Latest

ಕೊರೊನಾ ಸೋಂಕಿತರ ಬೆಡ್​ಗಳನ್ನು ಮಂತ್ರಿಗಳ ಮನೆಗೆ ಹಾಕಿಕೊಳ್ಳಲಿ

 

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಸೋಂಕಿತರ ಬೆಡ್ ಗಳನ್ನು ರಾಜ್ಯ ಸರ್ಕಾರ ಹಾಸ್ಟೆಲ್ ಗಳಿಗೆ ನೀಡಲು ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಸೋಂಕಿತರ ಬೆಡ್​ಗಳನ್ನು ಮಂತ್ರಿಗಳ ಮನೆಗೆ ಹಾಕಿಕೊಳ್ಳಲಿ. ಮುಖ್ಯಮಂತ್ರಿ ಆರೋಗ್ಯ ಸಚಿವರು ಹಾಕಿಕೊಳ್ಳಲಿ. ಆದರೆ ಮಕ್ಕಳಿಗೆ ಕೊಡುವುದು ಬೇಡ ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ ಶಿವಕುಮಾರ್, 10 ಸಾವಿರ ಹಾಸಿಗೆ ಬಾಡಿಗೆ ಪಡೆಯುತ್ತೇವೆ ಎಂದು ಮುಖ್ಯಮಂತ್ರಿಗಳು ಹೇಳಿದ್ದರು. ಈಗ ನಾವೇ ಖರೀದಿ ಮಾಡ್ತೇವೆ ಅಂದಿದ್ದಾರೆ. ನನ್ನ ಬಳಿ ಅಧಿಕೃತ ದಾಖಲೆ ಇದೆ. ಸೋಂಕಿತರು ಉಪಯೋಗಿಸಿದ ಬೆಡ್​ಗಳನ್ನು ಹಾಸ್ಟೆಲ್​ಗೆ ನೀಡೋದು ಅಂದಿದ್ದಾರೆ. ಇಂತಹ ಐಡಿಯಾಗಳನ್ನು ಸಿಎಂ ಗೆ ಕೊಟ್ಟವರು ಯಾರು ಎಂದು ಪ್ರೆಶ್ನಿಸಿದ್ದಾರೆ.

ಸೋಂಕಿತರ ಶವ ಮುಟ್ಟೋಕೆ ಹೆದರುತ್ತಿದ್ದೀರಾ. ಹೀಗಿರುವಾಗ ಆ ಬೆಡ್​ಗಳ ಮೇಲೆ ಮಕ್ಕಳನ್ನು ಮಲಗಿಸುವುದು ಸರಿನಾ? ಈ ಬೆಡ್​ಗಳನ್ನು ಮಕ್ಕಳಿಗೆ ಕೊಡಬೇಡಿ. ಬೇಕಾದರೇ ಸೋಂಕಿತರ ಬೆಡ್​ಗಳನ್ನು ಮಂತ್ರಿಗಳ ಮನೆಗೆ ಹಾಕಿಕೊಳ್ಳಲಿ. ಮುಖ್ಯಮಂತ್ರಿ ಆರೋಗ್ಯ ಸಚಿವರು ಹಾಕಿಕೊಳ್ಳಲಿ. ಬೇಕಾದರೆ ಶಾಸಕರ ಕ್ವಾಟ್ರಸ್​ಗೆ ಹಾಕಿಕೊಳ್ಳಲಿ ಎಂದು ಗುಡುಗಿದ್ದಾರೆ.

ನಮ್ಮ ಬಳಿ ಎಲ್ಲ ದಾಖಲೆಗಳು ಇವೆ. ಈ ದಾಖಲೆಗಳನ್ನು ನಾವು ಕೊಡುತ್ತೇವೆ. 10 ಸಾವಿರ ಬೆಡ್​ಗಳನ್ನು ಬಾಡಿಗೆ ತೆಗೆದುಕೊಳ್ತಿವಿ ಅಂದಿದ್ರು. ಈಗ ಖರೀದಿಸುತ್ತೇವೆ ಅಂತಿದ್ದಾರೆ. ಬೆಡ್ ಗಳನ್ನು ಹಾಸ್ಟೆಲ್ ಗೆ ಕೊಡುವ ಬಗ್ಗೆ ಅಧಿಕಾರಿಯೊಬ್ಬರ ಸಲಹೆಯಿದೆ ಎಂದು ಆರೋಪಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button