ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ: ರಾಜ್ಯದ ಜನರ ಅಭಿಪ್ರಾಯ ಪಡೆದು, ಅವರ ನೋವು, ಸಮಸ್ಯೆಗಳಿಗೆ ಮುಂದಿನ ದಿನಗಳಲ್ಲಿ ಪರಿಹಾರ ನೀಡುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಮೊದಲ ಹಂತದಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಪ್ರಜಾಧ್ವನಿ ಯಾತ್ರೆ ನಡೆಸುತ್ತಿದೆ. ನಂತರ ನಾನು ಹಾಗೂ ಸಿದ್ಧರಾಮಯ್ಯನವರು ಎರಡು ತಂಡಗಳಾಗಿ ಉತ್ತರ ಹಾಗೂ ದಕ್ಷಿಣ ಭಾಗದ ಜಿಲ್ಲೆಗಳ ವಿಧಾನಸಭಾ ಕ್ಷೇತ್ರ ಭಾಗಗಳಲ್ಲಿ ಪ್ರವಾಸ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ,ಕೆ.ಸಿವಕುಮಾರ್ ತಿಳಿಸಿದರು.
ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿ.ಕೆ.ಶಿವಕುಮಾರ್, ಮಹದಾಯಿ, ಕೃಷ್ಣಾ, ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಸಮಾವೇಶ, ಮಹಿಳೆಯರ ಸಮಾವೇಶವನ್ನು ಮಾಡಿದ್ದೇವೆ. ಬೆಲೆ ಏರಿಕೆಯಿಂದ ರಾಜ್ಯದ ಮಹಿಳೆಯರು ಅನುಭವಿಸುತ್ತಿರುವ ಸಮಸ್ಯೆಗೆ ಪರಿಹಾರ ನೀಡಲು ಅವರಿಂದಲೇ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದು, 9 ಸಾವಿರಕ್ಕೂ ಹೆಚ್ಚು ಮಹಿಳೆಯರು ತಮ್ಮ ಸಲಹೆ ನೀಡಿದ್ದರು. ಅಡುಗೆ ಅನಿಲ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಮಹಿಳೆಯರು ಅನುಭವಿಸುತ್ತಿರುವ ನೋವನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ನೆರವಾಗುವ ಉದ್ದೇಶದಿಂದ ಗೃಹಲಕ್ಷ್ಮೀ ಯೋಜನೆಯನ್ನು ಘೋಷಣೆ ಮಾಡಿದ್ದೇವೆ. ಅಮೂಲಕ ಮನೆಯ ಜವಾಬ್ದಾರಿ ವಹಿಸಿಕೊಂಡಿರುವ ಮಹಿಳೆಯಗೆ ವಾರ್ಷಿಕವಾಗಿ 24 ಸಾವಿರ ನೀಡಲು ಪಕ್ಷ ಕಾರ್ಯಕ್ರಮ ನೀಡಿದೆ. ಇದು ಕಾಂಗ್ರೆಸ್ ಪಕ್ಷದ ಎರಡನೇ ಗ್ಯಾರಂಟಿ ಯೋಜನೆಯಾಗಿದೆ. ಇನ್ನು ಪ್ರತಿ ಮನೆಗೂ 200 ಯುನಿಟ್ ವಿದ್ಯುತ್ ಉಚಿತ ನೀಡುವ ಗ್ರಹಜ್ಯೋತಿ ಕಾಂಗ್ರೆಸ್ ಪಕ್ಷದ ಮೊದಲ ಗ್ಯಾರಂಟಿ ಯೋಜನೆಯಾಗಿದೆ. ಈ ಯೋಜನೆ ಮೂಲಕ ಪ್ರತಿ ಕುಟುಂಬ ಪ್ರತಿ ವರ್ಷ 18 ಸಾವಿರ ರೂ. ಉಳಿತಾಯ ಮಾಡಬಹುದಾಗಿದೆ ಎಂದರು.
