Kannada NewsKarnataka NewsLatest

ಸಿಎಂಗೆ ಮನವಿ ಸಲ್ಲಿಸಿದ ಸುರೇಶ ಅಂಗಡಿ ಅಳಿಯಂದಿರು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಈಚೆಗೆ ನಿಧನರಾಗಿರುವ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅಳಿಯಂದಿರು ಬೆಂಗಳೂರಿನಲ್ಲಿ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದರು.

ಅಳಿಯಂದಿರಾದ ಡಾ.ರಾಹುಲ್ ಪಾಟೀಲ ಮತ್ತು ಸಂಕಲ್ಪ ಶೆಟ್ಟರ್ ಅವರು ರಾಜ್ಯ ಕೈಗಾರಿಕೆ ಸಚಿವರೂ, ಸುರೇಶ ಅಂಗಡಿಯವರ ಬೀಗರೂ ಆಗಿರುವ ಜಗದೀಶ ಶೆಟ್ಟರ್ ಅವರ ಉಪಸ್ಥಿತಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.

Home add -Advt

ಸುರೇಶ ಅಂಗಡಿ ಹೆಸರಲ್ಲಿ ಸ್ಮಾರಕ ನಿರ್ಮಾಣ ಮಾಡಬೇಕು, ದೆಹಲಿಯ ದ್ವಾರಕಾದಲ್ಲಿರುವ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ಸುರೇಶ ಅಂಗಡಿಯವರ ಅಂತ್ಯಕ್ರಿಯೆ ನಡೆಸಲಾಗಿದ್ದು ಅಲ್ಲಿ ತಡೆಗೊಡೆ ಮತ್ತು ಸಮಾಧಿ ನಿರ್ಮಾಣ ಮಾಡುವಂತೆ ಅವರು ಕೋರಿದರು. ಸಂಬಂಧಿಸಿದವರಿಗೆ ಈ ಕುರಿತು ಸೂಚನೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

 

Related Articles

Back to top button