
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಹಿರಿಯ ಸಂಶೋಧಕ, ಸಾಹಿತಿ, ಕನ್ನಡ ತಜ್ಞ ಡಾ.ಎಂ.ಚಿದಾನಂದ ಮೂರ್ತಿ ಇಂದು ಬೆಳಗಿನಜಾವ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.
ನೇರ ಮಾತಿನಿಂದ ಪ್ರಸಿದ್ಧರಾಗಿದ್ದ ಚಿದಾನಂದಮೂರ್ತಿ ಕನ್ನಡ ಭಾಷೆ, ಕನ್ನಡ ನಾಡಿನ ಉಳಿವಿಗಾಗಿ ದೊಡ್ಡ ಕೊಡುಗೆ ನೀಡಿದ್ದರು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಸಿಗಲು ದೊಡ್ಡ ಕೊಡುಗೆ ನೀಡಿದ್ದರು. ಇತಿಹಾಸ, ಸಾಹಿತ್ಯ ಕ್ಷೇತ್ರದಲ್ಲಿ ಮೌಲಿಕ ಕೊಡುಗೆ ನೀಡಿದ್ದರು.
ಕರ್ನಾಟಕದ ಮೂಲೆ ಮೂಲೆಯ ಇತಿಹಾಸವನ್ನು ಅಧ್ಯಯನ ಮಾಡಿದ್ದರು. ಒಂದರ್ಥದಲ್ಲಿ ನಡೆದಾಡುವ ಜ್ಞಾನಕೋಶದಂತಿದ್ದರು.
ಮುಖ್ಯಮಂತ್ರಿ ಯಡಿಯೂರಪ್ಪ, ಶಿಕ್ಷಣ ಸಚಿವ ಸುರೇಶ ಕುಮಾರ, ವಸತಿ ಸಚಿವ ಸೋಮಣ್ಣ ಮೊದಲಾದವರು ಚಿದಾನಂದ ಮೂರ್ತಿ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