National

*ತನ್ನ ಅಪ್ರಾಪ್ತ ಮಗಳ ಮೇಲೆಯೇ ಅತ್ಯಾಚರ ನಡೆಸಲು ಗೆಳೆಯನಿಗೆ ತಾಯಿ ಕುಮ್ಮಕ್ಕು: ಬಿಜೆಪಿ ನಾಯಕಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಇದೆಂತಹ ಹೇಯ ಕೃತ್ಯ… ಹೆತ್ತ ತಾಯಿಯೇ ತನ್ನ ಅಪ್ರಾಪ್ತ ಮಗಳ ಮೇಲೆ ತನ್ನ ಗೆಳೆಯ ಹಾಗೂ ಆತನ ಸ್ನೇಹಿತರು ಅತ್ಯಾಚರ ನಡೆಸಲು ಕುಮ್ಮಕ್ಕು ನೀಡಿ, ಕೃತ್ಯವೆಸಗಿರುವ ಘಟನೆ ಬೆಳಕಿಗೆ ಬಂದಿದೆ.

ಪ್ರಪಂಚದಲ್ಲಿ ಕೆಟ್ಟ ಮಕ್ಕಳಿರುತ್ತಾರೆ ಆದರೆ ಕೆಟ್ಟ ತಾಯಿ ಇರಲ್ಲ ಎಂಬ ಮಾತಿಗೆ ಈ ಘಟನೆ ಅಪವಾದವಾಗಿದೆ. ಹೆತ್ತ ತಾಯಿಯೇ ತನ್ನ 13 ವರ್ಷದ ಅಪ್ರಾಪ್ತ ಮಗಳ ಮೇಲೆ ತನ್ನ ಬಾಯ್ ಫ್ರೆಂಡ್ ಹಾಗೂ ಆತನ ಸ್ನೇಹಿತ ಅತ್ಯಾಚಾರವೆಸಗುವಂತೆ ಮಾಡಿದ್ದಾಳೆ. ಉತ್ತರಾಅಖಂಡದ ಹರಿದ್ವಾರದಲ್ಲಿ ಈ ಘಟನೆ ನಡೆದಿದೆ.

Home add -Advt

ಹರಿದ್ವಾರದ ಬಿಜೆಪಿ ಮಹಿಳಾ ಮೋರ್ಚಾ ಮಾಜಿ ಅಧ್ಯಕ್ಷೆ ಅನಾಮಿಕಾ ಶರ್ಮಾ ತನ್ನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಮಾಡಿಸಿದ್ದಾಳೆ. ಅನಾಮಿಕಾ ಶರ್ಮಾಳ ಬಾಯ್ ಫ್ರೆಂಡ್ ಸುಮಿತ್ ಪತ್ವಾಲ್ ಹಾಗೂ ಆತನ ಸ್ನೇಹಿತ ಶುಭಂನಿಂದ ಈ ಕೃತ್ಯ ಮಾಡಿಸಿದ್ದಾಳೆ.

ಅನಾಮಿಕಾ ಶರ್ಮಾ 2024ರಲ್ಲಿ ತನ್ನ ಪತಿಯಿಂದ ದೂರಾಗಿದ್ದಳು. ಮಗಳು ತಂದೆಯ ಜೊತೆ ವಾಸವಾಗಿದ್ದಳು. ಆದರೆ ಆಗಾಗ ತಾಯಿಯನ್ನು ಭೇಟಿಯಾಗುತ್ತಿದ್ದಳು. ಪತಿಯಿಂದ ದೂರ ಉಳಿದಿದ್ದ ಅನಾಮಿಕಾ, ಸುಮಿತ್ ಎಂಬಾತನ ಸ್ನೇಹ ಬೆಳೆಸಿ, ಆತನ ಹೋಟೆಲ್ ನಲ್ಲಿಯೇ ತಂಗಿದ್ದಳು. ತಾಯಿ ಭೇಟಿಗೆಂದು ಮಗಳು ಬಂದಾಗ ಅನಾಮಿಕಾ ಆಕೆಯನ್ನು ಹೊರಗೆ ಕರೆದುಕೊಂಡು ಹೋಗುವ ನೆಪದಲ್ಲಿ ಬೃಂದಾವನ, ಹರಿದ್ವಾರ, ಆಗ್ರಾದಲ್ಲಿ ಸುತ್ತಾಟ ನಡೆಸಿದ್ದಾಳೆ. ಹೀಗೆ ಕರೆದುಕೊಂಡು ಹೋದಾಗ ತನ್ನ ಬಾಯ್ ಫೆಂಡ್ ಸುಮಿತ್ ಹಾಗೂ ಆತನ ಸ್ನೇಹಿತ ಶುಭಂ ನಿಂದ ಮಗಳ ಮೇಲೆ ಅತ್ಯಾಚಾರ ನಡೆಸಲು ಕುಮ್ಮಕ್ಕು ನೀಡಿ ಅತ್ಯಾಚಾರವೆಸಗಿಸಿದ್ದಾಳೆ.

ಮಗಳಿಗೆ ತಂದೆಯ ಬಳಿ ಬಾಯ್ಬಿಡದಂತೆ ಬೆದರಿಕೆ ಹಾಕಿದ್ದಾಳೆ. ಕಳೆದ ಮಂಗಳವಾರವೂ ಬಾಲಕಿ ಮೇಲೆ ತಾಯಿಯ ಗೆಳೆಯ ಅಟ್ಟಹಾಸ ಮೆರೆದಿದ್ದು, ಈ ಬಗ್ಗೆ ಬಾಲಕಿ ತನ್ನ ತಂದೆಯ ಬಳಿ ಹೇಳಿಕೊಂಡಿದ್ದಾಳೆ. ತಕ್ಷಣ ಸಂತ್ರಸ್ತ ಬಾಲಕಿ ತಂದೆ ಪೊಲಿಸರಿಗೆ ದೂರು ನೀಡಿದ್ದಾರೆ.

ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಾಲಕಿ ತಾಯಿ ಅನಾಮಿಕಾ ಶರ್ಮಾ, ಆಕೆಯ ಗೆಳೆಯ ಸುಮಿತ್ ಹಾಗೂ ಶುಭಂ ನನ್ನು ಬಂಧಿಸಿದ್ದಾರೆ.

Related Articles

Back to top button