Kannada NewsLatest

ಪರೀಕ್ಷೆಗೆಂದು ತೆರಳಿದ ಯುವತಿ ನಾಪತ್ತೆ

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ; ಕಾಲೇಜಿಗೆ ಪರೀಕ್ಷೆ ಬರೆಯಲು ಹೋಗುತ್ತೇನೆ ಎಂದು ಹೋದ ಯುವತಿ ನಾಪತ್ತೆಯಾಗಿರುವ ಘಟನೆ ಬೆಳಗಾವಿ ತಾಲೂಕಿನ ಬಂಬರಗಾ ಗ್ರಾಮದಲ್ಲಿ ನಡೆದಿದೆ.

ಅಂಕಿತಾ ರಾನಬಾ ಕೋಲೆ (21) ನಾಪತ್ತೆಯಾಗಿರುವ ಯುವತಿ. ಇದೇ ಫೆ.15ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಬೆಳಗಾವಿ ಮರಾಠಾ ಮಂಡಳ ಕಾಲೇಜಿಗೆ ಪರೀಕ್ಷೆ ಬರೆಯುತ್ತೇನೆ ಎಂದು ಮನೆಯಿಂದ ಹೋದವಳು ಪರೀಕ್ಷೆ ಬರೆಯಲು ಹೋಗದೇ ನಾಪತ್ತೆಯಾಗಿದ್ದಾಳೆ.

Home add -Advt

ಮಗಳು ನಾಪತ್ತೆಯಾಗಿರುವ ಬಗ್ಗೆ ತಂದೆ ರಾನಬಾ ಭಗವಂತ ಕೋಲೆ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಮಾರ್ಕೆಟ್ ಪೊಲೀಸರು ಯುವತಿಯ ಬಗ್ಗೆ ಶೋಧ ಕಾರ್ಯ ಪ್ರಾರಂಬಿಸಿದ್ದಾರೆ.

Related Articles

Back to top button