ಈ ಸರ್ಕಾರ ಬೆಲೆ ಏರಿಕೆ ನಿಯಂತ್ರಣ ಮಾಡಲು ಸಾಧ್ಯವಾಗಲಿಲ್ಲ, ಜನರ ಆದಾಯ ಡಬಲ್ ಮಾಡಲು ಆಗಲಿಲ್ಲ ಹೀಗಾಗಿ ಈ ಸಮಸ್ಯೆಗಳು ಉದ್ಭವಿಸಿದ್ದು, ಇವುಗಳಿಗೆ ಪರಿಹಾರ ನೀಡಲು ಈ ಯೋಜನೆಗಳನ್ನು ಘೋಷಿಸಲಾಗಿದೆ. ನಾವು ಈ ಹಿಂದೆ ಕೊಟ್ಟ ಮಾತಿನಂತೆ ನಡೆದಿದ್ದೇವೆ. ಈಗಲೂ ಅದೇ ರೀತಿ ಕೊಟ್ಟ ಮಾತಿನಂತೆ ನಡೆಯುತ್ತೇವೆ. ಈ ಯೋಜನೆಗಳ ಜಾರಿ ಬಗ್ಗೆ ಬಿಜೆಪಿ ನಾಯಕರು ಪ್ರಶ್ನೆ ಮಾಡಿದ್ದಾರೆ. ನಾನು ಇಂಧನ ಸಚಿವನಾಗಿದ್ದಾಗ ರಾಜ್ಯದಲ್ಲಿ 10 ಸಾವಿರ ಮೆ.ವ್ಯಾ ವಿದ್ಯುತ್ ಉತ್ಪಾದನೆಯಾಗುತ್ತಿತ್ತು. ನಾನು ಅಧಿಕಾರದಿಂದ ಇಳಿಯುವ ಮುನ್ನ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ 21 ಸಾವಿರ ಮೆ.ವ್ಯಾ ಗೆ ಏರಿಕೆ ಮಾಡಲಾಗಿತ್ತು ಎಂದು ಹೇಳಿದರು.
ಮಾಧ್ಯಮಗಳು ವೇದಿಕೆ ಸಿದ್ಧ ಮಾಡಿದರೆ ಕಂದಾಯ ಸಚಿವ ಅಶೋಕ್ ಅವರ ಜೊತಗಾಗಲಿ, ಇಂಧನ ಸಚಿವ ಸುನೀಲ್ ಕುಮಾರ್ ಅವರ ಜೊತಗಾಗಲಿ ಈ ಯೋಜನೆ ಹೇಗೆ ಜಾರಿ ಮಾಡಲಾಗುವುದು, ಎಲ್ಲಿ ಹಣ ಉಳಿತಾಯ ಮಾಡಿ, ಸಂಪನ್ಮೂಲ ಕ್ರೂಡೀಕರಣಗೊಳಿಸಿ ಸರ್ಕಾರಕ್ಕೆ ಹೊರೆಯಾಗದ ರೀತಿ ಈ ಯೋಜನೆ ಜಾರಿ ಮಾಡಬಹುದು ಎಂಬುದರ ಬಗ್ಗೆ ಚರ್ಚೆಗೆ ಸಿದ್ಧನಿದ್ದೇನೆ ಎಂದರು.
ಪ್ರಶ್ನೋತ್ತರ:
ಪಕ್ಷದ ಟಿಕೆಟ್ ಹಂಚಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ‘2ರಂದು ರಾಜ್ಯ ಚುನಾವಣಾ ಸಮಿತಿ ಬೆಂಗಳೂರಿನಲ್ಲಿ ಸಭೆ ನಡೆಸಲಿದೆ. ಅದಕ್ಕೂ ಮುನ್ನ ಎಲ್ಲ ಜಿಲ್ಲೆಗಳಲ್ಲಿ ಸಭೆ ನಡೆಸಿ ಪರಿಷ್ಕೃತ ಪಟ್ಟಿಯನ್ನು ಸಿದ್ಧಪಡಿಸಸಿ ನೀಡಲು ತಿಳಿಸಿದ್ದೇವೆ’ ಎಂದರು.
ಗುಜರಾತ್ ಮಾದರಿ ಅನ್ವಯವಾಗುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ ಬಿಜೆಪಿಯವರು ಗುಜರಾತ್ ಮಾದರಿ ಮಾಡಬಹುದು. ನಾವು ಕರ್ನಾಟಕ ಮಾದರಿಯನ್ನೇ ಅನುಸರಿಸುತ್ತೇವೆ, ನಮಗೆ ನಮ್ಮ ಮಾದರಿಯೇ ಸಾಕು’ ಎಂದರು.
ನಿಮ್ಮ ಪಕ್ಷದಲ್ಲಿ ಯಾರಿಗಾದರೂ 2 ಕ್ಷೇತ್ರದಲ್ಲಿ ಸ್ಪರ್ಧಿಸುವ ಅವಕಾಶವಿದೆಯೇ ಎಂದು ಕೇಳಿದಾಗ, ‘ಸಿದ್ದರಾಮಯ್ಯನವರು ಇತ್ತೀಚೆಗೆ ಬಹಿರಂಗವಾಗಿ ಒಂದು ಕಡೆ ಸ್ಪರ್ಧಿಸುವುದಾಗಿ ಹೇಳಿದ್ದು, ಅರ್ಜಿ ಹಾಕಿದ್ದಾರೆ. ಈ ವಿಚಾರವಾಗಿ ಪಕ್ಷ ತೀರ್ಮಾನ ಕೈಗೊಳ್ಳಲಿದೆ’ ಎಂದು ತಿಳಿಸಿದರು.
