Latest

ಹೆಚ್.ವಿಶ್ವನಾಥ್ ಮಂತ್ರಿ ಕನಸು ನುಚ್ಚುನೂರು

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಎಂಎಲ್ ಸಿ ಹೆಚ್.ವಿಶ್ವನಾಥ್ ಅವರ ಸಚಿವರಾಗುವ ಕನಸು ನುಚ್ಚು ನೂರಾಗಿದೆ. ಅನರ್ಹತೆ ಪ್ರಕರಣ ಸಂಬಂಧ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದ್ದು, ಹೆಚ್.ವಿಶ್ವನಾಥ್ ಗೆ ಭಾರೀ ಹಿನ್ನಡೆಯಾಗಿದೆ.

ನಾಮನಿರ್ದೇಶನದ ಆಧಾರದ ಮೇಲೆ ಸಚಿವರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಈ ಹಿಂದೆ ಹೈಕೋರ್ಟ್ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಹೆಚ್.ವಿಶ್ವನಾಥ್ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಇದೀಗ ಹೈಕೋರ್ಟ್ ಆದೇಶ ಎತ್ತಿ ಹಿಡಿದಿದ್ದು, ಪರಿಷತ್ ಗೆ ನಾಮನಿರ್ದೇಶನ ಆಧಾರದಲ್ಲಿ ಸಚಿವ ಸ್ಥಾನ ನಿಡಲಾಗದು ಎಂದಿದೆ.

Home add -Advt

ರಾಜ್ಯ ಸರ್ಕಾರ ಸಾಹಿತ್ಯ ಕೋಟಾದಡಿಯಲ್ಲಿ ಹೆಚ್.ವಿಶ್ವನಾತ್ನವರನ್ನು ವಿಧಾನ ಪರಿಷತ್ ಗೆ ನಾಮನಿರ್ದೇಶನ ಮಾಡಿತ್ತು. ಈ ಹಿನ್ನೆಲೆಯಲ್ಲಿ ವಿಶ್ವನಾಥ್ ಸಚಿವರಾಗಲು ಯತ್ನಿಸಿದ್ದರು. ಆದರೆ ಇದೀಗ ವಿಶ್ವನಾಥ್ ಗೆ ಹಿನ್ನಡೆಯಾಗಿದೆ.

Related Articles

Back to top button