Karnataka News

*ಸಂಭ್ರಮಿಸಿ ತೆರಳುವ ವೇಳೆ ಎರಡು ಬೈಕ್ ಗಳ ನಡುವೆ ಅಪಘಾತ: ಓರ್ವ ಸಾವು*

ಪ್ರಗತಿವಾಹಿನಿ ಸುದ್ದಿ: ಐಪಿಎಲ್ ಫೈನಲ್‌ನಲ್ಲಿ ಆರ್‌ಸಿಬಿ ತಂಡ ಗೆಲುವು ಸಾಧಿಸಿದ ಹಿನ್ನೆಲೆ ರಾಜ್ಯಾದ್ಯಂತ ತಡರಾತ್ರಿ ಎಲ್ಲೆಡೆ ಸಂಭ್ರಮಾಚರಣೆ ನಡೆಸಲಾಗಿದೆ. ಇದೇ ಸಂಭ್ರಮಾಚರಣೆ ವೇಳೆ ಎರಡು ಬೈಕ್‌ಗಳ ನಡುವೆ ಭೀಕರ ಅಪಘಾತ ಸಂಭವಿಸಿ ಯುವಕನೊಬ್ಬ ದುರ್ಮರಣ ಹೊಂದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಮೃತ ಯುವಕನನ್ನು ವೆಂಕಟೇಶ್ ನಗರದ ನಿವಾಸಿ ಅಭಿನಂದನ್ (21) ಎಂದು ಗುರುತಿಸಲಾಗಿದೆ. ಭೀಕರ ಅಪಘಾತ ಉಷಾ ನರ್ಸಿಂಗ್ ಹೋಂ ಸರ್ಕಲ್ ಬಳಿಯ ರವೀಂದ್ರ ನಗರ ಗಣಪತಿ ದೇವಾಲಯದ ಮುಂದೆ ನಡೆದಿದೆ.

Home add -Advt

ಆರ್‌ಸಿಬಿ ತಂಡ ಗೆದ್ದ ಖುಷಿಯಲ್ಲಿ ಯುವಕರು ಸಂಭ್ರಮಾಚರಣೆಗಾಗಿ ಬೈಕ್‌ಗಳಲ್ಲಿ ಹೊರಟಿದ್ದರು. ಈ ವೇಳೆ ಎರಡು ಬೈಕ್‌ಗಳ ನಡುವೆ ಡಿಕ್ಕಿಯಾಗಿದೆ. ಇದರಿಂದ ಅಭಿನಂದನ್ ತೀವ್ರವಾದ ಗಾಯಗಳಿಂದಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಶಿವಮೋಗ್ಗದ ಜಯನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Related Articles

Back to top button