ಕೃಷ್ಣಾ ನದಿ ನೀರು ವಿಚಾರವಾಗಿ ‘ರಾಜ್ಯದಲ್ಲಿ ಎಲ್ಲ ನೀರಾವರಿ ಯೋಜನ ಜಾರಿ ಮಾಡಲು ಐದು ವರ್ಷಗಳಲ್ಲಿ 2 ಲಕ್ಷ ಕೋಟಿ ಹಣ ನೀಡುವುದಾಗಿ ನಾವು ಘೋಷಣೆ ಮಾಡಿದ್ದೇವೆ. ದೊಡ್ಡ ನೀರಾವರಿ, ಸಣ್ಣ ನೀರಾವರಿ ಯೋಜನೆಗಳನ್ನು ನಾವು ಪೂರ್ಣಗೊಳಿಸುತ್ತೇವೆ’ ಎಂದರು.
ಪ್ರಧಾನಿ ಮೋದಿ ಅವರು ರಾಜ್ಯ ಪ್ರವಾಸ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಅಮಿತ್ ಶಾ ಅವರು ಬಹಿರಂಗವಾಗಿ ಈಗಾಗಲೆ ಹೇಳಿದ್ದಾರೆ. ಅವರು ಮುಂಬರುವ ಚುನಾವಣೆಯನ್ನು ರಾಜ್ಯದ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಎದುರಿಸುವುದಿಲ್ಲ. ಮೋದಿ ಅವರ ನೇತೃತ್ವದಲ್ಲಿ ಚುನಾವಣೆ ಮಾಡುವುದಾಗಿ ತಿಳಿಸಿದ್ದಾರೆ. ಅಲ್ಲಿಗೆ ರಾಜ್ಯದಲ್ಲಿ ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಅವರ ಹೇಳಿಕೆ ಸ್ಪಷ್ಟಪಡಿಸುತ್ತಿದೆ. ರಾಜ್ಯ ನಡೆಸುತ್ತಿರುವ ಬೊಮ್ಮಾಯಿ ಅವರು ವಿಫಲರಾಗಿರುವುದಕ್ಕೆ ಅವರು ಪ್ರಧಾನಿಗಳ ಹೆಸರನ್ನು ಹೇಳುತ್ತಿದ್ದಾರೆ. ಡಬಲ್ ಇಂಜಿನ್ ಸರ್ಕಾರವನ್ನು ಅವರಿಂದ ನಡೆಸಲು ಆಗಿಲ್ಲ. ಈಗ ಅವರು ಮುಖ್ಯಮಂತ್ರಿ ಬಿಟ್ಟು ರಾಷ್ಟ್ರ ನಾಯಕರನ್ನು ಮುಂದೆ ಬಿಡುತ್ತಿದ್ದಾರೆ’ ಎಂದು ತಿಳಿಸಿದರು.
ಮೀಸಲಾತಿ ವಿಚಾರ ಚುನಾವಣೆ ಮೇಲೆ ಪ್ರಭಾವ ಬೀರಲಿದೆಯೇ ಎಂಬ ಪ್ರಶ್ನೆಗೆ, ‘ಖಂಡಿತವಾಗಿಯೂ ಬೀರುತ್ತದೆ. ಈ ಮೀಸಲಾತಿ ವಿಚಾರದವನ್ನು ಬಿಜೆಪಿ ಗೊಂದಲದ ಗೂಡು ಮಾಡಿದ್ದಾರೆ. ಮೃತ್ಯುಂಜಿಯ ಸ್ವಾಮೀಜಿಗಳು ಈಗಾಗಲೇ ಸರ್ಕಾರ ಈ ವಿಚಾರದಲ್ಲಿ ತಲೆ ಮೇಲೆ ತುಪ್ಪ ಸವರಿದ್ದಾರೆ ಎಂದು ಸರ್ಕಾರದ ನಿಲುವನ್ನು ತಿರಸ್ಕರಿಸಿದ್ದಾರೆ. ಈಗ ಅವರೇ ಬೇರೆಯವರಿಂದ ನ್ಯಾಯಾಲಯದ ಮೆಟ್ಟಿಲೇರುವಂತೆ ಮಾಡಿಸಿದ್ದಾರೆ. ಸುಪ್ರೀಂ ಕೋರ್ಟ್ ಆರಥಿಕ ಹಿಂದುಳಿದವರಿಗೆ ನೀಡಲಾಗಿರುವ ಮೀಸಲಾತಿಯನ್ನು ಸ್ಪಷ್ಟಪಡಿಸಿದ್ದು, ಸರ್ಕಾರ ಅದನ್ನು ಮುಟ್ಟಲು ಸಾಧ್ಯವಿಲ್ಲ. ಕಾನೂನು ಚೌಕಟ್ಟಿನಲ್ಲಿ ಆಗದಿರುವ ನಿರ್ಣಯವನ್ನು ತೆಗೆದುಕೊಂಡಿದ್ದಾರೆ. ಅವರು