Latest

ಒಂದೇ ದಿನ 12 ಸಾವಿರ ಗಡಿ ತಲುಪಿದ ಕೊರೊನಾ ಸೋಂಕು

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೇಶಾದ್ಯಂತ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ವ್ಯಾಪಕವಾಗಿ ಹರಡುತ್ತಿದ್ದೆ. ಕಳೆದ 24 ಗಂಟೆಗಳಲ್ಲಿ ಒಂದೇ ದಿನ ಸುಮಾರು 12 ಸಾವಿರ ಪ್ರಕರಣ ಬೆಳಕಿಗೆ ಬಂದಿದೆ.

ಒಂದೇ ದಿನ 11,929 ಜನರಿಗೆ ಸೋಂಕು ತಗುಲಿದೆ. ಮಹಾರಾಷ್ಟ್ರ ಹಾಗೂ ದೆಹಲಿ ಭಾಗದಲ್ಲಿ ಅತಿ ಹೆಚ್ಚು ಸೋಂಕು ಪತ್ತೆ ಆಗುತ್ತಿವೆ. ಈ ಮೂಲಕ ಕೊರೋನಾ ಪ್ರಕರಣ ಸಂಖ್ಯೆ 3,20,922 ಲಕ್ಷ ಆಗಿದೆ. ಇನ್ನು, ದಿನದಿಂದ ದಿನಕ್ಕೆ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಒಂದೇ ದಿನ 311 ಜನರು ಮೃತಪಟ್ಟಿದ್ದು ಸಾವಿನ ಸಂಖ್ಯೆ 9,

ಸೋಂಕಿನ ಸಂಖ್ಯೆ ಕಡಿಮೆಯಿದ್ದಾಗ ಲಾಕ್ ಡೌನ್ ಜಾರಿಯಲ್ಲಿತ್ತು. ಇದೀಗ ಲಾಕ್ ಡೌನ್ ಸಡಿಲಿಕೆಯಾದ ಬೆನ್ನಲ್ಲೇ ದೇಶದ ಮೂಲೆ ಮೂಲೆಗಳಲ್ಲೂ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಕಳೆದ ತಿಂಗಳು ಇಟಲಿಯಲ್ಲಿ ಕೊರೋನಾ ವೈರಸ್​ ಭಾರೀ ಅಟ್ಟಹಾಸ ಮೆರೆದಿತ್ತು. ಈಗ ಆ ರಾಷ್ಟ್ರವನ್ನೇ ಭಾರತ ಹಿಂದಿಕ್ಕಿ ನಾಲ್ಕನೇ ಸ್ಥಾನದಲ್ಲಿದೆ.

Home add -Advt

Related Articles

Back to top button