Kannada NewsKarnataka News

ಮಾನಸಿಕ ಅಸ್ವಸ್ಥ ಮಹಿಳೆಯ ನೆರವಿಗೆ ನಿಂತ ಸೋನಾಲಿ ಸರ್ನೋಬತ್

ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಉದ್ಯಮಭಾಗ್‍ನ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲು ಬಿಜೆಪಿ ಗ್ರಾಮೀಣ ಉಪಾಧ್ಯಕ್ಷೆ ಡಾ. ಸೋನಾಲಿ ಸರ್ನೋಬತ್ ನೆರವಾಗಿದ್ದಾರೆ.

ಮಹಿಳೆ ಉದ್ಯಮಭಾಗ್‍ನ ಅಂಡಿಗಳ ಕಟ್ಟೆಯ ಮೇಲೆಯೇ ರಾತ್ರಿ ಹೊತ್ತು ತಂಗುತ್ತಿದ್ದಳು. ಇದನ್ನು ಗಮನಿಸಿದ ಫೇಸ್‍ಬುಕ್ ಗೆಳೆಯರ ಬಳಗ ಡಾ. ಸೋನಾಲಿ ಸರ್ನೋಬತ್ ಅವರಿಗೆ ಮಾಹಿತಿ ನೀಡಿದರು.

Home add -Advt

ಬಳಿಕ ಡಾ. ಸೋನಾಲಿ ಅವರು ಉದ್ಯಮಭಾಗ್‍ನ ಸಿಪಿಐ ಆರ್. ಎಸ್. ಬಿರಾದಾರ್, ಸಿಬ್ಬಂದಿಯಾದ ಅಕ್ಷಯ ನಾಯ್ಕ ಹಾಗೂ ಶಾರದಾ ಮತ್ತು ಫೇಸ್‍ಬುಕ್ ಫ್ರೆಂಡ್ಸ್ ಬಳಗದವರಾದ ಸಂತೋಷ ದರೇಕರ್, ಅವಧೂತ ತುದ್ವೇಕರ್, ಸೌರಭ್ ಸಾವಂತ್, ವಿವೇಕ ಮಹಾಂತಶೆಟ್ಟಿ ಮೊದಲಾದವರ ಸಹಕಾರದೊಂದಿಗೆ ಮಹಿಳೆಯನ್ನು ಚಿಕಿತ್ಸೆಗಾಗಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿದರು.

ಡಾ. ಸೋನಾಲಿ ಮತ್ತು ಫೇಸ್‍ಬುಕ್ ಗೆಳೆಯರ ಬಳಗದ ಕಾರ್ಯವನ್ನು ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

*ಮೆಟ್ರೊ ಕಾಮಗಾರಿ ಪಿಲ್ಲರ್ ದುರಂತ: ಸಿಎಂ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ*

https://pragati.taskdun.com/metro-piller-tragidymotherson-deathcm-basavaraj-bommai20-lakh-announce/

 

Related Articles

Back to top button