ಮೀಸಲಾತಿ ನೀಡಿದ್ದರ ಸ್ವಾಮೀಜಿಗಳು ಯಾಕ ಧರಣಿ ಕೂರುತ್ತಿದ್ದರು. ಆ ಸಮಾಜ ಸರ್ಕಾರವನ್ನು ದಿಕ್ಕರಿಸುತ್ತಿರುವುದು ಏಕೆ? ಪರಿಸಿಷ್ಠರ ಮೀಸಲಾತಿ ವಿಚಾರದಲ್ಲೂ ಅವರಿಗೆ ಸರಿಯಾದ ಆಸಕ್ತಿ ಇದ್ದಿದ್ದರೆ, ಸಂಪುಟ ಸಭೆಯಲ್ಲಿ ಅದನ್ನು ಅನುಮೋದನೆ ನೀಡಿ, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಸಂಸತ್ತಿನಲ್ಲಿ ಸಂವಿಧಾನಕ್ಕೆ ತಿಂದ್ದುಪಡಿ ತಂದು 9ನೇ ಶೆಡ್ಯುಲ್ ಗೆ ಸೇರಿಸಬೇಕಾಗಿತ್ತು, ಸಂಸತ್ತಿನಲ್ಲಿ ಕೇಂದ್ರ ಸಚಿವರು ಕೇಂದ್ರದ ಮುಂದೆ ಮೀಸಲಾತಿ ಹೆಚ್ಚಿಸುವ ಪ್ರಸ್ತಾವನೆ ಇಲ್ಲ ಎಂದು ಹೇಳಿದ್ದಾರೆ’ ಎಂದರು.
ನೀವು ಮೀಸಲಾತಿ ಗೊಂದಲ ಬಗೆಹರಿಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ, “ನಾವು ನುಡಿದಂತೆ ನಡೆಯುತ್ತೇವ. ನಮ್ಮ ಮೇಲೆ ವಿಶ್ವಾಸ ಇಡಲಿ’ ಎಂದರು.
ಪಂಚಮಸಾಲಿ ಮೀಸಲಾತಿಗೆ ಕಾಂಗ್ರೆಸ್ ನವರೇ ಪರೋಕ್ಷವಾಗಿ ಅಡ್ಡಿ ಮಾಡುತ್ತಿದ್ದಾರೆ ಎಂಬ ಆರೋಪದ ಬಗ್ಗೆ ಕೇಳಿದಾಗ, ‘ಪಂಚಮಸಾಲಿ ಹೊಸ ಮಠ ಸ್ಥಾಪನೆಗೆ ಅನುದಾನ ಕೊಟ್ಟಿದ್ದು ಯಾರು? ಧರ್ಮ, ಸಮಾಜ ಉಳಿಯಲು ಅವರು ಮಠ ಕಟ್ಟಲಿ, ನಾವು ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ನಾವು ಎಲ್ಲರನ್ನು ಒಟ್ಟುಗೂಡಿಸಿ, ಒಟ್ಟಿಗೆ ತೆಗೆದುಕೊಂಡು ಹೋಗಬೇಕು. ಜನಸಂಖ್ಯೆ ಆಧಾರದ ಮೇಲೆ ಎಲ್ಲ ಸಮಾಜದವರಿಗೆ ನ್ಯಾಯ ಸಿಗಬೇಕು ಎಂದು ಪ್ರತಿಪಾದಿಸುತ್ತದೆ’ ಎಂದು ತಿಳಿಸಿದರು.
ಎಸ್.ಆರ್ ಪಾಟೀಲ್ ಅವರ ಬಗ್ಗೆ ಕೇಳಿದ ಪ್ರಶ್ನೆಗೆ, ಎಸ್.ಆರ್. ಪಾಟೀಲ್ ಅವರು ಹಿರಿಯ ನಾಯಕರು, ಅವರ ಗೌರವಕ್ಕೆ ಧಕ್ಕೆಯಾಗದಂತೆ, ಅವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ’ ಎಂದು ತಿಳಿಸಿದರು.
*ಬೆಳಗಾವಿ ಮೂಲದ ಆರೋಗ್ಯಾಧಿಕಾರಿ ಆತ್ಮಹತ್ಯೆ; ಕಾರಣವೇನು?*
https://pragati.taskdun.com/health-officersuicideabalaganahallikolara/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