Latest

*ಪತಿ-ಪತ್ನಿ ಆತ್ಮಹತ್ಯೆಗೆ ಶರಣು*

ಪ್ರಗತಿವಾಹಿನಿ ಸುದ್ದಿ: ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಾಶಿಪಟ್ನದಲ್ಲಿ ನಡೆದಿದೆ.

ನೋಣಯ್ಯ ಪೂಜಾರಿ (63) ಹಾಗೂ ಪತ್ನಿ ಬೇಬಿ (46) ಆತ್ಮಹತ್ಯೆಗೆ ಶರಣಾದವರು. ಮನೆಯ ಬಳಿಯ ಗುಡ್ಡದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹತ್ತು ವರ್ಷಗಳ ಹಿಂದೆ ನೋಣಯ್ಯ ಪೂಜಾರಿ ಮೊದಲ ಪತ್ನಿ ಸಾವನ್ನಪ್ಪಿದ್ದರು. ಬಳಿಕ ಬೇಬಿ ಎಂಬುವವರನ್ನು ನೋಣಯ್ಯ ಎರಡನೇ ಮದುವೆಯಾಗಿದ್ದರು. ಕಳೆದ 5 ವರ್ಷಗಳಿಂದ ನೋಣಯ್ಯ ಪೂಜಾರಿ ವಿಪರೀತ ತಲೆ ನೋವಿನಿಂದ ಬಳಲುತ್ತಿದ್ದರು. ಪತ್ನಿ ಬೇಬಿಗೆ ಮಕ್ಕಳಿಲ್ಲ ಎಂಬ ಕೊರಗು. ಇದೇ ನೋವಿನಲ್ಲೇ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ವೇಣೂರು ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Related Articles

Back to top button