ಪ್ರಗತಿವಾಹಿನಿ ಸುದ್ದಿ, ಢಾಕಾ (ಬಾಂಗ್ಲಾದೇಶ್):
ಭಾನುವಾರ ಮಧ್ಯಾಹ್ನ ಬಾಂಗ್ಲಾದೇಶದಲ್ಲಿ ವಿಮಾನ ಹೈಜಾಕ್ ಗೆ ಯತ್ನಿಸಿದ ವ್ಯಕ್ತಿಯನ್ನು ಗುಂಡಿಟ್ಟು ಕೊಲ್ಲಲಾಗಿದೆ. ಆತನ ಬಳಿ ಆಟಿಕೆ ಪಿಸ್ತೂಲು ಇತ್ತು. ಅದನ್ನು ಹೊರತುಪಡಿಸಿದರೆ ಯಾವುದೇ ಸ್ಫೋಟಕಗಳು ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಆತನಿಗೆ ಮಾನಸಿಕ ಸ್ಥಿಮಿತ ಇರಲಿಲ್ಲ. ಮಾಹಿತಿ ಪ್ರಕಾರ ಪತ್ನಿ ಜತೆಗೆ ವೈಯಕ್ತಿಕ ಸಮಸ್ಯೆಗಳಿದ್ದವು.
ಬಾಂಗ್ಲಾದೇಶ್ ವಿಮಾನದ ಕಾಕ್ ಪಿಟ್ ನೊಳಗೆ ಪ್ರವೇಶಿಸಲು ಯತ್ನಿಸಿದ ಪ್ರಯಾಣಿಕನ ಮೇಲೆ ಬಾಂಗ್ಲಾದೇಶಿ ಕಮ್ಯಾಂಡೋಗಳು ಭಾನುವಾರ ಗುಂಡು ಹಾರಿಸಿದ್ದಾರೆ.
ಆ ವಿಮಾನ ಬಾಂಗ್ಲಾದಿಂದ ದುಬೈಗೆ ತೆರಳುತ್ತಿತ್ತು. ಪತ್ನಿಯ ಜತೆಗೆ ವೈಯಕ್ತಿಕ ಸಮಸ್ಯೆ ಇದ್ದ ಆ ಪ್ರಯಾಣಿಕ, ಬಾಂಗ್ಲಾದೇಶ್ ಪ್ರಧಾನಿ ಶೇಖ್ ಹಸೀನಾರ ಜತೆ ಮಾತನಾಡಬೇಕು ಎಂದಿದ್ದಾನೆ. ಚಿತ್ತಗಾಂಗ್ ನ ಶಾ ಅಮಾನತ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನದೊಳಗೆ ಆತನ ಮೇಲೆ ಕಮ್ಯಾಂಡೋಗಳು ಗುಂಡು ಹಾರಿಸಿದ್ದರು. ಗಾಯಗಳಿಂದ ಆತ ಸಾವನ್ನಪ್ಪಿದ್ದಾನೆ.
ಬಾಂಗ್ಲಾ ವಿಮಾನ ಹೈಜಾಕ್ ಯತ್ನ