Latest

ಮಹಿಳೆಯರ ಸಾಗಾಟ ಪ್ರಕರಣಕ್ಕೆ ಸ್ಫೋಟಕ ತಿರುವು

ಪ್ರಗತಿವಹಾಹಿನಿ ಸುದ್ದಿ; ಮಂಗಳೂರು: ಲಸಿಕೆ ಕೊಡಿಸುವುದಾಗಿ ಹೇಳಿ ರಾತ್ರೋರಾತ್ರಿ 85 ಮಹಿಳೆಯರ ಸಾಗಾಟ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದ್ದು, ರೋಗಿಗಳಂತೆ ನಾಟಕವಾಡಲೆಂದು ಮಹಿಳೆಯರನ್ನು ಕರೆದೊಯ್ಯಲಾಗಿತ್ತು ಎಂಬ ವಿಚಾರ ಬಹಿರಂಗವಾಗಿದೆ. ಈ ಮೂಲಕ ಕನಚೂರ್ ಮೆಡಿಕಲ್ ಸೈನ್ಸ್ ಕಾಲೇಜಿನ ಹಣ ಮಾಡುವ ದಂಧೆ ಬಯಲಾಗಿದೆ.

ಆಸ್ಪತ್ರೆಯಲ್ಲಿ ಖಾಲಿ ಇರುವ ಬೆಡ್ ಗಳನ್ನು ಭರ್ತಿ ಮಾಡಲು ನಕಲಿ ರೋಗಿಗಳನ್ನು ಸಿದ್ಧ ಮಾಡಲೆಂದು ಒಬ್ಬರಿಗೆ ಇಂತಿಷ್ಟು ಹಣ ನೀಡಿ ರಾತ್ರೋ ರಾತ್ರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಮಹಿಳೆಯರನ್ನು ಕರೆದೊಯ್ಯಲಾಗಿತ್ತು. ಎನ್ ಎಂಸಿ ಪರಿಶೀಲನೆಗೆ ಬಂದಾಗ ಇವರು ರೋಗಿಗಳೆಂದು ತೋರಿಸಲು ನಕಲಿ ರೋಗಿಗಳನ್ನು ಸೃಷ್ಟಿಸಲೆಂದು ಪ್ಲಾನ್ ಮಾಡಲಾಗಿತ್ತು ಎಂದು ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.

Home add -Advt

ಪ್ರಕರಣ ಸಂಬಂಧ ಆಸ್ಪತ್ರೆ ಮ್ಯಾನೇಜರ್ ನವಾಜ್ ಹಾಗೂ ಚಾಲಕ ಪ್ರವೀಣ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರೆಸಲಾಗಿದೆ.
ಲಸಿಕೆ ಕೊಡಿಸುವುದಾಗಿ ಹೇಳಿ 85 ಮಹಿಳೆಯರ ಸಾಗಾಟ

Related Articles

Back to top button