಎಸ್ ಮೂಲಕ ಜಮಾ‌ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದ್ದಾರೆ.

ಪ್ರಕೃತಿ ವಿಕೋಪದಿಂದ ಈ ಘಟನೆ ಸಂಭವಿಸಿರುವ ಹಿನ್ನೆಲೆಯಲ್ಲಿ ನಿಯಮಾವಳಿ ಪ್ರಕಾರ ಮೃತ ಬಾಲಕನ ತಂದೆ ಧರಣೇಂದ್ರ ಪಾಶೆಟ್ಟಿ ಇವರ ಬ್ಯಾಂಕ್ ಖಾತೆಗೆ ಪರಿಹಾರ ಧನವನ್ನು ಖಾನಾಪುರ ತಹಸೀಲ್ದಾರರ ಪಿಡಿ ಖಾತೆಯಿಂದ ಜಮಾ ಮಾಡಲಾಗಿರುತ್ತದೆ.

Home add -Advt

ದುರಂತದ ಕುರಿತು ವರದಿ ಪಡೆದುಕೊಂಡ ಕೆಲವೇ ಗಂಟೆಗಳಲ್ಲಿ ಮೃತರ ವಾರಸುದಾರರಿಗೆ ಪರಿಹಾರಧನವನ್ನು ನೀಡುವ ಮೂಲಕ ಜಿಲ್ಲಾಡಳಿತವು ಅತ್ಯಂತ ತ್ವರಿತವಾಗಿ ಸ್ಪಂದಿಸಿದೆ.

ಇನ್ಮುಂದೆ ಸರ್ಕಾರಿ ಕಚೇರಿಗಳಲ್ಲಿ ಫೋಟೋ, ವಿಡಿಯೋ ಚಿತ್ರೀಕರಣಕ್ಕೆ ನಿಷೇಧ

 

Related Articles

Back to top button