Latest

ಪರೀಕ್ಷಾ ಮೇಲ್ವಿಚಾರಕನಿಗೆ ಕೊರೋನಾ: ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ ಆತಂಕ

ಪ್ರಗತಿವಾಹಿನಿ ಸುದ್ದಿ, ತುಮಕೂರು – ಎಸ್ಎಸ್ಎಲ್ ಸಿ ಪರೀಕ್ಷೆಯ ಮೇಲ್ವಿಚಾರಕನಿಗೆ ಕೊರೋನಾ ಪಾಸಿಟಿವ್ ಬಂದಿದ್ದು ಪರೀಕ್ಷೆ ಬರೆದಿದ್ದ 130 ವಿದ್ಯಾರ್ಥಿಗಳಲ್ಲಿ ಆತಂಕ ಉಂಟಾಗಿದೆ.

ತುಮಕೂರು ಜಿಲ್ಲೆನ ಪಾವಗಡ ತಾಲೂಕಿನ ಅರಸಿಕೆರೆಯಲ್ಲಿ ಪರೀಕ್ಷೆ ಮೇಲ್ವಿಚಾರಕನಾಗಿ ನೇಮಕವಾಗಿದ್ದ ಶಿಕ್ಷಕ ಕಳೆದ 22ರಂದೆ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿದ್ದ. ಆದರೆ ಈ ವಿಷಯವನ್ನು ಮುಚ್ಚಿಟ್ಟಿದ್ದ.

ಇಂದು ಪರೀಕ್ಷಾ ವರದಿ ಬಂದಿದ್ದು ಪಾಸಿಟಿವ್ ಎಂದು ದೃಢಪಟ್ಟಿದೆ. ಇದೀಗ ಅವರ ಜೊತೆ ಕೆಲಸ ಮಾಡಿದ್ದ 12 ಶಿಕ್ಷಕರು, ಪರೀಕ್ಷೆ ಬರೆದ 130 ವಿದ್ಯಾರ್ಥಿಗಳಲ್ಲದೆ, ಬಿಇಒ ಕೂಡ ಸಂಪರ್ಕಕ್ಕೆ ಬಂದಿದ್ದರು ಎನ್ನಲಾಗುತ್ತಿದೆ.

ಪರೀಕ್ಷಾ ಕೇಂದ್ರವನ್ನು ಸಂಪೂರ್ಣ ಸೇನಿಟೈಸ್ ಮಾಡಲಾಗಿದೆ. ಈಗ ಎಲ್ಲ ಗಂಟಲು ದ್ರವ ಪರೀಕ್ಷೆ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button