
ಪ್ರಗತಿವಾಹಿನಿ ಸುದ್ದಿ: ಪತಿಯ ಬಗ್ಗೆ ಪತ್ನಿಗೆ ವಿವಾಹೇತರ ಸಂಬಂಧದ ಬಗ್ಗೆ ಅನುಮಾನವಿದ್ದರೆ ಪತಿಯ ಕರೆ ದತ್ತಾಂಶ, ಸ್ಥಳ ದತ್ತಾಂಶ ಕೇಳಬಹುದು ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ವ್ಯಭಿಚಾರದ ಆರೋಪಗಳನ್ನು ದೃಢೀಕರಿಸಲು ಪತ್ನಿಯು ತನ್ನ ಪತಿ ಮತ್ತು ಆತನ ಆಪಾದಿತ ಪ್ರೇಯಿಸಿಯ ಕರೆ ದತ್ತಾಂಶ ದಾಖಲೆಗಳು ಮತ್ತು ಸ್ಥಳ ವಿವರಗಳನ್ನು ಸಂರಕ್ಷಿಸಿ ಬಹಿರಂಗಪಡಿಸಬಹುದು ಎಂದು ದೆಹಲಿ ಹೈಕೋರ್ಟ್ ತಿಳಿಸಿದೆ.
ಇದು ಪ್ರತಿಪ್ರಕ್ರಿಯೆಯಲ್ಲಿ ಸಹಾಯ ಮಾಡುವ ವಸ್ತುನಿಷ್ಠ ದಾಖಲೆಗಳಾಗಿವೆ ಎಂದು ನ್ಯಾಯಾಲಯ ತಿಳಿಸಿದೆ. ಕುಟುಂಬ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪತಿ ಮತ್ತು ಆಪಾದಿತ ಪ್ರೇಯಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ.