Latest

ಗಾಯಾಳು ಪೊಲೀಸರನ್ನು ಭೇಟಿಯಾಗಿ ಧೈರ್ಯ ತುಂಬಿದ ಅಮಿತ್ ಶಾ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್ ರ್ಯಾಲಿ ವೇಳೆ ನಡೆದ ಹಿಂಸಾಚಾರ ಪ್ರಕರಣದಲ್ಲಿ ಗಾಯಗೊಂಡಿದ್ದ ಪೊಲೀಸ್ ಸಿಬ್ಬಂದಿಯನ್ನು ಭೆಟಿಯಾದ ಗೃಹ ಸಚಿವ ಅಮ್ಮಿತ್ ಶಾ, ಆರೋಗ್ಯ ವಿಚಾರಿಸಿದ್ದಾರೆ.

ಹಿಂಸಾಚಾರದಲ್ಲಿ 400 ಪೊಲೀಸರು ಗಾಯಗೊಂಡಿದ್ದು, ಅವರನ್ನು ಸುಶ್ರುತಾ ಮತ್ತು ತೀರ್ಥ ರಾಮ್ ಶಾ, ಸಿವಿಲ್ ಲೈನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಆಸ್ಪತ್ರೆಗೆ ಭೇಟಿ ನೀಡಿರುವ ಅಮಿತ್ ಶಾ ಗಾಯಾಳು ಪೊಲೀಸ್ ಸಿಬ್ಬಂದಿಗೆ ಧೈರ್ಯ ತುಂಬಿದ್ದಾರೆ.

Home add -Advt

ಈ ನಡುವೆ ಹಿಂಸಾಚಾರ ಪ್ರಕರಣ ಸಂಬಮ್ಧ 19 ಜನರನ್ನು ಬಂಧಿಸಲಾಗಿದ್ದು, 25 ಪ್ರಕರಣ ದಾಖಲಿಸಲಾಗಿದೆ. 37 ರೈತ ಮುಖಂಡರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.

 

Related Articles

Back to top button