Latest

*ಶಿವರಾಮ ಕಾರಂತ ಬಡಾವಣೆ ನಿರ್ಮಾಣ ವಿಚಾರ; ಡಿಸಿಎಂ ಮಹತ್ವದ ಸಭೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಬೆಂಗಳೂರಿನ ಶಿವರಾಮ ಕಾರಂತ ಬಡಾವಣೆ ನಿರ್ಮಾಣ ಸಂಬಂಧ ಬಿಡಿಎ ಕೇಂದ್ರ ಕಚೇರಿಯಲ್ಲಿ ಗುರುವಾರ ಸಭೆ ನಡೆಸಿದರು.

ಬಡಾವಣೆ ನಿರ್ಮಾಣ ಸಂಬಂಧ ವಿಚಾರಣೆ ಸಮಿತಿ ಮುಖ್ಯಸ್ಥರಾದ ನಿವೃತ್ತ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್, ಸದಸ್ಯರಾದ ನಿವೃತ್ತ ಬಿಡಿಎ ಕಮಿಷನರ್ ಜೈಕರ್ ಜೈರೋಮ್, ನಿವೃತ್ತ ಡಿಜಿಪಿ ಎಸ್ ಟಿ ರಮೇಶ್, ಬಿಡಿಎ ಅಧ್ಯಕ್ಷ ರಾಕೇಶ್ ಸಿಂಗ್, ಕಮಿಷನರ್ ಕುಮಾರ ನಾಯಕ್ ಭಾಗವಹಿಸಿದ್ದರು.

ಸಭೆ ಬಳಿಕ ಮಾತನಾಡಿದ ಡಿ.ಕೆ.ಶಿವಕುಮಾರ್, ಶಿವರಾಮ ಕಾರಂತ ಲೇಔಟ್ ಕಾಮಗಾರಿ ಮುಂದುವರಿಸಲು ನ್ಯಾಯಮೂರ್ತಿ ನಜೀರ್ ಅವರು ಆದೇಶಿಸಿದ್ದಾರೆ.

ಹೀಗಾಗಿ ಈ ಯೋಜನೆ ಕುರಿತು ನ್ಯಾಯಮೂರ್ತಿಗಳಾದ ಚಂದ್ರಶೇಖರ್, ರಮೇಶ್ ಹಾಗೂ ಬೆಂಗಳೂರು ನಗರಾಭಿೃದ್ಧಿ ಕಾರ್ಯದರ್ಶಿಗಳು, ಬಿಡಿಎ ಮುಖ್ಯಸ್ಥರ ಜೊತೆ ಚರ್ಚೆ ಮಾಡಿದ್ದೇನೆ. ಲೇಔಟ್ ಯೋಜನೆ, ಕಾಮಗಾರಿ ಪ್ರಗತಿ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದರು.

ಈ ಯೋಜನೆಯಲ್ಲಿ ಜಮೀನು ಕಳೆದುಕೊಂಡವರಿಗೆ ಸೂಕ್ತ ಪರಿಹಾರ ಸಿಗಬೇಕು. ಬಿಡಿಎಗೂ ಪ್ರಯೋಜನ ಆಗಬೇಕು ಎಂಬುದು ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ಕೆಲಸ ಆಗುತ್ತಿದೆಯೇ ಇಲ್ಲವೇ ಎಂಬ ಬಗ್ಗೆ ಮಾಹಿತಿ ಪಡೆದಿದ್ದೇನೆ. ಕಂದಾಯ ನಿವೇಶನಕ್ಕೆ ಅರ್ಜಿ ಹಾಕಿರುವ ಬಡವರಿಗೆ ಅನ್ಯಾಯ ಆಗಬಾರದು. ಕಾನೂನು ಚೌಕಟ್ಟಿನಲ್ಲಿ ಎಲ್ಲರ ರಕ್ಷಣೆ ಮಾಡುವ ಬಗ್ಗೆ ಚರ್ಚೆ ಮಾಡಿದ್ದೇವೆ.

ಮಳೆಗಾಲ ಆರಂಭವಾಗುತ್ತಿದ್ದು, ಎಲ್ಲೆಲ್ಲಿ ನೀರು ನಿಲ್ಲುತದೆಯೋ ಅಂತಹ ಅತ್ಯಂತ ಪ್ರಮುಖ ಪ್ರದೇಶಗಳಿಗೆ ಇಂದು ಭೇಟಿ ನೀಡುತ್ತಿದ್ದೇನೆ. ಮಳೆ ಬಂದಾಗ ಸಮಸ್ಯೆ ಎದುರಾದರೆ ಅದನ್ನು ನಿಭಾಯಿಸಲು ಯಾವ ಕಾರ್ಯಯೋಜನೆ ರೂಪಿಸಿದ್ದೀರಿ ಎಂದು ಮಾಹಿತಿ ಪಡೆದಿದ್ದೇನೆ.

ಮಳೆ ಬಂದಾಗ ಸಮಸ್ಯೆ ಉಂಟಾಗಿ ಬೆಂಗಳೂರು ನಗರಕ್ಕೆ ಕೆಟ್ಟ ಹೆಸರು ಬರಬಾರದು ಎಂದು ಆ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ ಎಂದರು.

 

https://pragati.taskdun.com/bdapresidentrakesh-singhstate-govt/

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button